ಬೆಂಗಳೂರು: 12 ವರ್ಷಕ್ಕೊಮ್ಮೆ ನಡೆಯುವ ವಿಶ್ವವಿಖ್ಯಾತ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ಮಹಾಮಸ್ತಕಾಭಿಷೇಕಕ್ಕೆ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ ಸಿದ್ಧಗೊಂಡಿದೆ.
ಫೆ.7 ರಿಂದ 26ರವರೆಗೆ 20 ದಿನಗಳ ಕಾಲ ನಡೆಯುವ ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲೆಸಿರುವ ತ್ಯಾಗಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಪೂರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಬಾಹುಬಲಿ ಮೂರ್ತಿ ಅಭಿಷೇಕಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಮಾದರಿಯಲ್ಲಿ ಅಟ್ಟಣಿಗೆ ನಿರ್ಮಿಸುವ ಕಾರ್ಯವೂ ಸಂಪೂರ್ಣಗೊಂಡಿದೆ.
ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ವಿಂಧ್ಯಗಿರಿ ಸಿದ್ಧಗೊಂಡಿದ್ದು, ಮೂಲಭೂತ ಸೌಕರ್ಯ ಮತ್ತು 12 ನಗರಗಳು, ಕುಡಿಯುವ ನೀರು ಯೋಜನೆ, ನೈರ್ಮಲ್ಯ ಹೈಟೆಕ್ ಯುಜಿಡಿ ಟ್ರೀಟ್ಮೆಂಡ್ ಪ್ಲಾಂಟ್ ಮತ್ತು ರಸ್ತೆ ದುರಸ್ತಿ ಕಾರ್ಯ ಸೇರಿದಂತೆ ಹಲವು ಕಾರ್ಯಗಳು ಪೂರ್ಣಗೊಂಡಿವೆ.
ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಹಾಗೂ ತಾತ್ಕಾಲಿಕ ಸೌಕರ್ಯ ನಿರ್ಮಿಸಲು ಸರ್ಕಾರ ರೂ.75 ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ರಸ್ತೆ ದುರಸ್ತಿ ಕಾರ್ಯ, ವಿಐಪಿಗಳಿಗೆ ಅತಿಥಿ ಗೃಹಗಳ ನಿರ್ಮಾಣ, ಟ್ಯಾಂಕ್ ಗಳ ಪುನರ್ ಜೋಡನೆ, ಬಸ್ ನಿಲ್ದಾಣಗಳ ನವೀಕರಣ ಸೇರಿದಂತೆ ಹಲವು ಕಾರ್ಯಗಳಿಗೆ ಸರ್ಕಾರ ಹಣವನ್ನು ಒದಗಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics