ಬೆಂಗಳೂರು: ಇತ್ತೀಚಿಗೆ ಆಯೋಜಿಸಲಾಗಿದ್ದ ಐಐಹೆಚ್ ಎಂ ಉತ್ತಮ ಬಾಣಸಿಗ ಪ್ರಶಸ್ತಿ ಪಡೆದ ನಂತರ ಬೆಂಗಳೂರು ಮೂಲದ 17 ವರ್ಷದ ಯುವಕ ಜಹಾನ್ ಗಪೂರ್ ತನ್ನದೇ ಆದ ಸ್ವಂತ ಬೇಕಿಂಗ್ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.
ಬ್ರೇಡ್ ಅಂಡ್ ಬಟ್ಟರ್ ಬೇಕಿಂಗ್ ಕಂಪನಿ ಆರಂಭಗೊಂಡು ವಾರ ಕಳೆಯುವಷ್ಟರಲ್ಲಿ 50 ಆರ್ಡರ್ ಗಳನ್ನು ಪಡೆದುಕೊಂಡಿದೆ. 17 ವರ್ಷದ ಈ ಯುವಕ ವ್ಯಾಸಂಗ ಹಾಗೂ ಕೆಲಸದ ನಡುವೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದು, ಇದು ಕೆಲಸವಲ್ಲ, ನನ್ನ ಫ್ಯಾಶನ್ ಎಂದು ಹೇಳುತ್ತಾರೆ. ಆಹಾರೊದ್ಯಮದಲ್ಲಿ ಯಾವುದು ಸವಾಲು ಇಲ್ಲ. ಇದೊಂದು ರೀತಿಯಲಲಿ ಪುಟ್ಬಾಲ್ ಇದ್ದ ಹಾಗೆ ಎಂದು ಅವರು ಖುಷಿಯಿಂದ ಹೇಳುತ್ತಾರೆ.
ಶಾಲೆಯಿಂದ ಮನೆಗೆ ಹೋದ ಬಳಿಕ ಜಹಾನ್ ತನ್ನ ಮೊಬೈಲ್ ನಲ್ಲಿಯೇ ಆರ್ಡರ್ ಹಾಗೂ ಸ್ಥಳವನ್ನು ಆನ್ ಲೈನ್ ನಿಂದಲೇ ಚೆಕ್ ಮಾಡುತ್ತಾರೆ. ನಂತರ ಅವರು ಮನೆಗೆ ತಲುಪುವಷ್ಟರಲ್ಲಿ ಸಾಮಾಗ್ರಿಗಳನ್ನು ತಂದು ಹಾಕಿರುವಂತೆ ಸಹಾಯಕರಿಗೆ ತಿಳಿಸುತ್ತಾರೆ. ನಂತರ ಅಡುಗೆ ಸಿದ್ದಗೊಳ್ಳುವುದರಲ್ಲಿ ಹೋಮ್ ವರ್ಕಿಂಗ್ ಮುಗಿಸಿಕೊಳ್ಳುತ್ತಾರೆ. ಇದೆಲ್ಲಾ ಆದ ನಂತರ ಆಪ್ ಮೂಲಕ ಆರ್ಡರ್ ಡೆಲಿವರಿ ಮಾಡುತ್ತಾರೆ.
ಪೈಪೋಟಿ ಸ್ವಂತ ಕಂಪನಿ ಸ್ಥಾಪಿಸಲು ತಮ್ಮಗೆ ಸ್ಪೂರ್ತಿ ನೀಡಿತ್ತು. ಸಮಯ ನಿರ್ವಹಣೆಯನ್ನು ಕಲಿತೆ ಎಂದು ತಿಳಿಸುವ ಜಹಾನ್, ಮುಂದಿನ ವಾರ ವಿಡಿಯೋ ಚಾರಿಟಿ ಆರಂಭಿಸಲು ಯೋಚಿಸಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics