ಕೆ.ಜೆ. ಜಾರ್ಜ್‌ 
ರಾಜ್ಯ

ಚಾಮರಾಜನಗರದಲ್ಲಿ 162 ಕೋಟಿ ರು. ಮೌಲ್ಯದ 94 ಹೊಸ ಯೋಜನೆ: ಕೆ.ಜೆ ಜಾರ್ಜ್

ಚಾಮರಾಜನಗರದಲ್ಲಿ 162 ಕೋಟಿ ರು ವೆಚ್ಚದಲ್ಲಿ 94 ಹೊಸ ಯೋಜನೆಗಳನ್ನು ಆರಂಭಿಸಲಿದ್ದು ಸ್ಥಳೀಯರಿಗೆ ಉದ್ಯೋಗವಕಾಶಗಳು ಹೆಚ್ಚಲಿವೆ

ಬೆಂಗಳೂರು: ಚಾಮರಾಜನಗರದಲ್ಲಿ 162 ಕೋಟಿ ರು ವೆಚ್ಚದಲ್ಲಿ 94 ಹೊಸ ಯೋಜನೆಗಳನ್ನು ಆರಂಭಿಸಲಿದ್ದು ಸ್ಥಳೀಯರಿಗೆ ಉದ್ಯೋಗವಕಾಶಗಳು ಹೆಚ್ಚಲಿವೆ.
ಲೂಕಿನ ಬದನಗುಪ್ಪೆ - ಕೆಲ್ಲಂಬಳ್ಳಿ ಗ್ರಾಮದ ಬಳಿ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಸಲುವಾಗಿ ಉದ್ಯಮಿಗಳನ್ನು ಇತ್ತ ಆಕರ್ಷಿಸಬೇಕಾಗಿದ್ದು, ಅಗತ್ಯವಾದ ಎಲ್ಲ ರೀತಿಯ ಸಹಕಾರಕ್ಕೆ ತಾವು ಸಿದ್ಧ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.
ಬದನಗುಪ್ಪೆ - ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 786 ಕೋಟಿ ರು ಬಂಡವಾಳ ಹೂಡಲಿದ್ದು, 46 ಎಕರೆ ಪ್ರದೇಶದಲ್ಲಿ ಸಟ್ಲೇಜ್ ಟೆಕ್ಸ್ ಟೈಲ್ ಆರಂಭವಾಗಲಿದೆ, ಇಲ್ಲಿ ಸ್ಪೋರ್ಟ್ಸ್ ವೇರ್ ಉತ್ಪನ್ನಗಳನ್ನು ತಯಾರಿಸಲಿದ್ದು, ಸುಮಾರು 1,800 ಮಂದಿಗೆ ಉದ್ಯೋಗವಾಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ. 
ಗುಂಡ್ಲುಪೇಟೆ ಮತ್ತು ಯಳಂದೂರು ತಾಲೂಕುಗಳು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದು, ಕೊಳ್ಳೆಗಾಲ ಮತ್ತು ಚಾಮರಾಜನಗರ ತಾಲೂಕುಗಳು ಕೂಡ ಅತಿ ಹಿಂದುಳಿದಿವೆ,
ಸದ್ಯಕ್ಕೆ ಉದ್ಯಮಗಳು ಆರಂಭವಾಗಲು ಅಗತ್ಯ ಇರುವ ನೀರು, ವಿದ್ಯುತ್‌ ನೀಡಲು ಸಹ ತಾತ್ಕಾಲಿಕವಾಗಿ ವ್ಯವಸ್ಥೆ ಇದೆ. ಉದ್ಯಮಿಗಳು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬರುವಂತೆ ಉತ್ತೇಜಿಸಲು ಅಧಿಕಾರಿಗಳು ಇಲಾಖಾ ಮಟ್ಟದಲ್ಲಿ ಶ್ರಮವಹಿಸಿ ಎಂದು ತಿಳಿಸಿದರು. 
ಆರಂಭದಲ್ಲಿ ಒಂದಷ್ಟು ಕೈಗಾರಿಕೆ ಉದ್ಯಮಗಳನ್ನು ಆರಂಭಿಸಿ ಪೂರಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಕಾರ್ಯ ನಡೆದರೆ ಇನ್ನಷ್ಟು ಉದ್ಯಮಿಗಳು ಕೈಗಾರಿಕಾ ಘಟಕಗಳ ಸ್ಥಾಪನೆಗೆ ಮುಂದೆ ಬರಲಿದ್ದಾರೆ. ಹೀಗಾಗಿ ಪ್ರತಿ ಇಲಾಖೆಗಳು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?