ಕಿರುಕುಳ: ನೋವು ತೋಡಿಕೊಳ್ಳಲು ಅವಕಾಶ ಕೋರಿ ಡಿಜಿಪಿಗೆ ಪೊಲೀಸ್ ಅಧಿಕಾರಿ ಪತ್ರ
ಬೆಂಗಳೂರು: ಡಿವೈಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದೆ ಕಡೆಗೆ ತಮ್ಮ ಮನದ ನೋವನ್ನು ತೋಡಿಕೊಂಡು ಪತ್ರವೊಂದನ್ನು ಬರೆದಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ರ್ನಾಟಕದ ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರಿಗೆ ಡಿವೈಎಸ್ಪಿ ಓರ್ವರು ಬರೆದ ಪತ್ರದಲ್ಲಿ ಉದ್ದೇಶಪೂರ್ವಕ ಕಿರುಕುಳ ಸೇರಿ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಜೂನ್ 18 ರಂದು ಬರೆದ ಪತ್ರದ ಪ್ರತಿಯೊಂದು ಅವರ ಹೆಸರಿಲ್ಲದೆ ಮಾದ್ಯಮಗಳಿಗೆ ಸೋರಿಕೆಯಾಗಿದೆ.
ತರಬೇತಿ ಸಮಯದಲ್ಲಿ ಒಂದು ದಿನ ರಜೆ ಪಡೆದಿದ್ದನ್ನು ಅಶಿಸ್ತು ಎನ್ನಲಾಗುತ್ತಿದೆ. ನನ್ನ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಆಕೆಯನ್ನು ತರಬೇತಿ ಕ್ಯಾಂಪ್ ಗೆ ಬಿಡುವ ಸಲುವಾಗಿ ರಜೆ ಕೇಳಿದ್ದೆ.ದಿನದ ರಜೆಗೆ 9 ದಿನಗಳ ಮುನ್ನ ಬೇಡಿಕೆ ಸಲ್ಲಿಸಿದ್ದರೂ ರಜೆ ಮಂಜೂರಾಗಿರಲಿಲ್ಲ.ಹಾಗಾಗಿ ಅನಿವಾರ್ಯವಾಗಿ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿ ರಜೆ ಪಡೆದಿದ್ದೇನೆ. ಆದರೆ ಇದನ್ನೇ ಅಶಿಸ್ತು ಎಂದು ಪರಿಗಣಿಸಿ ತನಗೆ ನೋಟೀಸ್ ನೀಡಲಾಗಿದೆ 23 ದಿನಗಳ ತರಬೇತಿಯಲ್ಲಿ ಒಂದು ದಿನ ರಜೆ ಪಡೆದುಕೊಂಡದ್ದು ಅಶಿಸ್ತು ಎಂದಾದರೆ ನನ್ನ ಸಹೋದ್ಯೋಗಿಯೊಬ್ಬರು ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ದರು, ಇನ್ನೂ ಕೆಲ ಅಧಿಕಾರಿಗಳಿಗೆ 3-4 ದಿನ ರಜೆ ನಿಡಲಾಗಿತ್ತು ಎಂದು ಅವರು ಪತ್ರದಲ್ಲಿ ಆರೋಪಿಸಿದ್ಡಾರೆ.
"ನಾನು ಮತ್ತೊಮ್ಮೆ ನಿಮ್ಮನ್ನು ವಿನಂತಿಸುತ್ತಿದ್ದೇನೆ, ಹಿರಿಯ ಅಧಿಕಾರಿಗಳ ಮಾನಸಿಕ ಕಿರುಕುಳ ಮತ್ತು ತಾರತಮ್ಯದ ಕುರಿತಂತೆ ಕ್ರಮ ಕೈಗೊಳ್ಳಿರಿ.ಹಾಗೆಯೇ ಇದುವರೆಗೆ ನನಗೆ ನಿಮ್ಮ ಭೇಟಿಯಾಗಬೇಕಿದ್ದು ಈ ಕುರಿತು ಸಲ್ಲಿಸಿದ್ದ ಮನವಿಗೆ ಇದುವರೆಗೆ ಯಾವ ಪ್ರತಿಕ್ರಿಯೆ ದೊರಕಿಲ್ಲ. ನಾನು ಈ ಹಿಂದೆ ಬರೆದ ಪತ್ರದ ಸ್ಥಿತಿ ವಿಚಾರಿಸಿದಾಗ ನಿಮ್ಮ ಕಛೇರಿಯ ಅಧಿಕಾರಿಗಳು ’ನಿಮಗೆ ಕನ್ನಡ ಬರುವುದಿಲ್ಲ, ನೀವು ನಾನು ಬರೆದದ್ದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ನಾನು ದೂರು ಕೇಂದ್ರಕ್ಕೆ ತೆರಳಲು ನಿರ್ದೇಶಿಸಿದ್ದಾರೆ"
ಇದೇ ವೇಳೆ ಡಿವೈಎಸ್ಪಿ ತಮ್ಮ ಪತ್ರದಲ್ಲಿ ಮೃತ ಡಿವೈಎಸ್‍ಪಿ ಎಂಕೆ ಗಣಪತಿ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ."ಇಲಾಖೆಯಲ್ಲಿರುವ ಅಧಿಕಾರಿಗಳು ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರಿಂದಾಗಿ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಡಿವೈಎಸ್ಪಿ ಕಲ್ಲಪ ಹಂಡಿಭಾಗ್ ಹಾಗು ಎಂ.ಕೆ. ಗಣಪತಿ, ಅನುಪಮ ಶೆಣೈ ಇಂತಹಾ ಅಧಿಕಾರಿಗಳು ಆತ್ಮಹತ್ಯೆ ಇಲ್ಲದೆ ಹುದ್ದೆಯನ್ನೇ ತೊರೆಯಲು ಮೇಲಾಧಿಕಾರಿಗಳ ಕಿರುಕುಳವೇ ಕಾರಣವಾಗುದೆ" ಎನ್ನುತ್ತಾರೆ.
2013 ರಲ್ಲಿ ಬೆಂಗಳೂರಿನ ರಾಜಾನುಕುಂಟೆ ಠಾಣೆಯಲ್ಲಿ ಪೇದೆಯೊಬ್ಬರು ನಡೆಸಿದ್ದ ಗುಂಡಿನ ದಾಳಿಯನ್ನು ಉದಾಹರಿಸಿದ ಪೋಲೀಸ್ ಅಧಿಕಾರಿ ಇಲಾಖೆಯೊಳಗೆ ಕಿರುಕುಳವು ಅಂತಹ ತೀವ್ರವಾದ ಕ್ರಮಕ್ಕೆ ಕಾರಣವಾಗಿದೆ ಎಂದು ಹೇಳುತ್ತಾರೆ.
ಪತ್ರದ ಪ್ರಕಾರ, ಅಧಿಕಾರಿ ತನ್ನ ಮೊದಲ ಪತ್ರವನ್ನು ಡಿಸೆಂಬರ್ 29, 2017 ರಂದು ಎಡಿಜಿಪಿ ಅವರ ದೂರು ಕೇಂದ್ರಕ್ಕೆ ಬರೆದಿದ್ದಾರೆ. ಡಿಸೆಂಬರ್ 30, 2017 ಮತ್ತು ಜೂನ್ 4, 2018 ರಂದು ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರಿಗೆ ಅವರಿಗೆ ಬರೆದಿದ್ದಾರೆ ಇದೆಲ್ಲದರ ಬಳಿಕ ಇತ್ತೀಚೆಗೆ ಜೂನ್ 18 ರಂದು ಈ ಪತ್ರ ಬರೆದಿದ್ದಾಗಿ ಹೇಳಲಾಗಿದೆ.
ಸ್ಸಮಸ್ಯೆ ಇದ್ದಲ್ಲಿ ನನ್ನನ್ನೇ ಭೇಟಿ ಮಾಡಿ
ಡಿವೈಎಸ್ಪಿ ಪತ್ರ ಮಾದ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಗೊಂದಲದ ಕುರಿತು ಸ್ಪಷ್ಟನೆ ನಿಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನನ್ನು ಭೇಟಿ ಮಾಡಿ, ಯಾರೂ ಆತುರದ ನಿರ್ಧಾರಕ್ಕೆ ಬರುವುದು ಬೇಡ ಎಂದರು.
ಇಲಾಖೆಯಲ್ಲಿ ನಡೆಯುತ್ತಿರುವ ತಾರತಮ್ಯ ಸಂಬಂಧ ಡಿಜಿಪಿಗೆ ಪತ್ರ ಬರೆದ ವಿಚಾರ ನನ್ನ ಗಮನಕ್ಕೆ ಸಹ ಬಂದಿದೆ.ಈ ಸಂಬಂಧ ನೀಲಮಣಿ ಎನ್ ರಾಜುರವನ್ನು ಕರೆಸಿ ಈ ಕುರಿತು ಚರ್ಚೆ ನಾಡೆಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ..
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರ ಪತ್ರದಲ್ಲಿ ಉಲ್ಲೇಖ ಮಾಡಿರುವ ಕುರಿತಂತೆ ಹೇಳಿದ ಮುಖ್ಯಮಂತ್ರಿ ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಅವಕಾಶವಿದೆ.ಹೀಗಾಗಿ ಏನೇ ಸಮಸ್ಯೆ ಇದ್ದಲ್ಲಿ ನೇರವಾಗಿ ನನ್ನ ಬಳಿ ಹೇಳಿರಿ ಎಂದಿದ್ದಾರೆ.