ಶಿಕ್ಷಕರಿಗೆ ಆಹಾರ ಒದಗಿಸುತ್ತಿರುವ ಸವಮ್ಮ ಈರಪ್ಪ ಹೊಂಗಲ್ 
ರಾಜ್ಯ

ಶಿಕ್ಷಕರಿಗೆ ಊಟ ಉಪಚಾರ ನೀಡಿ ಖುಷಿ ಕಾಣುತ್ತಿರುವ ಅಜ್ಜಿ ಸವಮ್ಮ

ಸೇವೆ ಯಾವ ರೂಪದಲ್ಲಿಯಾದರೂ ಮಾಡಬಹುದು. ಇಲ್ಲೊಬ್ಬ ಇಳಿವಯಸ್ಸಿನ ಅಜ್ಜಿ ಮಾಡುತ್ತಿರುವ ...

ಜೀರಿಗಿವಾಡ, ಧಾರವಾಡ: ಸೇವೆ ಯಾವ ರೂಪದಲ್ಲಿಯಾದರೂ ಮಾಡಬಹುದು. ಇಲ್ಲೊಬ್ಬ ಇಳಿವಯಸ್ಸಿನ ಅಜ್ಜಿ ಮಾಡುತ್ತಿರುವ ಸೇವೆ ಕಂಡರೆ ಯಾರಿಗಾದರೂ ಅಕ್ಕರೆ, ಬೆರಗು ಮೂಡದೆ ಇರಲಾರದು. ಶಾಲೆಯೊಂದರ ಅಧ್ಯಾಪಕರಿಗೆ ಆಹಾರ ನೀಡಲು ಪ್ರಾರಂಭಿಸಿದ ಅಜ್ಜಿ ಇಂದು 30 ಶಿಕ್ಷಕ-ಶಿಕ್ಷಕಿಯರಿಗೆ ಅನ್ನ ನೀಡುತ್ತಿದ್ದಾರೆ.
86 ವರ್ಷದ ಸವಮ್ಮ ಈರಪ್ಪ ಹೊಂಗಲ್ ಯಾವತ್ತಿಗೂ ಅಡುಗೆ ಮಾಡಿ ಬಡಿಸುವುದು ಬೇಸರ ಮತ್ತು ಸುಸ್ತು ಆಗಿ ಕಾಡಲೇ ಇಲ್ಲವಂತೆ. ಕಳೆದ ಮೂರು ದಶಕಗಳಿಂದ ಸವಮ್ಮ ಧಾರವಾಡದ ಜೀರ್ಗಿವಾಡ ಗ್ರಾಮದಲ್ಲಿ ಜೀವಿಸುತ್ತಿದ್ದು, ತಮ್ಮ ಮನೆಯಿಂದ 100 ಮೀಟರ್ ದೂರದಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕ-ಶಿಕ್ಷಕಿಯರಿಗೆ ಆಹಾರ ತಯಾರಿಸಿ ನೀಡುತ್ತಾರೆ.
ಪ್ರತಿದಿನ ಬೆಳಗ್ಗೆ ಜೋಳ ರೊಟ್ಟಿ ಅಥವಾ ಚಪಾತಿ, ಎರಡು ತರಹದ ಪದಾರ್ಥ, ಚಟ್ನಿ, ತರಕಾರಿ ಸಲಾಡ್ ಮತ್ತು ಮೊಸರು ತಯಾರಿಸಿ ಅವರೇ ಖುದ್ದಾಗಿ ಶಾಲೆಗೆ ತೆಗೆದುಕೊಂಡು ಹೋಗುತ್ತಾರೆ. ಈ ಇಳಿ ವಯಸ್ಸಿನಲ್ಲಿ ಕೂಡ ಅವರ ಉತ್ಸಾಹ ಕುಗ್ಗಿಲ್ಲ. ಶಾಲೆಯ ಎಲ್ಲಾ ಶಿಕ್ಷಕರಿಗೆ ಆಹಾರ ನೀಡಿದ ನಂತರ ತಾವೇ ಸ್ವತಃ ಪಾತ್ರೆಗಳನ್ನು ಮನೆಗೆ ತರುತ್ತಾರೆ. 
ಅಜ್ಜಿಯ ಈ ಕಾರ್ಯ ಆರಂಭವಾಗಿದ್ದು 30 ವರ್ಷಗಳ ಹಿಂದೆ ಜೀರಿಗೆವಾಡ ಗ್ರಾಮದಲ್ಲಿ. ಹೊಸದಾಗಿ ಮದುವೆಯಾದ ಶಿಕ್ಷಕರೊಬ್ಬರಿಗೆ ಅಡುಗೆ ಮಾಡಲು ಸರಿಯಾದ ವ್ಯವಸ್ಥೆಗಳಿರಲಿಲ್ಲ. ಶಾಲೆಯಲ್ಲಿಯೇ ಅಡುಗೆ ಮಾಡುತ್ತಿದ್ದುದು ನೋಡಿ ಸವಮ್ಮ ಅವರಿಗೆ ಸಹಾಯ ಮಾಡಲು ಮುಂದಾದರು. ತಮ್ಮ ಮನೆಯಲ್ಲಿ ಆಹಾರ ತಯಾರಿಸಿ ತಂದು ಕೊಡುತ್ತೇನೆಂದು ಅವರು ಹೇಳಿದರು. ಈ ಅಭ್ಯಾಸ 30 ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಎಲ್ಲರಿಗೂ ಊಟ ಒದಗಿಸುತ್ತಾರೆ.
ನನ್ನ ಪತಿಯಿದ್ದಾಗ ಅವರು ಮತ್ತು ಇಂದು ಮಕ್ಕಳು ಈ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ. ನಾವೇನು ವಿಶೇಷವಾದದ್ದನ್ನು ಶಿಕ್ಷಕರಿಗೆ ತಯಾರಿಸಿ ಕೊಡುತ್ತಿಲ್ಲ. ನಮಗೆ ನಿತ್ಯ ಮಾಡಿ ತಿನ್ನುವುದರಲ್ಲಿ ಸ್ವಲ್ಪ ಹೆಚ್ಚಿಗೆ ಮಾಡುತ್ತೇವಷ್ಟೆ. ನಮ್ಮ ಕೃಷಿ ಭೂಮಿಯಿಂದ ಬೇಕಾದಷ್ಟು ನಮಗೆ ಸಿಗುತ್ತಿದೆ ಎಂದು ಸವಮ್ಮ ಹೇಳುತ್ತಾರೆ.
ಸವಮ್ಮ 10 ಮಂದಿ ಕುಟುಂಬ ಸದಸ್ಯರೊಂದಿಗೆ ಜೀವಿಸುತ್ತಿದ್ದಾರೆ. ಅವರ ಸೊಸೆಯಂದಿರು ಇದಕ್ಕೆ ಸಹಾಯ ಮಾಡುತ್ತಾರೆ. ಇಷ್ಟು ವರ್ಷಗಳಲ್ಲಿ ಅವರು ಶಾಲೆಯ ಸಿಬ್ಬಂದಿಗೆ ಊಟ ನೀಡದಿದ್ದುದು ಕೇವಲ 10 ದಿನಗಳು ಮಾತ್ರ. ಅದು ಅವರ ಹಿರಿಯ ಮಗನನ್ನು ಕಳೆದುಕೊಂಡಾಗ. ನಮ್ಮ ತಾಯಿಯ ಈ ಸೇವೆಯನ್ನು ನಾವು ಮುಂದುವರಿಸುತ್ತೇವೆ. ಕೇವಲ ಶಿಕ್ಷಕರು ಮಾತ್ರವಲ್ಲದೆ, ದಾರಿಹೋಕರು, ಭಿಕ್ಷುಕರು ಹೀಗೆ ಮನೆ ಮುಂದೆ ಯಾರೆಲ್ಲ ಬರುತ್ತಾರೆ ಅವರಿಗೆಲ್ಲ ನೀಡುತ್ತೇವೆ ಎನ್ನುತ್ತಾರೆ.
ಶಾಲೆಯ ಶಿಕ್ಷಕರು ಈ ಅಜ್ಜಿಯ ಸೇವೆಗೆ ಮಾರುಹೋಗುತ್ತಾರೆ. ಪ್ರೀತಿಯಿಂದ ಅವ್ವ ಎಂದು ಕರೆಯುತ್ತಾರೆ.  ಸವಮ್ಮ ಹುಷಾರಿಲ್ಲದಿರುವಾಗ ಶಾಲೆಯ ಮಕ್ಕಳೇ ಬಂದು ಊಟ ಕೊಂಡೊಯ್ಯುತ್ತಾರೆ.
ಹಬ್ಬದ ಸಮಯದಲ್ಲಿ ವಿಶೇಷ ತಿನಿಸುಗಳನ್ನು ಕಳುಹಿಸುತ್ತಾರೆ.  ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಮಯಗಳಲ್ಲಿ ಮಕ್ಕಳಿಗೆ ತಿಂಡಿಗಳನ್ನು ಕೂಡ ತಯಾರಿಸಿ ಕಳುಹಿಸುತ್ತಾರೆ. ಸವಮ್ಮ ಒಬ್ಬ ಆದರ್ಶ ಮಹಿಳೆ. ಹಲವು ಮಕ್ಕಳು ಅವರಿಂದ ಪ್ರೇರಿತರಾಗಿದ್ದಾರೆ ಎಂದು ಶಾಲೆಯ ಶಿಕ್ಷಕ ಡಿ.ಆರ್.ಸನ್ನುಬ ಹೇಳುತ್ತಾರೆ.
ಸವಮ್ಮ ಗ್ರಾಮ ಪಂಚಾಯತ್ ಸದಸ್ಯೆಯಾಗಿ 2002ರಿಂದ 2007ರವರೆಗೆ ಸೇವೆ ಸಲ್ಲಿಸಿದ್ದಾರೆ. ಧಾರವಾಡದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮದಲ್ಲಿ ಸಕ್ರಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು ಎನ್ನುತ್ತಾರೆ ನೆರೆಹೊರೆಯವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!