ಸಾಂದರ್ಭಿಕ ಚಿತ್ರ 
ರಾಜ್ಯ

ಮಂಗಳೂರಿನಲ್ಲಿ ಕೇವಲ ಒಂದೇ ವರ್ಷದಲ್ಲಿ 21 'ನೈಜೀರಿಯನ್' ಆನ್ ಲೈನ್ ವಂಚನೆ!

ಕಚೇರಿ ಆರಂಭಗೊಂಡ ಕೇವಲ ಒಂದು ವರ್ಷದಲ್ಲಿ ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ...

ಮಂಗಳೂರು: ಕಚೇರಿ ಆರಂಭಗೊಂಡ ಕೇವಲ ಒಂದು ವರ್ಷದಲ್ಲಿ ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ(ಸಿಸಿಪಿಎಸ್) ನೈಜೀರಿಯಾ ವಂಚನೆಯಿಂದ ಆನ್ ಲೈನ್ ನಲ್ಲಿ ಸುಮಾರು 1.4 ಕೋಟಿ ರೂಪಾಯಿ ಕಳೆದುಕೊಂಡಿದ್ದೇವೆ ಎಂದು ಕೇಸು ದಾಖಲಾಗಿದೆ.

ಸಿಸಿಪಿಎಸ್ ಇದುವರೆಗೆ ಸುಮಾರು 21 ಕೇಸುಗಳನ್ನು ದಾಖಲಿಸಿಕೊಂಡಿದೆ. ಅದರಲ್ಲಿ ಮಹಿಳೆಯರು ಹೆಚ್ಚಾಗಿ ಆನ್ ಲೈನ್ ವಂಚನೆಗೆ ಭಾರೀ ಮೊತ್ತದ ಹಣ ಕಳೆದುಕೊಳ್ಳುವವರಾಗಿದ್ದಾರೆ ಮತ್ತು ಯುವಜನತೆಯ ಪ್ರಮಾಣ ಇನ್ನೂ ಅಧಿಕವಾಗಿದೆ.

ಕರೆನ್ಸಿಗೆ ಪ್ರತಿಯಾಗಿ ಡಾಲರ್, ಪೌಂಡ್, ಕಾರು ಅಥವಾ ಉದ್ಯೋಗ ಕೊಡಿಸುವುದಾಗಿ ನಂಬಿಸಿ  ಹಣ ವಂಚಿಸುವವರ ದೊಡ್ಡ ಜಾಲವೇ ಇದೆ ಎನ್ನಲಾಗಿದೆ. ಎಲ್ಲಾ ಕೇಸುಗಳಲ್ಲಿಯೂ ಆನ್ ಲೈನ್ ವಂಚನೆಗೊಳಗಾದವರು ಮಾಹಿತಿ ಮತ್ತು ಹಣವನ್ನು ಪ್ರಜ್ಞಾಪೂರ್ವಕವಾಗಿಯೇ ಕಳೆದುಕೊಂಡವರಾಗಿದ್ದಾರೆ. ಕೆಲವರು ವಂಚನೆಗಾರರಿಗೆ ಹಣ ನೀಡಲು ಸಾಲ ಮಾಡಿಕೊಂಡವರೂ ಇದ್ದಾರೆ.

ವಂಚನೆ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರು ಎಚ್ಚರಿಕೆ ನೀಡಿದ್ದರೂ ಸಹ ಕೆಲವರು ಎಟಿಎಂನ್ನು ಬಳಸಿ ಹಣ ವರ್ಗಾಯಿಸುತ್ತಾರೆ ಎನ್ನುತ್ತಾರೆ ಸಿಸಿಪಿಎಸ್ ಸವಿತ್ರ ತೇಜ್. ಹಣ ವರ್ಗಾವಣೆ ಮಾಡಿ ಎರಡು ತಿಂಗಳ ನಂತರವಷ್ಟೇ ತಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗಿದ್ದು. ತಮ್ಮ ವೈಯಕ್ತಿಕ ಜೀವನದಲ್ಲಿ ಕಷ್ಟದಲ್ಲಿರುವ ಮಹಿಳೆಯರು ಈ ವಂಚನೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು 32 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ವಂಚನೆ ಹೇಗೆ ನಡೆಯುತ್ತದೆ: ವಂಚನೆ ಎಸಗುವವರು ವಿದೇಶಿಯರು ಎಂದು ಹೇಳಿಕೊಂಡು ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಇತರ ಸಂದೇಶಗಳ ಮೂಲಕ ತಮ್ಮ ಅನುಕಂಪದ ಕಥೆಯನ್ನು ಭಾವನಾತ್ಮಕ ಮಾತುಗಳ ಮೂಲಕ ಹೇಳುತ್ತಾರೆ. ತಮ್ಮ ಆರೋಗ್ಯ ಸರಿಯಿಲ್ಲ ಅಥವಾ ಬೇರೆ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ತಮಗೆ ಹಣ ದಾನ ಮಾಡುವಂತಹ ಮಾತುಗಳನ್ನು ಅವರು ಹೇಳಿಕೊಳ್ಳುತ್ತಾರೆ.

ಹಣವನ್ನು ಕಳುಹಿಸಿದಾಗ ಅದು ವಿಮಾನ ನಿಲ್ದಾಣದಲ್ಲಿ ಸುಂಕ ಅಧಿಕಾರಿಗಳು ಬಿಡುವುದಿಲ್ಲ ಎಂದು ಹೇಳಿ ಆನ್ ಲೈನ್ ಮೂಲಕ ಪಾವತಿ ಮಾಡುವಂತೆ ದಾನಿಗಳ ಮನವೊಲಿಸುತ್ತಾರೆ. ಹೀಗೆ ಉದ್ಯೋಗ, ವಾಹನ ಕೊಡಿಸುವುದಾಗಿ ಆನ್ ಲೈನ್ ಮೂಲಕ ವಂಚನೆ ಮಾಡುವ ಮತ್ತು ವಂಚನೆಗೊಳಗಾಗುವ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಎರಡು ತಿಂಗಳ ಹಿಂದಷ್ಟೇ ನಮಗೆ ದೂರು ಬಂದಿದೆ. ಇನ್ನು ಕೆಲವು ವರದಿಯಾಗುವುದಿಲ್ಲ ಎನ್ನುತ್ತಾರೆ ತೇಜ್.

ಒಎಲ್ಎಕ್ಸ್ ಕಾರು ವಂಚನೆಗೆ ಬಲಿಯಾದ ಯುವಕರ ಸಂಖ್ಯೆ ಅದೆಷ್ಟೋ. ಇಂತಹ ಕಾರುಗಳು ವಿಮಾನ ನಿಲ್ದಾಣದಲ್ಲಿ ಹಲವು ದಿನಗಳ ಕಾಲ ಇದ್ದು ಅದನ್ನು ಹಣ ಕೊಟ್ಟು ಹಿಂಪಡೆಯಲಾಗುತ್ತದೆ. ಇಲ್ಲಿ ವಂಚನೆಯೆಸಗುವವರು ಹಲವು ಖಾತೆಗಳನ್ನು ವಹಿವಾಟುಗಳಿಗೆ ಬಳಸುತ್ತಾರೆ. ಇದಕ್ಕೆಲ್ಲಾ ಮೂಲ ನೈಜೀರಿಯಾ ವಂಚನೆಯಾಗಿದೆ. ಭಾರತೀಯರು ಮುಖ್ಯವಾಗಿ ಉತ್ತರ ಭಾರತೀಯರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ.

ವಂಚನೆಗೊಳಗಾಗಿದ್ದು ಬೆಳಕಿಗೆ ಬರುವ ಹೊತ್ತಿಗೆ ಹಲವು ತಿಂಗಳುಗಳೇ ಕಳೆದು ಹೋಗಿರುತ್ತವೆ. ಹಲವು ಸಂದರ್ಭಗಳಲ್ಲಿ ಬ್ಯಾಂಕು ಖಾತೆಗಳು ಕೂಡ ನಕಲಿಯಾಗಿರುತ್ತವೆ ಎನ್ನುತ್ತಾರೆ ಸವಿತ್ರ ತೇಜ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ