ಬೌರಿಂಗ್ ಇನ್ಸ್ ಟಿಟ್ಯೂಟ್ ಕ್ಲಬ್ 
ರಾಜ್ಯ

ಬೆಂಗಳೂರು: ಬೌರಿಂಗ್ ಕ್ಲಬ್ ಸದಸ್ಯರ ಲಾಕರ್ ನಲ್ಲಿದ್ದ 550 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ವಶ!

ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ ಟಿಟ್ಯೂಟ್ ನ ಲಾಕರ್ ಗಳಲ್ಲಿ ಸದಸ್ಯರೊಬ್ಬರು ರಹಸ್ಯವಾಗಿ ಇಟ್ಟಿದ್ದ ಸುಮಾರು 550 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಆಸ್ತಿಪಾಸ್ತಿ ದಾಖಲೆ ಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯ ಅಧಿಕಾರಿಗಳು ಇಂದು ವಶಪಡಿಸಿದ್ದಾರೆ.

ಬೆಂಗಳೂರು: ನಗರದ ಪ್ರತಿಷ್ಠಿತ ಬೌರಿಂಗ್ ಇನ್ಸ್ ಟಿಟ್ಯೂಟ್  ನ ಲಾಕರ್ ಗಳಲ್ಲಿ ಸದಸ್ಯರೊಬ್ಬರು ರಹಸ್ಯವಾಗಿ  ಇಟ್ಟಿದ್ದ ಸುಮಾರು 550 ಕೋಟಿ ರೂ. ಮೌಲ್ಯದ    ಚಿನ್ನಾಭರಣ, ಆಸ್ತಿಪಾಸ್ತಿ ದಾಖಲೆ ಪತ್ರಗಳನ್ನು  ಆದಾಯ ತೆರಿಗೆ ಇಲಾಖೆ ಹಾಗೂ  ಜಾರಿನಿರ್ದೇಶನಾಲಯ ಅಧಿಕಾರಿಗಳು  ಇಂದು ವಶಪಡಿಸಿದ್ದಾರೆ.

ಕ್ಲಬ್ ನ ಅಧಿಕಾರಿಗಳು ಮಾಹಿತಿ ನೀಡಿದ ನಂತರ  1993 ರಿಂದಲೂ ಕ್ಲಬ್ ಸದಸ್ಯರಾಗಿರುವ  ಉದ್ಯಮಿ ಅವಿನಾಶ್ ಅಮರಲಾಲ್ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ   ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ವರ್ಷ ಕಳೆದಿದ್ದರೂ ಅವಿನಾಶ್  ಅಮರ್ ಲಾಲ್  ಲಾಕರ್ ತೆಗೆಯದಿದ್ದರಿಂದ ಈ ಬಗ್ಗೆ   ಹಲವು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ  ಲಾಕರ್ ಮುರಿದು ನೋಡಿದ್ದಾಗ  ಆರು ಬ್ಯಾಗ್ ಗಳು ಕಂಡುಬಂದವು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು  ಬೌರಿಂಗ್ ಇನ್ಸ್ ಟಿಟ್ಯೂಟ್  ಕ್ಲಬ್ ನ ಕಾರ್ಯದರ್ಶಿ ಎಚ್. ಎಸ್.   ಶ್ರೀಕಾಂತ್ ಹೇಳಿದ್ದಾರೆ.
ಆ ಬ್ಯಾಗ್ ನಲ್ಲಿ ಹಣ, ಚಿನ್ನಾಭರಣ ಇರಬಹುದೆಂದು ಶಂಕಿಸಿದ್ದೇವೆ. ನಿನ್ನೆ ರಾತ್ರಿ  10-30 ರ ಸುಮಾರಿನಲ್ಲಿ ಆ ಪ್ರದೇಶವನ್ನು ಪೊಲೀಸರು ನಿರ್ಬಂಧಿಸಿದರು ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ಆದಾಯ ತೆರಿಗೆ  ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆ ಬ್ಯಾಗ್ ತೆರೆದು ನೋಡಿದಾಗ  3.90 ಕೋಟಿ ರೂ. ನಗದು, 7.80 ಕೋಟಿ ರೂ. ಮೌಲ್ಯದ ಚಿನ್ನಾಭರಣ, 15 ಲಕ್ಷ ರೂ. ಮೌಲ್ಯದ ರೊಲೆಕ್ಸ್ ವಾಚ್, 30 ರಿಂದ 35 ಲಕ್ಷ ರೂ. ಮೌಲ್ಯದ ಪ್ಯೂಜಿಯಟ್ ವಾಚ್  ಕಂಡುಬಂದಿತ್ತು.  ಅಲ್ಲದೇ ದೇವನಹಳ್ಳಿ,  ಬೇಗೂರು ,ಮತ್ತಿತರ ಕಡೆಗಳಲ್ಲಿನ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಸಹಿ ಮಾಡಿರುವ ಚೆಕ್ ಕಂಡುಬಂದಿದೆ.
ಕೆಲವರು ನಾನಿಲ್ಲದ ಸಂದರ್ಭದಲ್ಲಿ ನನ್ನ ಮನೆಯ ಹತ್ತಿರ ಹೋಗಿ  ವಿಚಾರಿಸಿದ್ದಾರೆ. ಮತ್ತೊಬ್ಬ ಕಚೇರಿಗೆ ಬಂದು ಆಸ್ತಿ ಪತ್ರ ನೀಡಿದ್ದರೆ 5 ಕೋಟಿ ರೂಪಾಯಿ ನೀಡುವುದಾಗಿ ಆಮಿಷ ಒಡ್ಡಿದರು ಎಂದು ತಿಳಿಸಿದರು.
ಅವಿನಾಶ್ ನನ್ನು ಸದ್ಯ  ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದ್ದು,ಅವಿನಾಶ್ ಸಹಕಾರ ನೀಡುತ್ತಿರುವುದಾಗಿ ತಿಳಿದುಬಂದಿದೆ.  ಹಣ ಲಾಕರ್ ನಲ್ಲಿನ ದುರ್ಬಳಕೆ ಸಂಬಂಧ ಕ್ಲಬ್ ಅವಿನಾಶ್ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ