ರಾಜ್ಯ

ಬೆಂಗಳೂರು-ಮೈಸೂರು ಅಷ್ಟಪಥ ಹೆದ್ದಾರಿ ಕಾಮಗಾರಿ ಸದ್ಯದಲ್ಲೇ ಆರಂಭ: ಹೆಚ್.ಡಿ. ರೇವಣ್ಣ

Nagaraja AB

ಬೆಂಗಳೂರು: ಮೈಸೂರು- ಬೆಂಗಳೂರು ಅಷ್ಟಪಥ ಹೆದ್ದಾರಿ ಯೋಜನೆಗಾಗಿ ಶೇ.64 ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದು ಅಥವಾ ಒಂದೂವರೆ ವರ್ಷದೊಳಗೆ ಯೋಜನೆ ಪೂರ್ಣಗೊಳ್ಳಲಿದೆ  ಎಂದು ಲೋಕೊಪಯೋಗಿ ಸಚಿವ ಎಚ್. ಡಿ. ರೇವಣ್ಣ ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ತ್ವರಿತಗತಿಯಲ್ಲಿ ಭೂ ಸ್ವಾಧೀನಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಎರಡು ಹಂತದಲ್ಲಿ  ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
  ಮೊದಲ ಹಂತದಲ್ಲಿ 3.501 ಕೋಟಿ ರೂಪಾಯಿ ವೆಚ್ಚದಲ್ಲಿ 18 ಕಿಲೋ ಮೀಟರ್ ಹಾಗೂ  ಎನ್ .ಹೆಚ್ 275ರ 74.2 ಕಿಲೋ ಮೀಟರ್ ಹಾಗೂ ಎರಡನೇ ಹಂತದಲ್ಲಿ 2919.81 ಕೋಟಿ ರೂ. ವೆಚ್ಚದಲ್ಲಿ 74.2 ಕಿಲೋಮೀಟರ್  ಮತ್ತು 135.3 ಕಿಲೋ ಮೀಟರ್  ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
SCROLL FOR NEXT