ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ ಅಂಗನವಾಡಿ ಶಿಕ್ಷಕಿ! 
ರಾಜ್ಯ

ಬೆಂಗಳೂರು: ಬ್ಲೇಡ್ ನಿಂದ ಬಾಲಕನ ಕತ್ತು ಸೀಳಿದ ಅಂಗನವಾಡಿ ಶಿಕ್ಷಕಿ!

ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಕತ್ತನ್ನು ಬ್ಲೇಡಿನಿಂದ ಕೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಅಂಗನವಾಡಿ ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಕತ್ತನ್ನು ಬ್ಲೇಡಿನಿಂದ ಸೀಳಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ  ಕಾಸಘಟ್ಟ ಅಂಗನವಾಡಿ ಕೇಂದ್ರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಅದೇ ಗ್ರಾಮದ ನಿವಾಸಿ ಪೃಥ್ವಿರಾಜ್(7)  ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಂಗನವಾಡಿ ಶಿಕ್ಷಕಿ ಮುನಿರತ್ನಮ್ಮ ಎನ್ನುವವರು ಈ ಕೃತ್ಯ ಎಸಗಿದ್ದು ಬಾಲಕ ಪ್ರಥ್ವಿರಾಜ್ ತನ್ನ ಮೊಮ್ಮಗನೊಂದಿಗೆ ಜಗಳವಾಡಿದ್ದನೆನ್ನುವ ಕಾರಣಕ್ಕೆ ಅವನ ಮೇಲೆ ಬ್ಲೇಡಿನಿಂದ ಹಲ್ಲೆ ನಡೆಸಿದ್ದಾ:ಳೆ. ಆಕೆ ಹುಡುಗನನ್ನು ಥಳಿಸಿದ್ದಳಲ್ಲದೆ ಬ್ಲೇಡ್ ನಿಂದ ಆತನ ಕುತ್ತಿಗೆ ಕುಯ್ದಿದ್ದಾಳೆ.
ಸಧ್ಯ ಗಾಯಾಳು ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಶಿಕ್ಷಕಿ ವಿರುದ್ಧ ಬಾಲಕನ ಪೋಷಕರು ದೊಡ್ಡಬೆಳವಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ