ಬೆಂಗಳೂರು: ಹಾಸನ ಡಿಸಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿಚಾರದಲ್ಲಿ ಸಚಿವ ಎ ಮಂಜು ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಅವರು ವಾಗ್ದಾಳಿ ನಡೆಸಿದ್ದು ಇದಕ್ಕೆ ತಿರುಗೇಟು ನೀಡಿರುವ ಮಂಜು ಅವರು ನಾನು ನಿಮ್ಮಂತೆ ಏಳನೇ ತರಗತಿಯಲ್ಲಿ ಏಳು ಸಾರಿ ಫೇಲ್ ಆಗಿ ಮಂತ್ರಿಯಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯ ಪಶುಸಂಗೋಪನ ಸಚಿವಾ ಎ ಮಂಜು ಅವರು ದೇವೇಗೌಡ ಅವರು ನೇರ ವಾಗ್ದಾಳಿ ನಡೆಸಿದ್ದು ನಾನು ಏಳು ಸಾರಿ ಫೇಲ್ ಆಗಿ ಮಂತ್ರಿಯಾಗಿಲ್ಲ. ನಾನು ಡಬಲ್ ಗ್ರಾಜುಯೇಟ್ ಆಗಿ ಸ್ವಂತ ಶಕ್ತಿಯಿಂದ ಸಚಿವನಾಗಿದ್ದೇನೆ ಎಂದು ಹೇಳಿದ್ದಾರೆ.
ವಯಸ್ಸಾದವರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕು. ದೇವೇಗೌಡರು ಸೋತು ಮನೆಯಲ್ಲಿ ಕುಳಿತಿದ್ದಾಗ ನನ್ನ ಬಳಿಗೆ ಸಹಾಯ ಕೇಳಿಕೊಂಡು ಬಂದಿದ್ದರು. ನಾನು ಅವರ ಹಂಗಿನಲ್ಲಿಲ್ಲ. ಅವರು ನನ್ನ ಹಂಗಿನಲ್ಲಿದ್ದಾರೆ ಎಂದು ಮಂಜು ಟೀಕಿಸಿದ್ದಾರೆ.