ಮೌಂಟ್ ಎವರೆಸ್ಟ್ ಏರಿದ ಕನ್ನಡಿಗ ವಿಕ್ರಂ: ಸಿಎಂ ಕುಮಾರಸ್ವಾಮಿ ಅಭಿನಂದನೆ 
ರಾಜ್ಯ

ಮೌಂಟ್ ಎವರೆಸ್ಟ್ ಏರಿದ ಕನ್ನಡಿಗ ವಿಕ್ರಂ: ಸಿಎಂ ಕುಮಾರಸ್ವಾಮಿ ಅಭಿನಂದನೆ

ಕನ್ನಡಿಗ ಅರಣ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಜಗತ್ತಿನ ಅತಿ ಎತ್ತರದ ಶಿಖರ ಮೌಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮೆಚ್ಚಿ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

ಬೆಂಗಳೂರು: ಕನ್ನಡಿಗ ಅರಣ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಜಗತ್ತಿನ ಅತಿ ಎತ್ತರದ ಶಿಖರ ಮೌಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮೆಚ್ಚಿ  ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
 ಅರಣ್ಯ ರಕ್ಷಕ ವಿಕ್ರಮ್.ಸಿ (25)  ಅವರು ಮೂಲತಃಅ ಹೊನ್ನಾಳಿಯವರಾಗಿದ್ದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಥಸಾಶ್ತ್ರದಲ್ಲಿ ಎಂಎ ಪದವಿ ಪಡೆದಿರುವ ವಿಕ್ರಮ್ ಹಿಮಾಲಯವನ್ನೇರುವ ಮುನ್ನ ಸಾಕಷ್ಟು ಬಾರಿ ತಯಾರಿ ನಡೆಸಿದ್ದಾರೆ. 
ಪರ್ವತಾರೋಹಿಗಳ ಆಯ್ಕೆಗಾಗಿ ನಡೆದ ಸಂದರ್ಶನದಲ್ಲಿ ದೇಶಾದ್ಯಂತ 25 ಜನ ಆಯ್ಕೆಯಾಗಿದ್ದು ಅಂತಿಮವಾಗಿ ಅವರಲ್ಲಿ ಎಂಟು ಜನರನ್ನು ಹಿಮಾಲಯ ಆರೋಹಣಕ್ಕೆ ಆಯ್ದುಕೊಳ್ಳಲಾಗಿದೆ. ಈ ಎಂಟು ಜನರಲ್ಲಿ ವಿಕ್ರಮ್ ಸಹ ಓರ್ವರಾಗಿರುವುದು ವಿಶೇಷವಾಗಿತ್ತು. ಕರ್ನಾಟಕದಿಂಡ ಇವರೊಬ್ಬರೇ ಈ ಸಾಹಸಯಾತ್ರೆಗೆ ಆಯ್ಕೆಯಾದ ವ್ಯಕ್ತಿ ಎನ್ನುವುದು ಸಹ ಇಲ್ಲಿ ಗಮನಾರ್ಹ.
ಹೀಗೆ ಹಿಯಾಮಲ ಏರುವ ಸಾಹಸಯಾತ್ರೆಗೆ ಆಯ್ಕೆಯಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ್ದ ಕನ್ನಡಿಗ ವಿಕ್ರಮ್ ಸಆಧನೆಯನ್ನು ಕುಮಾರಸ್ವಾಮಿ ಮನದುಂಬಿ ಹೊಗಳಿದ್ದಾರೆ. "ನಿಮ್ಮ ಈ ಸಾಧನೆ ಇತರೆ ಯುವಕರಿಗೆ ಸಹ ಸ್ಪೂರ್ತಿಯಾಗಲಿ: ಎಂದು ಅವರು ಆಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT