ಸಾಂದರ್ಭಿಕ ಚಿತ್ರ 
ರಾಜ್ಯ

ತ್ರಿವರ್ಣ ಕರ್ನಾಟಕ ಧ್ವಜ: ಕೇಂದ್ರದ ಒಪ್ಪಿಗೆ ಅನುಮಾನ!

ಕರ್ನಾಟಕದ ಪ್ರತ್ಯೇಕ ನಾಡಧ್ವಜಕ್ಕೆ ಮಾನ್ಯತೆ ದೊರಕುವ ಕಾಲ ಇನ್ನೂ ಕೂಡಿಬಂದಂತೆ ಕಾಣುತ್ತಿಲ್ಲ. ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು.....

ಬೆಂಗಳೂರು: ಕರ್ನಾಟಕದ ಪ್ರತ್ಯೇಕ ನಾಡಧ್ವಜಕ್ಕೆ ಮಾನ್ಯತೆ ದೊರಕುವ ಕಾಲ ಇನ್ನೂ ಕೂಡಿಬಂದಂತೆ ಕಾಣುತ್ತಿಲ್ಲ. ವಿಧಾನಸಭೆ ಚುನಾವಣೆಗೆ ಮುನ್ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಬಣ್ಣಗಳ ಹೊಸ ವಿನ್ಯಾಸದ ನಾಡಧ್ವಜವನ್ನು ಅನಾವರಣಗೊಳಿಸಿದ್ದರು. ಇದರ ಅಧಿಕೃತ ಮಾನ್ಯತೆಗಾಗಿ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಆದರೆ ಸರ್ಕಾರ ಬದಲಾಗಿ ತಿಂಗಳಾದರೂ ಕೇಂದ್ರ ಸರ್ಕಾರ ಈ ಸಂಬಂಧ ಯಾವ ನಿರ್ಧಾರವನ್ನೂ ಪ್ರಕಟಿಸಲಿಲ್ಲ.
ಒಂದೊಮ್ಮೆ ಕೇಂದ್ರ ಸರ್ಕಾರ ಕರ್ನಾಟಕದ ನಾಡಧ್ವಜಕ್ಕೆ ಮಾನ್ಯತೆ ನಿಡಿದ್ದಾದರೆ ಜಮ್ಮು ಮತ್ತು ಕಾಶ್ಮೀರದ ನಂತರ ತನ್ನ ಸ್ವಂತ ಧ್ವಜವನ್ನು ಹೊಂದಲಿರುವ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಗುರುತಿಸಲ್ಪಡಲಿದೆ. ಇದು ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿಯೂ ಅನುಮತಿ ಪಡೆದಿದೆ. ಆದರೆ ಇದೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿರುವ ಕಾರಣ ನೂತನ ಧ್ವಜಕ್ಕೆ ಇಷ್ಟು ಬೇಗ ಅನುಮತಿ ಸಿಕ್ಕುವುದು ಕಠಿಣವೆನಿಸಿದೆ.
ಸಧ್ಯ ಈ ಸಂಬಂಧ ನಾವು ಹೊಸ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದೇವೆ. ಇದೊಂದು ಸುದೀರ್ಘ ಪ್ರಕ್ರಿಯೆ. ಬಹುಷಃ ಈ ಕನ್ನಡ ರಾಜ್ಯೋತ್ಸವಕ್ಕೂ ನಾವು ಹೊಸ ವಿನ್ಯಾಸದ ನಾಡಧ್ವಜ ಪಡೆಯುವುದು ಅನುಮಾನವೇ ಸರಿ" ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ, ನಾಡಧ್ವಜ ವಿನ್ಯಾಸದ ಸಂಬಂಧ ರಚಿತವಾದ ಒಂಭತ್ತು ಮಂದಿ ಸಮಿತಿಯ ಸದಸ್ಯರೂ ಆದ ಎಸ್. ಜಿ. ಸಿದ್ದರಾಮಯ್ಯ ಹೇಳಿದಂತೆ ಅವರು ಇದುವರೆಗೆ ಯಾವುದೇ ಪ್ರತಿಕ್ರಿಯೆಯನ್ನೂ ಸ್ವೀಕರಿಸಿಲ್ಲ.
"ಈಗ ಅಸೆಂಬ್ಲಿ ಅಧಿವೇಶನ ನಡೆಯುತ್ತಿದ್ದು ಅಧಿವೇಶನ ಮುಗಿದ ಬಳಿಕ ಈ ಸಂಬಂಧ ಕೇಂದ್ರಕ್ಕೆ ಒತಡ ಹೇರಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ವಿನಂತಿಸುತ್ತೇವೆ" ಅವರು ಹೇಳಿದ್ದಾರೆ.
ಜೆಡಿಎಸ್ ಮೂಲಗಳು ಹೇಳುವಂತೆ ಇದು ಸಂಪೂರ್ಣವಾಗಿ ಕಾಂಗ್ರೆಸ್ ನ ಯೋಜನೆಯಾಗಿದೆ. "ನಾವು ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಮೊದಲು ಗಮನ ನಿಡುತ್ತೇವೆ. ಬಳಿಕ ಈ ನಾಡಧ್ವಜ ವಿಚಾರ ಬರುತ್ತದೆ. ಮೊದಲಿಗೆ ನಾವು ಅದರಲ್ಲಿ ಹೆಚ್ಚು ಆಸಕ್ತಿ ವಹಿಸುವುದಿಲ್ಲ"ಜೆಡಿಎಸ್ ನಾಯಕರು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಜಯಮಾಲಾ ಹೇಳುವಂತೆ ಈ ಕುರಿತಂತೆ ಅವರು ಸಾಕಷ್ಟು ಉತ್ಸುಕರಿದ್ದಾರೆ."ನಾನು ಸಧ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಲುವಾಗಿ ಶೀಘ್ರದಲ್ಲಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತೇನೆ." ಎಂದಿದ್ದಾರೆ ನಾಡಧ್ವಜ ಮಾನ್ಯತೆಗೆ ಎಷ್ಟು ಕಾಲಾವಕಾಶ ಬೇಕು ಎಂದು ಕೇಳಿದಾಗ "ನಾನು ಹೊಸದಾಗಿ ಸಚಿವೆಯಾಗಿರುವ ಕಾರಣ ನನಗೆ ಇದರ ಕಲ್ಪನೆ ಇಲ್ಲ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT