ಎಚ್ ಡಿ ಕುಮಾರಸ್ವಾಮಿಗಾಗಿ ಕಾಯುತ್ತಿರುವ ಜನ 
ರಾಜ್ಯ

ಸಿಎಂ ಕುಮಾರಸ್ವಾಮಿಗಾಗಿ 7 ಗಂಟೆ ಕಾದ ಜನ. 10 ನಿಮಿಷದಲ್ಲಿ ಜನತಾ ದರ್ಶನ ಮುಕ್ತಾಯ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ಆಯ್ಕೆ ಮಾಡಿದ ತವರು ಜಿಲ್ಲೆಯ ಜನತೆಯನ್ನು ಸುಮಾರು...

ರಾಮನಗರ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ಆಯ್ಕೆ ಮಾಡಿದ ತವರು ಜಿಲ್ಲೆಯ ಜನತೆಯನ್ನು ಸುಮಾರು ಏಳು ಗಂಟೆಗಳ ಕಾಲ ಕಾಯಿಸಿ, ಕೇವಲ 10 ನಿಮಿಷದಲ್ಲಿ ಅವರ ಅಹವಾಲು ಆಲಿಸಿ ಹೊರಟು ಹೋದರು.
ಸೋಮವಾರ ರಾಮನಗರ ಜಿಲ್ಲೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಇಂದು ಬೆಳಗ್ಗೆ 9ಕ್ಕೆ ಜನತಾ ದರ್ಶನಕ್ಕೆ ನಿಗದಿಯಾಗಿತ್ತು. ಇದಕ್ಕಾಗಿ ಜಿಲ್ಲೆಯ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದರು. ಆದರೆ, ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ ಸಿಎಂ ಮೊದಲೇ ನಿಗದಿಯಾಗಿದ್ದ ಅಧಿಕಾರಿಗಳ ಸಭೆಗೆ ತೆರಳಿದರು. ಸಭೆ ಬಳಿಕ ಊಟಕ್ಕೆ ತೆರಳಿದ ಸಿಎಂ ಜನತಾ ದರ್ಧನ ನಡೆಸಿದ್ದು ಮಧ್ಯಾಹ್ನ 4.40ಕ್ಕೆ.
ಸಿಎಂಗಾಗಿ ಕಾಯುತ್ತಿದ್ದ ದಿವ್ಯಾಂಗರು, ವೃದ್ಧರಿಗೆ ಊಟ, ಕುಳಿತುಕೊಳ್ಳುವ ಆಸನವಿಲ್ಲದೆ ಪರದಾಟ ನಡೆಸಿದರು. ಅಹವಾಲು ನೀಡಲು ಜಿ.ಪಂ. ಕಚೇರಿ ಆವರಣದಲ್ಲಿ ಪರದಾಡುತ್ತಿದ್ದರು.  ಕೊನೆಗೆ 4.40ಕ್ಕೆ ಆಗಮಿಸಿದ ಸಿಎಂ 10 ನಿಮಿಷದಲ್ಲಿ ಜನತಾ ದರ್ಶನ ಮುಗಿಸಿ ಮತ್ತೊಂದು ಸಭೆಗೆ ತೆರಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!