ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಮೆಚ್ಚಿನ ಅನ್ನಭಾಗ್ಯ ಯೋಜನೆಗಿಂತ ಸಿಎಂ ಕುಮಾರ ಸ್ವಾಮಿ ಹೊಸ ಬಜೆಟ್ ನಲ್ಲಿ ಜಾರಿಗೆ ತಂದಿರುವ ಯೋಜನೆ ಫಲಾನುಭವಿಗಳಿಗೆ ಹೆಚ್ಚಿನ ಉಪಯುಕ್ತ ಎಂಬ ಮಾತು ಕೇಳಿ ಬಂದಿದೆ.
2018ರ ಮಾರ್ಚ್ ನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಫಲಾನುಭವಿಗಳಿಗೆ, ಬಿಪಿಎಲ್
ಕುಟುಂಬದ ಪ್ರತಿ ವ್ಯಕ್ತಿಗೆ ಅಕ್ಕಿ, ಪ್ರತಿ ಕುಟುಂಬಕ್ಕೆ 1 ಕೆ.ಜಿ ತೊಗರಿ ಬೇಳೆ ಜೊತೆಗೆ , ತಾಳೆ ಎಣ್ಣೆ, ಉಪ್ಪು ಇನ್ನಿತರ ಪದಾರ್ಥಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದು, ಇದರ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ.
ಸಿಎಂ ಕುಮಾರ ಸ್ವಾಮಿ ಮಂಡಿಸಿದ 2018-19ರ ಬಜೆಟ್ ನಲ್ಲಿ 7ಕೆಜಿ ಅಕ್ಕಿಗೆ ಬದಲಾಗಿ 5 ಕೆಜಿ ಅಕ್ಕಿ ನೀಡಲು ನಿರ್ದರಿಸಲಾಗಿದೆ. ಇದಕ್ಕೆ ಫಲಾನುಭವಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ಬಜೆಟ್ ಭಾಷಣದ ವೇಳೆ ಸಿಎಂ ಕುಮಾರ ಸ್ವಾಮಿ, 7ರಿಂದ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು ಜೊತೆಗೆ ತೊಗರಿ ಬೇಳೆ, ಉಪ್ಪು , ತಾಳೆ ಎಣ್ಣೆಯನ್ನು ಸಬ್ಸಿಡಿ ದರದಲ್ಲಿ ನೀಡಲು ನಿರ್ದರಿಸಿರುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಮಾರುಕಟ್ಟೆಯಲ್ಲಿ 29-30 ರು ನೀಡಿ ಪ್ರತಿ ಕೆಜಿ ಅಕ್ಕಿಯನ್ನು ಖರೀದಿಸುತ್ತದೆ ಇದಕ್ಕೆ ಸುಮಾರು 1,500ಕೋಟಿ ಹಣ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕುಮಾರ ಸ್ವಾಮಿ 2ಕೆಜಿ ಅಕ್ಕಿ ಕಡಿಮೆ ಮಾಡಿದ್ದಾರೆ, ತಮ್ಮ ನೆಚ್ಚಿನ ಯೋಜನೆಯಲ್ಲಿ ಕಡಿತ ಮಾಡಿದ್ದಕ್ಕಾಗಿ ಸಿದ್ದರಾಮಯ್ಯ ಕುಮಾರ ಸ್ವಾಮಿ ಅವರಿಗೆ ಪತ್ರ ಬರೆದಿದ್ದರು, ಇನ್ನು ಈ ಸಂಬಂಧ ಪರಿಶೀಲನೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ.
ಸಬ್ಸಿಡಿ ದರದಲ್ಲಿ ತಾಳೆಎಣ್ಣೆ ನೀಡುವುದಕ್ಕೆ ಶೇ.85 ರಷ್ಟು ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್ನು ಶೇ. 91 ಮಂದಿ ಸಕ್ಕರೆಯನ್ನು ಸಬ್ಸಿಡಿ ದರದಲ್ಲಿ ನೀಡುವುದಕ್ಕೆ ಸಹಮತ ವ್ಯಕ್ತ ಪಡಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಪಡಿತರ ಖರೀದಿಗಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಪ್ರಸಕ್ತ ವರ್ಷ ಬಿಪಿಎಲ್ ಕಾರ್ಡ್ ಗೆ ಹೆಚ್ಚುವರಿಯಾಗಿ 22 ಲಕ್ಷ ಕುಟುಂಬಗಳು ಸೇರ್ಪಡೆಯಾಗಿವೆ, ಹೀಗಾಗಿ ಅಕ್ಕಿ ಕಡಿತ ಅನಿವಾರ್ಯ.
ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೇ ಲಾಜಿಕ್ ಅಳವಡಿಸಿಕೊಳ್ಳಲಾಗಿತ್ತು, ಕಳೆದ ವರ್ಷ ಪಡಿತರದಲ್ಲಿ ತಾಳೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ನೀಡುವುದನ್ನು ಸ್ಥಗಿತಗೊಳಿಸಿ ತೊಗರಿ ಬೇಳೆ ನೀಡುವುದನ್ನು ಪರಿಚಯಿಸಲಾಗಿತ್ತು. ಆವ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಯು ಟಿ ಖಾದರ್, ಅಕ್ಕಿಯನ್ನು 7ಕೆಜಿ ಅಕ್ಕಿ, ತೊಗರಿ ಬೇಳೆ ಜೊತೆಗೆ ಅನಿಲ ಭಾಗ್ಯ ಯೋಜನೆಯಡಿ ಉಚಿತ ಎಲ್ ಪಿಜಿ ಕನೆಕ್ಷನ್ ನೀಡಿದ್ದಾಗಿ ತಿಳಿಸಿದ್ದರು.