ರಾಜ್ಯ

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ; ಸಿದ್ದಗಂಗಾ ಶ್ರೀ, ಸುತ್ತೂರು ಶ್ರೀ ನಿಲುವು ಸ್ಪಷ್ಟಪಡಿಸಲಿ- ಚಂಪಾ

Manjula VN
ಮೈಸೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ಸೂತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಭಾನುವಾರ ಆಗ್ರಹಿಸಿದ್ದಾರೆ. 
ಲಿಂಗಾಯತ ಒಂದು ಸ್ವತಂತ್ರ ಧರ್ಮ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಅವರು, ಶ್ರೀಗಳು ಮೌನವಾಗಿರಲು ಇದು ಸರಿಯಾದ ಸಮಯವಲ್ಲ. ಶ್ರೀಗಳಿಗೆ ಕೋಮುವಾದಿಗಳಿಂದ ಆಂತರಿಕವಾಗಿ ಅಥವಾ ಬಾಶ್ಯವಾಗಿ ಒತ್ತಡಗಳಿರಬೇಕು. ಹೀಗಾಗಿ ಅವರು ವಿವಾದ ಕುರಿತು ಮೌನ ತಾಳಿದ್ದಾರೆ. ಆಧರೆ, ಈಗಲಾಗಲೂ ಶ್ರೀಗಳು ತಮ್ಮ ಮೌನವನ್ನು ಮುರಿದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಹೇಳಿದ್ದಾರೆ. 
ವಿವಾದ ಕುರಿತು ಮೌನ ಮುಂದುವರೆಸಿಕೊಂಡು ದೂರ ಉಳಿಯುವುದಕ್ಕಿಂತ ಪಂಚಪೀಠದ ಶ್ರೀಗಳು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಎಲ್ಲಾ ಮಠದವರು ಪ್ರತಿಭಟನೆಯೊಂದಿಗೆ ಕೈಜೋಡಿಸಬೇಕು. ಬಸವಣ್ಣ ಅವರ ತತ್ತ್ವಗಳು, ಆಚರಣೆಗಳನ್ನು ಪಾಲಿಸುತ್ತಿರುವ ಮೈಸೂರಿನ ಸುತ್ತೂರು ಮಠದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಈ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದ್ದಾರೆ. 
ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಚಾಮದಾರ್ ಮಾತನಾಡಿ, ವೀರಶೈವ-ಸೋಂಕು ಹರಡಲು ಕೆಲ ಮಠಾಧೀಶರೂ ಕಾರಣ. ಸಮಯ ಬಂದಾಗ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ. ಇದಲ್ಲದೆ, ವೇದಗಳನ್ನು ತಿರಸ್ಕರಿಸಿದ ಬೌದ್ಧರು, ಜೈನರು ಹಿಂದುಗಳಲ್ಲ ಎನ್ನುವುದಾದರೆ ಅದೇ ಕಾರಣಕ್ಕೆ ಲಿಂಗಾಯಿತರೂ ಹಿಂದೂಗಳಲ್ಲ. ವೇದಗಳನ್ನು ಅನೇಕ ರೀತಿಯಲ್ಲಿ ಖಂಡಿಸುವ ವಚನಗಳಿವೆ. ವಚನಕಾರ ಸಿದ್ದರಾಮ ವೇದ ಪುರಾಗಳನ್ನು ಸಮುದ್ರಕ್ಕೆ ಎಸೆಯಿರಿ ಎಂದಿದ್ದಾರೆ. ಹಾಗಾಗಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ ಎಂದು ತಮ್ಮದೇ ವಾದ ಮಂಡಿಸಿದರು. 
SCROLL FOR NEXT