ಅಮರಿಂದರ್ ಸಿಂಗ್ 
ರಾಜ್ಯ

ಭಯೋತ್ಪಾದಕರ ಬಿಡುಗಡೆ: ಎಚ್.ಡಿ. ಕುಮಾರಸ್ವಾಮಿಗೆ ಪಂಜಾಬ್ ಸಿಎಂ ಪತ್ರ

ಉಗ್ರ ಗುರುದೀಪ್ ಸಿಂಗ್ ಖೇರಾ ಅಕಾಲಿಕ ಬಿಡುಗಡೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಿ.ಎಂ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ...

ಚಿತ್ರದುರ್ಗ: ಉಗ್ರ ಗುರುದೀಪ್ ಸಿಂಗ್ ಖೇರಾ ಅಕಾಲಿಕ ಬಿಡುಗಡೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್  ಸಿಂಗ್ ಸಿ.ಎಂ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. 
ಖೇರಾ ಒಳ್ಳೆಯ ನಡತೆಯನ್ನು ಪರಿಗಣಿಸಿ ಅನುಕಂಪದ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ, ಸದ್ಯ ಆತನನ್ನು ಪಂಜಾಬ್ ಅಮೃತಸರ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.2015 ರಲ್ಲಿ ಅತನನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು.
ದೆಹಲಿ ಮತ್ತು ಬೀದರ್ ನಲ್ಲಿ ನಡೆದ ಎರಡು ಸ್ಫೋಟ ಪ್ರಕರಣ ಸಂಬಂಧ ಟಾಡಾ ಕಾಯ್ದೆಯ ವಿವಿಧ ಐಪಿಸಿ ಸೆಕ್ಷನ್ ಅನುಸಾರ ಬಂತಾ ಸಿಂಗ್ ಪುತ್ರ ಗುರ್ದೀಪ್ ಸಿಂಗ್ ಅಲಿಯಾಸ್ ದೀಪ್ ಕಳೆದ 25 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದು, ಕಾರಾಗೃಹ ಇಲಾಖೆಯ ಜೊತೆ ಚರ್ಚಿಸಿ  ಆತನ ಬಿಡುಗಡೆ ಸಂಬಂಧ ಮರು ಪರಿಶೀಲನೆ ನಡೆಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
55 ವರ್ಷದ ಖೇರಾ 1990 ರಿಂದ 2015ರ ವರೆಗೆ ಕಲಬುರಗಿ ಜೈಲಿನಲ್ಲಿದ್ದ, ಆತ ಪಂಜಾಬಿನ ಅಮೃತಸರ ಜಿಲ್ಲೆಯ ರಯ್ಯಾ ಗ್ರಾಮದವನಾಗಿದ್ದಾನೆ.
2016ರ ಏಪ್ರಿಲ್ ನಲ್ಲಿ ಆತ ಆರು ವಾರಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಆತನ ವಿರುದ್ಧ 1996ರಲ್ಲಿ ನಡೆದ ದೆಹಲಿ ಮತ್ತು ಕರ್ನಾಟಕದ ಬೀದರ್ ನಲ್ಲಿ  ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗುರುದೀಪ್‌ ವಿರುದ್ಧ ಟಾಡಾ ಕೇಸು ದಾಖಲಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್