ರಾಜ್ಯ

ರಾಯಚೂರು: ಖೋಟಾನೋಟು ಜಾಲದ 7 ಜನರ ಬಂಧನ, 4.52 ಲಕ್ಷ ರೂ ನಕಲಿ ನೋಟು ವಶ

Raghavendra Adiga
ದೇವದುರ್ಗ: ರಾಯಚೂರು ಜಿಲ್ಲೆಯಲ್ಲಿ ಖೋಟಾ ನೋಟುಗಳನ್ನು ಮುದ್ರಿಸಿ ಪ್ರಸಾರ ಮಾಡುತ್ತಿದ್ದ ಜಾಲವೊಂದು ಪೋಲೀಸರ   ಅತಿಥಿಯಾಗಿದೆ. ದೇವದುರ್ಗ ಪೋಲೀಸರು ನಕಲಿ ನೋಟು ದಂಧೆಯಲ್ಲಿ ತೊಡಗಿದ್ದ  7 ಜನರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಸಾಪುರ ಕ್ಯಾಂಪಿನ ಟಿ.‌ ಶ್ರೀನಿವಾಸ, ಹುಸೇನನಗರದ ರಾಮಕೃಷ್ಣ, ತಳವಾರದೊಡ್ಡಿಯ ಅಯ್ಯಾಳಪ್ಪ, ಗದ್ವಾಲ್ ತಾಲೂಕಿನ ಹನುಮಂತ, ಜಾಲಹಳ್ಳಿಯ ಪ್ರಕಾಶ, ಚಿಕ್ಕಬೂದೂರಿನ ಬಸವರಾಜ ಮತ್ತು ರಾಮಲಿಂಗೇಶ್ವರ ಕಾಲೋನಿಯ ಸೈಯದ್ ಉಸ್ಮಾನ ಎಂದು ಗುರುತಿಸಲಾಗಿದೆ. ಇವರಿಂದ  4.52 ಲಕ್ಷ ರೂ. ಮೌಲ್ಯದ 2,000 ರೂ. ಮತ್ತು 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೆ ಆರೋಪಿಗಳ ಬಲಿ ಇದ್ದ ನೋಟು ಕಾಗದ ಮತ್ತು ರಾಸಾಯನಿಕ ವಸ್ತುಗಳನ್ನು ಸಹ ಜಪ್ತಿ ಮಾಡಲಾಗಿದ್ದು ಇವರುಗಳು ಬೆಂಗಳೂರು ಮೂಲದ ಅಬ್ದುಲ್​ ರಹಮಾನ್ ಎನ್ನುವಾತನಿಂದ ಈ ನಕಲಿ ನೋಟು ಮುದ್ರಣ ಸಾಮಗ್ರಿಗಳನ್ನು ಖರೀದಿಸಿದ್ದರೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಹಲವು ವರ್ಷಗಳೀಂದ ಕಳ್ಳ ನೋಟಿನ ದಂಧೆ ನಡೆಯುತ್ತಿದೆ ಚುನಾವಣಾ ವೇಳೆ ದೇವದುರ್ಗದ ಜಾಲಹಳ್ಳಿಯಲ್ಲಿ 500  ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿದ್ದವೆನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.
SCROLL FOR NEXT