ಬೆಳಗಾವಿ: ಮಕ್ಕಳ ಕಳ್ಳರೆಂದು ಶಂಕಿಸಿ ವ್ಯಕ್ತಿಯ ಹತ್ಯೆ ನಡೆದ ಸಂಬಂಧ, .ಸಂತ್ರಸ್ತರ ಕುಟುಂಬ ಸದಸ್ಯರು ತನಿಖೆಗೆ ತೆಲಂಗಾಣ ಸರ್ಕಾರ ಕೂಡ ಕೈ ಜೋಡಿಸಬೇಕೆಂದು ಮನವಿ ಮಾಡಿದೆ.
ಮೊಹಮದ್ ಅಜಮ್ ಹತ್ಯೆಯಾಗಿಲ್ಲ, ಆತ ಅಪಘಾತದಲ್ಲಿ ಸಾವನ್ನಪ್ಪಿದ್ದ ಎಂದು ಬಿಜೆಪಿ ಶಾಸಕ ಪ್ರಭು ಚವಾಣ್ ನೀಡಿದ ಹೇಳಿಕೆ ಬೆನ್ನಲ್ಲೇ ಮೊಹಮದ್ ಕುಟುಂಬಸ್ಥರು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನನ್ನ ಸಹೋದರನನ್ನು ಕರ್ನಾಟಕದ ಜನ ಕ್ರೂರವಾಗಿ ಕೊಂದಿದ್ದಾರೆ, ನಮಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ತೆಲಂಗಾಣ ಸರ್ಕಾರ ಕರ್ನಾಟಕ ಜೊತೆ ಸಂವಹನ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಶಾಸಕರು ಹೇಳಿರುವಂತೆ ನನ್ನ ಸಹೋದರ ಅಪಘಾತದಲ್ಲಿ ಗಾಯಗೊಂಡು ಸತ್ತಿಲ್ಲ, ಇಲ್ಲಿನ ಜನ ಆತನ ಮೇಲೆ ಹಲ್ಲೆ ಮಾಡಿದ ಪರಿಣಾಮ ಆತ ಮೃತಪಟ್ಟ ಎಂದು ಮೊಹಮದ್ ಅಜಮ್ ಸಹೋದರ ಅಸ್ಲಂ ಹೇಳಿದ್ದಾರೆ.,
ನಾವು ಮಧ್ಯಮ ವರ್ಗದ ಕುಟುಂಬದಿಂದ ಹ ಬಂದವರು, ನನ್ನ ಸಹೋದರ ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದ, ತಂದೆ ರೈಲ್ವೆ ಇಲಾಖೆಯಲ್ಲಿ ಅಕೌಂಟೆಂಟ್ಆಗಿದ್ದಾರೆ, 2 ವರ್ಷದ ಹಿಂದೆ ಅಜಮ್ ಗೆ ವಿವಾಹವಾಗಿದ್ದು, 18 ತಿಂಗಳ ಮಗು ಇದೆ ಎಂದು ಹೇಳಿದ್ದಾರೆ. ಇನ್ನು ಪ್ರಕರಣವನ್ನು ಡಿಜಿಪಿ ನೀಲಮಣಿ ರಾಜು ನೇರವಾಗಿ ಮಾನಿಟರ್ ಮಾಡುತ್ತಿದ್ದಾರೆ.