ರಾಜ್ಯ

40 ಸ್ಯಾಟಲೈಟ್ ಯೋಜನೆಯಿಂದ ಉದ್ಯೋಗ ಸೃಷ್ಟಿ: ಇಸ್ರೋ ಅಧ್ಯಕ್ಷ

Sumana Upadhyaya

ಬೆಂಗಳೂರು: ಮುಂದಿನ ನಾಲ್ಕು ವರ್ಷಗಳಲ್ಲಿ ಅಂತರಿಕ್ಷಕ್ಕೆ 40 ರಾಕೆಟ್ ಗಳನ್ನು ಹಾರಿಸುವ ಯೋಜನೆ ಭಾರತದ್ದಾಗಿದ್ದು ಈ ಮೂಲಕ ಉದ್ಯೋಗ ವಲಯವನ್ನು ಉತ್ತೇಜಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಕೇಂದ್ರ, ಇಸ್ರೋ ಅಧ್ಯಕ್ಷ ಕೈಲಾಸವದಿವು ಶಿವನ್ ತಿಳಿಸಿದ್ದಾರೆ.

ಇನ್ನು ಒಂದು ವರ್ಷದಲ್ಲಿ 12 ರಾಕೆಟ್ ಗಳ ಮೊದಲ ವಿಭಾಗವನ್ನು ಅಂತರಿಕ್ಷಕ್ಕೆ ಹಾರಿಸಿಬಿಡಲಾಗುವುದು ಎಂದರು. ಏರ್ ಚೀಫ್ ಮಾರ್ಷಲ್ ಎಲ್ ಎಂ ಕಟ್ರೆ ಸ್ಮರಣಾರ್ಥ ಉಪನ್ಯಾಸದ ಕಾರ್ಯಕ್ರಮದ ಹೊರಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಅವರು ಮಾಹಿತಿ ನೀಡಿ, ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಕಳೆದ ತಿಂಗಳು 10,900 ಕೋಟಿ ರೂಪಾಯಿಗಳಲ್ಲಿ ಶೇಕಡಾ 85ರಷ್ಟು ಅನುದಾನ ಬಿಡುಗಡೆಯಾಗಿದೆ ಎಂದರು.
ಖಾಸಗಿಯವರಿಂದ ರಾಕೆಟ್ ಗಳ ಭಾಗಗಳನ್ನು ಖರೀದಿಸಲು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಒಟ್ಟು 30 ಪೋಲಾರ್ ಸ್ಯಾಟಲೈಟ್ ಉಡ್ಡಯನ ವಾಹನಗಳು(ಪಿಎಸ್ಎಲ್ ವಿ) ಮತ್ತು 10 ಜಿಯೊ ಸಿಂಕ್ರೊನಸ್ ಸ್ಯಾಟಲೈಟ್ ಉಡ್ಡಯನ ವಾಹನಗಳು, ಎಂಕೆ 3 ರಾಕೆಟ್ ಗಳನ್ನು 2022ರ ವೇಳೆಗೆ ಅಂತರಿಕ್ಷಕ್ಕೆ ಹಾರಿಬಿಡುವ ಯೋಜನೆಯಿದೆ ಎಂದರು.

ಇಸ್ರೋ ಕೇಂದ್ರ ವರ್ಷಕ್ಕೆ ಮೂರರಿಂದ ನಾಲ್ಕು ರಾಕೆಟ್ ಗಳನ್ನು ಉಡಾಯಿಸುತ್ತದೆ. ಇನ್ನು ಮುಂದೆ ಪ್ರತಿವರ್ಷ ಸ್ವದೇಶಿ ನಿರ್ಮಿತ 12ರಿಂದ 18 ರಾಕೆಟ್ ಗಳನ್ನು ಉಡಾಯಿಸುವ ಯೋಜನೆಯಿದೆ. ನಮಗೆ ರಾಕೆಟ್ ನ ಬಿಡಿ ಭಾಗಗಳನ್ನು ಒದಗಿಸುವ ಕಂಪೆನಿಗಳು ತಮ್ಮ ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸಬೇಕಾಗುತ್ತದೆ. ಅಲ್ಲದೆ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯ ಕೂಡ ಇರುತ್ತದೆ. ಉತ್ಪಾದನೆ, ತಯಾರಿಕೆ ಮತ್ತು ಗುಣಮಟ್ಟ ನಿಯಂತ್ರಣ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಿಗಳ ನೇಮಕ ಆಗಬೇಕಾಗುತ್ತದೆ ಎಂದು ಶಿವನ್ ಹೇಳುತ್ತಾರೆ.

ಪ್ರಸ್ತುತ ಇಸ್ರೋಗೆ ಸ್ಯಾಟಲೈಟ್ ತಯಾರಿಕೆಗೆ ಬಿಡಿ ಭಾಗಗಳನ್ನು ಮಿಶ್ರಾ ದಾತು ನಿಗಮ್ ಲಿಮಿಟೆಡ್, ಗೋದ್ರೆಜ್ ಏರೋಸ್ಪೇಸ್, ವಾಲ್ಚಂದ್ ಇಂಡಸ್ಟ್ರೀಸ್ ಲಿಮಿಟೆಡ್, ಲಾರ್ಸೆನ್ ಅಂಡ್ ಟರ್ಬೊ ಮತ್ತು ಎಚ್ ಎಎಲ್ ನಂತಹ ಸುಮಾರು 500 ಸಂಸ್ಥೆಗಳು ಪೂರೈಸುತ್ತವೆ.

ಜುಲೈ 19 ಕೊನೆಯ ದಿನ: ಮುಂದಿನ ವರ್ಷ ಜುಲೈ 19ಕ್ಕೆ 12ರಾಕೆಟ್ ಗಳನ್ನು ಉಡಾಯಿಸಲು ಇಸ್ರೊ ಸಂಸ್ಥೆ ಕಾಲಾವಧಿ ಹಾಕಿಕೊಂಡಿದೆ. 40 ರಾಕೆಟ್ ಗಳನ್ನು ನಾಲ್ಕು ವರ್ಷಗಳಲ್ಲಿ ಉಡಾಯಿಸಲು ಸಾಧ್ಯವೇ ಎಂದು ಕೇಳಿದಾಗ, ಅಷ್ಟು ಸಾಧ್ಯವಿಲ್ಲದಿದ್ದರೂ ಅದರ ಹತ್ತಿರಕ್ಕಾದರೂ ತಲುಪಬೇಕು ಎಂದು ಮಹಾತ್ವಾಕಾಂಕ್ಷೆಯನ್ನು ಬಿಚ್ಚಿಟ್ಟರು.

SCROLL FOR NEXT