ರಾಜ್ಯದಲ್ಲಿ ಸಂಧಿವಾತತಜ್ಞರ ತೀವ್ರ ಕೊರತೆ, ರೋಗಿಗಳ ಪರದಾಟ
ಬೆಂಗಳೂರು: ಕರ್ನಾಟಕವು ಸಂಧಿವಾತತಜ್ಞರ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಸಂಧಿವಾತ, ಸೋರಿಯಾಟಿಕ್ ಲೂಪಸ್ ಮತ್ತು ವ್ಯಾಸ್ಕುಲೈಟಿಸ್ ಮೊದಲಾದ ರೋಗಗಳಿಂದ ಬಳಲುತ್ತಿರುವ ರೋಗಿಗಳ ರೋಗನಿರ್ಣಯ ಹಾಗು ಚಿಕಿತ್ಸೆ ವಿಳಂಬಕ್ಕೆ ಇದು ಕಾರಣವಾಗಿದೆ.
ಇಷ್ಟಲ್ಲದೆ ರೋಗಿಗಳು ತಮ್ಮ ಚಿಕಿತ್ಸೆಗಾಗಿ ದೂರ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.ಕರ್ನಾಟಕದಲ್ಲಿ ಒಟ್ಟು 32 ಸಂಧಿವಾತತಜ್ಞರು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ 25 ಮಂದಿ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ ಎಂದು ವಿಕ್ರಮ್ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಡಾ ಬಿ ಬಿ ಧರ್ಮಮಾನಂದ ಹೇಳಿದರು. ಮಕ್ಕಳಲ್ಲಿ ಸಹ ಸಂಧಿವಾತ ಸಮಸ್ಯೆಗಳು ಕಾಂಡುಬರುತ್ತಿದ್ದು ಈ ರೀತಿ ಮಕ್ಕಳ ಸಂಧಿವಾತ ಚಿಕಿತ್ಸೆ ನೀಡುವ ತಜ್ಞರ ಸಂಖ್ಯೆ ಕೇವಲ 5 ಇದ್ದು ಇದರಲ್ಲಿ ಮೂವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇನ್ನೂ ಗಮನಾರ್ಹ ವಿಚಾರವೆಂದರೆ ಸಂಧಿವಾತ ಪೀಡಿತರಲ್ಲಿ 80% ನಷ್ಟು ಮಹಿಳೆಯರೇ ಆಗಿದ್ದಾರೆ.ಸಂಧಿವಾತ ರೋಗಿಗಳ ಸಂಖ್ಯೆ ಹೆಚ್ಚಾಗಿರುವ ಕಾರನ ವೈದ್ಯರ ಸಲಹೆಗಾಗಿ ದಿನದ ಮೊದಲೇ ಸಮಯ ನಿಗದಿ ಮಾಡಿಕೊಳ್ಳಬೇಕಿದೆ..ತರಬೇತಿ ಪಡೆದ ತಜ್ಞರು ಮತ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದಾಗಿ, ಸಂಧಿವಾತ ರೋಗಿಗಳ ರೋಗನಿರ್ಣಯ ವಿಳಂಬವಾಗಿದೆ.
ವಿಕ್ರಮ್ ಆಸ್ಪತ್ರೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ರುಮಾಟಾಲಜಿ ಮತ್ತು ಕ್ಲಿನಿಕಲ್ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಆಸ್ಪತ್ರೆಯ ಸಿಇಒ ಸೋಮೇಶ್ ಮಿತ್ತಲ್ ಮಾತನಾಡಿ, "ಸಂಧಿವಾತ ರೋಗದ ಚಿಕಿತ್ಸಾ ಕ್ರಮವನ್ನು ಕಲಿಯಲು ಬಯಸುವವರಿಗೆ ರಾಜ್ಯದಲ್ಲಿ ಸಾಕಷ್ಟು ತರಬೇತಿ ಕೇಂದ್ರಗಳಿಲ್ಲ.ಹೀಗಾಗಿ ನಮ ಸಂಸ್ಥೆ ನುರಿತ ಸಂಧಿವಾತಜ್ಞರನ್ನು ಒಂದೇ ಸೂರಿನಡಿ ತರಲು ಯತ್ನಿಸುತ್ತಿದೆ" ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos