ರಾಜ್ಯ

ಉಚಿತ ಬಿಎಂಟಿಸಿ ಪಾಸ್ ಪಡೆಯಲು ಕಟ್ಟಡ ಕಾರ್ಮಿಕರ ನಿರಾಸಕ್ತಿ

Nagaraja AB
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಕಟ್ಟಡ ಕಾರ್ಮಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಉಚಿತ ಬಸ್ ಪಾಸ್ ನೀಡಲಾಗುತ್ತದೆ. ಆದರೆ. ಈ ಫಲಾನುಭವಿಗಳಲ್ಲಿ ಕೇವಲ  763 ಕಟ್ಟಡ ಕಾರ್ಮಿಕರು ಈ ಸೌಕರ್ಯವನ್ನು ಬಳಸಿಕೊಂಡಿದ್ದು, ಬಹುತೇಕ ಮಂದಿ ಪಾಸ್ ಪಡೆಯಲು ನಿರಾಸಕ್ತಿ ತೋರಿದ್ದಾರೆ.
ಪ್ಲಂಬರ್, ಕಟ್ಟಡ ಕಾರ್ಮಿಕರು ಸೇರಿದಂತೆ  ಕಾರ್ಮಿಕರ ಇಲಾಖೆಯಲ್ಲಿ 1 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ. ಇವರೆಲ್ಲರಿಗೂ   ಉಚಿತವಾಗಿ ಬಸ್ ಪಾಸ್ ನೀಡುವ ಯೋಜನೆಯನ್ನು   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.21 ರಂದು ಜಾರಿಗೊಳಿಸಿದ್ದರು.
ಉಚಿತ ಪಾಸ್ ನೀಡಲು ಬಿಎಂಟಿಸಿ ಸಿದ್ದವಿದೆ. ಆದರೆ, ಪ್ರತಿಕ್ರಿಯೆ ನಿರಾಶದಾಯಕವಾಗಿದೆ. ಶಾಂತಿನಗರ ಬಸ್ ನಿಲ್ದಾಣದಲ್ಲಿ ಇಬ್ಬರು ಸಂಚಾರ ನಿಯಂತ್ರಕರನ್ನು ಈ ಕೆಲಸಕ್ಕಾಗಿ ನಿಯೋಜಿಸಲಾಗಿದೆ. ಆದರೆ, ಕೆಲವೇ ಮಂದಿ ಮಾತ್ರ ಪಾಸ್ ಪಡೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಬಿಎಂಟಿಸಿ ಅಧಿಕಾರಿಗಳು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಬಹುತೇಕ ಕಟ್ಟಡ ಕಾರ್ಮಿಕರು ಲಾರಿ, ಆಟೋಗಳ ಮೂಲಕ ನಗರಕ್ಕೆ ಬರುತ್ತಾರೆ. ಇದರಿಂದಾಗಿ ಅವರಿಗೆ ಪಾಸಿನ ಅಗತ್ಯತೆ ಕಂಡುಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಕೆಎಸ್ ಆರ್ ಸಿಟಿ ಬಸ್ ನಲ್ಲಿ  ಇಬ್ಬರು ಮಕ್ಕಳೂ ಪ್ರಯಾಣಿಸಬಲ್ಲಾ ಉಚಿತ ಪಾಸ್ ನೀಡಲಾಗುತ್ತದೆ. ಆದರೆ, ಶಾಲಾ, ಕಾಲೇಜುಗಳಿಗೆ ಹೋಗುವಂತಹ ಮಕ್ಕಳಿಗೆ ಮಾತ್ರ 3 ರಿಂದ 5 ತಿಂಗಳ ಅವಧಿಯ ಪಾಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT