ಬೆಂಗಳೂರು: ಮದ್ಯ ಖರೀದಿ ವಿಚಾರದಲ್ಲಿ ಪ್ರಾರಂಭವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ 
ರಾಜ್ಯ

ಬೆಂಗಳೂರು: ಮದ್ಯ ಖರೀದಿ ವಿಚಾರದಲ್ಲಿ ಪ್ರಾರಂಭವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಮದ್ಯ ಖರೀದಿ ವಿಷಯವಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಮದ್ಯ ಖರೀದಿ ವಿಷಯವಾಗಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಗುರುವಾರ ರಾತ್ರಿ ಬೆಂಗಳೂರಿನ ಈಜಿಪುರದಲ್ಲಿ ನಡೆದ ಘಟನೆಯಲ್ಲಿ ತಮಿಳುನಾಡಿನ ಮೂಲದ ಆಕಾಶ್ ಅಲಿಯಾಸ್ ಚೆನ್ನೈ (19) ಸಾವನ್ನಪ್ಪಿದ್ದಾನೆ. ವಿವೇಕ್ ನಗರ್ ಪೊಲೀಸರು ಆರೋಪಿ, ಮಹೇಂದ್ರನನ್ನು ಬಂಧಿಸಿದ್ದಾರೆ.
ಆಕಾಶ್ ತನ್ನ ಸ್ನೇಹಿತ ಮಹೇಂದ್ರ ಗೆ ನಿತ್ಯವೂ ತನಗಾಗಿ ಮದ್ಯ್ಸ ಖರೀದಿಸುವಂತೆ  ಕೇಳುತ್ತಿದ್ದನೆನ್ನಲಾಗಿದ್ದು ಇದೇ ಕಾರಣದಿಂದ ಕೊಲೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಆಕಾಶ್ ಇಂದಿರಾ ಲೇಔಟ್ ನಲ್ಲಿ ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದನು. ಆತ ನಿರುದ್ಯೋಗಿಯಾಗಿದ್ದು ಆಕಾಶ್ ಮಹೇಂದ್ರಗೆ  ನಿತ್ಯವೂ ಮದ್ಯ ಸರಬರಾಜು ಮಾಡುವಂತೆ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಬಿರುಸಿನ ಮಾತುಕತೆ ನಡೆದಿತ್ತು.
ಏತನ್ಮಧೆ ಆಕಾಶ್ ತನ್ನ ಪೋಷಕರನ್ನು ಕಾಣಲು ತಮಿಳುನಾಡಿಗೆ ಹೋಗಿದ್ದವನು ಎರಡು ದಿನಗಳ ಹಿಂದೆ ವಾಪಾಸಆಗಿದ್ದ. ಆತ ತನ್ನದೇ ಗ್ಯಾಂಗ್ ಒಂದನ್ನು ಕಟ್ಟಲು ಉದ್ದೇಶಿಸಿದ್ದು ಸ್ಥಳೀಯರಲ್ಲಿ ಭಯ ಮೂಡಿಸಿದ್ದ ಇತರೆ ಗ್ಯಾಂಗ್ ನ ರೌಡಿಗಳನ್ನು ಹಿಮ್ಮೆಟ್ಟಿಸಬೇಕೆಂದುಕೊಂಡಿದ್ದ, ಈ ವಿಚಾರವನ್ನು ಆಕಾಶ್ ಮಹೇಂದ್ರನಿಗೂ ತಿಳಿಸಿದ್ದ. 
ಇದರಿಂದ ಕುಪಿತನಾದ ಮಹೇಂದ್ರ ಅವರನ್ನು ಸ್ಮಶಾನಕ್ಕೆ ಕರೆದೊಯ್ದು ಆತನಿಗೆ ಬಲವಂತವಾಗಿ ಮದ್ಯವನ್ನು ಕುಡಿಸಿದ್ದ ಅಲ್ಲದೆ ಅವನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದನು.
ಆಕಾಶ್ ಮದ್ಯ ಖರೀದ್ಸಲು ಹಣವಿಲ್ಲದಾಗ ನನ್ನ ಬಳಿ ಹಲವು ಬಾರಿ ಹಣ ಕೀಳುತ್ತಿದ್ದ, ನನಗೆ ನಿತ್ಯವೂ ಕಿರುಕುಳ ನೀಡಿ ಹಿಂಸಿಸುತ್ತಿದ್ದ. ಇದರಿಂದ ಪಾರಾಗಲು ನಾನು ಅವನನ್ನು ಹತ್ಯೆ ಮಾಡಬೇಕಾಯಿತು ಎಂದು ಮಹೇಂದ್ರ ಪೋಲೀಸರಿಗೆ ತಿಳಿಸಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT