ರಾಮಲಿಂಗಾ ರೆಡ್ಡಿ 
ರಾಜ್ಯ

ಹತ್ಯೆಯಾದ ಸಂತೋಷ್ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತ ಅಲ್ಲ: ರಾಮಲಿಂಗಾ ರೆಡ್ಡಿ

ಜ.31 ರಂದು ಬೆಂಗಳೂರಿನಲ್ಲಿ ಹತ್ಯೆಯಾಗಿದ್ದ ಸಂತೋಷ್ ಬಿಜೆಪಿ ಕಾರ್ಯಕರ್ತನೂ ಅಲ್ಲ ಹಿಂದೂ ಕಾರ್ಯಕರ್ತನೂ ಅಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು: ಜ.31 ರಂದು ಬೆಂಗಳೂರಿನಲ್ಲಿ ಹತ್ಯೆಯಾಗಿದ್ದ ಸಂತೋಷ್ ಬಿಜೆಪಿ ಕಾರ್ಯಕರ್ತನೂ ಅಲ್ಲ ಹಿಂದೂ ಕಾರ್ಯಕರ್ತನೂ ಅಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 
ಪ್ರಕರಣದ ಬಗ್ಗೆ  ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಗೃಹ ಸಚಿವರು  ಹತ್ಯೆಯಾಗಿರುವ ಸಂತೋಷ್ ಹಾಗೂ ಹತ್ಯೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವಾಸಿಂ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. 2-3 ತಿಂಗಳ ಹಿಂದೆ ಅವರ ನಡುವೆ ವೈಮನಸ್ಸು ಮೂಡಿತ್ತು. ಆದ್ದರಿಂದ ಇದು ರಾಜಕೀಯಕ್ಕಾಗಿ ನಡೆದ  ಕೊಲೆಯಲ್ಲ ಎಂದು ಹೇಳಿದ್ದಾರೆ.
ಹತ್ಯೆಯಾಗಿರುವ ಸಂತೋಷ್ ಬಿಜೆಪಿ ಕಾರ್ಯಕರ್ತನೂ ಅಲ್ಲ ಹಿಂದೂ ಕಾರ್ಯಕರ್ತನೂ ಅಲ್ಲ, ಸತ್ತ ಮೇಲೆ ಸತ್ತವರನ್ನೆಲ್ಲಾ ತನ್ನ ಕಾರ್ಯಕರ್ತರು ಎಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಿಜೆಪಿ ರಾಜ್ಯದಲ್ಲಿ ಹೊಸ ಪರಂಪರೆ ಸೃಷ್ಟಿಸಿದೆ ಎಂದು ರೆಡ್ಡಿ ಹೇಳಿದ್ದಾರೆ. 
ವಾಸಿಂ ಹಾಗೂ ಸಂತೋಷ್ ನಡುವೆ ವೈಮನಸ್ಸು ಮೂಡಿದ್ದು ಸ್ಕ್ರೂಡ್ರೈವರ್ ನಿಂದ ಕಾಲಿಗೆ ಚುಚ್ಚಲಾಗಿತ್ತು, ತೀವ್ರ ರಕ್ತಸ್ರಾವದಿಂದ ಸಂತೋಷ್ ಸಾವನ್ನಪ್ಪಿದ್ದಾನೆ. ಸಂತೋಷ್ ನನ್ನು ಹತ್ಯೆ ಮಾಡುವ ಉದ್ದೇಶ ಇರಲಿಲ್ಲ ಎಂದಿರುವ ರಾಮಲಿಂಗಾ ರೆಡ್ಡಿ ಸಂತೋಷ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು; Video

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್

ಪಾಕ್ ಉಗ್ರರ ರಣಬೇಟೆ: ಬಲೂಚಿಸ್ತಾನದಲ್ಲಿ 88 ಭಯೋತ್ಪಾದಕರ ಹತ್ಯೆ!

'10 Snakes' ಪೋಸ್ಟ್ ಗೆ ಶ್ರೇಷ್ಠ ಅಯ್ಯರ್‌ ಲೈಕ್, ಭಾರಿ ವಿವಾದಕ್ಕೆ ಗುರಿಯಾದ ಶ್ರೇಯಸ್ ಅಯ್ಯರ್! ನೆಟ್ಟಿಗರು ತೀವ್ರ ಚರ್ಚೆ

INS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video