ರಾಜ್ಯ

ಮೈಸೂರಿನ ಪಾರಂಪರಿಕ ಸ್ಥಳಗಳಿಗೆ ಪ್ರವಾಸಿಗರಿಗೆ ರಾತ್ರಿ ಭೇಟಿ ನೀಡುವ ಅವಕಾಶ

Sumana Upadhyaya

ಮೈಸೂರು: ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಮೈಸೂರಿನ ಪರಂಪರೆಯ ಕಟ್ಟಡಗಳನ್ನು ಮುಸ್ಸಂಜೆಯ ನಂತರ ನೋಡುವ ಅವಕಾಶ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಪ್ರವಾಸೋದ್ಯಮ ಇಲಾಖೆ ನೈಟ್ ಟೂರಿಸಂನಡಿ ಪ್ರಸ್ತಾವನೆಯನ್ನು ರಚಿಸಿದ್ದು ಅದರಡಿ ಮೈಸೂರು ಒಡೆಯರ ಆಳ್ವಿಕೆ ಕಾಲದ ಕಟ್ಟಡಗಳನ್ನು ಪ್ರವಾಸಿಗರಿಗೆ ತೋರಿಸುವ ಯೋಜನೆಯಿದೆ. ವಿದೇಶಗಳಲ್ಲಿರುವ ಪರಿಕಲ್ಪನೆಯಂತೆ ಮೈಸೂರಿನ ಸಾಂಪ್ರದಾಯಿಕ ಕಟ್ಟಡಗಳನ್ನು ಪ್ರವಾಸಿಗರಿಗೆ ತೋರಿಸುವ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಹೆಸರು ಹೇಳಲಿಚ್ಛಿಸದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, ಮೈಸೂರು ನಗರ ಸುತ್ತಮುತ್ತ 11 ಕಟ್ಟಡಗಳನ್ನು ಗುರುತಿಸಲಾಗಿದೆ. ಟೌನ್ ಹಾಲ್, ಫ್ರೀ ಮ್ಯಾಸನ್ ಕಟ್ಟಡ, ಚಾಮರಾಜೇಂದ್ರ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೂರ್ತಿಗಳು, ಜಗನ್ಮೋಹನ ಅರಮನೆ, ದೇವರಾಜ ಮಾರ್ಕೆಟ್, ಹಳೆ ಕಾವಾ ಕಟ್ಟಡ, ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ವೃತ್ತ, ರೈಲ್ವೆ ಕಚೇರಿಗಳು, ಸರ್ಕಾರಿ ಮಹಿಳಾ ಮಹಾರಾಣಿ ಕಾಲೇಜು, ಮಹಾರಾಜ ಜ್ಯೂನಿಯರ್ ಕಾಲೇಜು ಮತ್ತು ಕ್ರಾಫೋರ್ಡ್ ಹಾಲ್, ಓರಿಯಂಟಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಗಳನ್ನು ಒಳಗೊಂಡಿವೆ ಎಂದು ಹೇಳಿದರು.

ಸಾಧ್ಯವಾದರೆ ಮೈಸೂರು ಅರಮನೆಯನ್ನು ಕೂಡ ಸೇರಿಸುವ ಯೋಜನೆಯಿದೆ. ರಾತ್ರಿ ಹೊತ್ತು ಮೈಸೂರು ಅರಮನೆಯ ಝಗಮಗಿಸುವ ದೀಪದಲ್ಲಿ ಪ್ರವಾಸಿಗರಿಗೆ ವೀಕ್ಷಿಸಲು ಅನುಕೂಲ ಮಾಡಿಕೊಟ್ಟರೆ ಉತ್ತಮ. ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. 

SCROLL FOR NEXT