ಕೆ ಬಿ ಕೋಳಿವಾಡ್ 
ರಾಜ್ಯ

ಸರ್ಕಾರಿ ಬಂಗಲೆಯ ಸೋಫಾ, ಮಂಚಗಳನ್ನು ಮನೆಗೆ ಕೊಂಡೊಯ್ದ ಕೋಳಿವಾಡ

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.​ ಕೋಳಿವಾಡ ಅವರು ಸರ್ಕಾರಿ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ಸೋಫಾ ಸೆಟ್....

ಬೆಂಗಳೂರು: ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.​ ಕೋಳಿವಾಡ ಅವರು ಸರ್ಕಾರಿ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ಸೋಫಾ ಸೆಟ್ ಹಾಗೂ ನಾಲ್ಕು ಮಂಚಗಳನ್ನು ತಮ್ಮ ಸ್ವಂತ ಮನಗೆ ಕೊಂಡೊಯ್ದಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.
ಕೋಳಿವಾಡ್ ಸ್ಪೀಕರ್ ಆಗಿದ್ದಾಗ ಅವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಗೆ ಸರ್ಕಾರದ ಹಣದಿಂದ ಖರೀದಿಸಿದ್ದ ಸೋಫಾ ಹಾಗೂ ಕಾಟ್ ಗಳು ಈಗ ಅವರ ಸ್ವಂತ ಮನೆ ಸೇರಿವೆ.  
ಇನ್ನು ಸರ್ಕಾರಿ ಸೋಫಾ ಮತ್ತು ಮಂಚಗಳನ್ನು ತಮ್ಮ ಮನೆಗೆ ಕೊಂಡೊಯ್ದಿರುವುದನ್ನು ಸಮರ್ಥಿಸಿಕೊಂಡಿರುವ ಕೆ.ಬಿ.ಕೋಳಿವಾಡ್ ಅವರು, ನಾನು ಸ್ಪೀಕರ್ ಆಗಿದ್ದಾಗ ನನಗೆ ಬೇಕಾದ ರೀತಿ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದೆ. ಹಾಗಾಗಿ ಒಂದು ಸೋಫಾ ಮತ್ತು ನಾಲ್ಕು ಕಾಟ್ ​ನ್ನು ಮನೆಗೆ ತಂದಿದ್ದೇನೆ. ಮುಂಚೆಯೇ ಪೇಮೆಂಟ್​ ಮಾಡುತ್ತೀನಿ ಎಂದು ಪತ್ರ ಬರೆದುಕೊಟ್ಟೇ ಅವುಗಳನ್ನು ಮನೆಗೆ ತಂದಿದ್ದೀನಿ ಎಂದು ಹೇಳಿದ್ದಾರೆ.
ಈ ಎಲ್ಲ ಪೀಠೋಪಕರಣದ ದರ ಮೂರು ಲಕ್ಷ ರು. ಆಗಬಹುದು. ಈ ಬಗ್ಗೆ ವಿಧಾನಸಭಾ ಕಾರ್ಯದರ್ಶಿಯಿಂದ ಹಣ ಪಾವತಿ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಅವರು ಈ ಪೀಠೋಪಕರಣಗಳಿಗೆ ದರ ನಿಗದಿ ಮಾಡಿದ ಮೇಲೆ ಅದನ್ನು ಭರಿಸುತ್ತೇನೆ. ಈ ಹಿಂದೆಯೂ ಕೆಲ ಸಭಾಧ್ಯಕ್ಷರು ಈ ರೀತಿ ಮಾಡಿದ್ದಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರಿ ಪೀಠೋಪಕರಣ ಹಿಂದಿರುಗಿಸುವಂತೆ ವಿಧಾನಸಭೆ ಕಾರ್ಯದರ್ಶಿಗಳು ಮಾಜಿ ಸ್ಪೀಕರ್ ಕೋಳಿವಾಡ್ ಅವರಿಗೆ ಪತ್ರ ಬರೆದಿದ್ದು, 14ನೇ ವಿಧಾನಸಭೆಯ ಅವಧಿಯಲ್ಲಿ ತಾವು ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ, ತಮಗೆ ಕ್ರೆಸೆಂಟ್​ ರಸ್ತೆಯಲ್ಲಿ ಹಂಚಿಕೆಯಾಗಿದ್ದ ಸರ್ಕಾರಿ ವಸತಿಗೃಹಕ್ಕೆ ತಮ್ಮ ಕೋರಿಕೆಯಂತೆ ಕೆಲ ಪೀಠೋಪಕರಣಗಳನ್ನು ಸರಬರಾಜು ಮಾಡಲಾಗಿದ್ದು, ಅದನ್ನು ಹಿಂತಿರುಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎರಡು ನ್ಯಾಚುರಲ್​ ವುಡ್​ ಎಂಡಿಎಫ್​ ಬೋರ್ಡ್​ ಸ್ಟೋರೇಜ್​ ಸೌಲಭ್ಯ ಹೊಂದಿರುವ ಮಂಚಗಳು, ಮತ್ತೊಂದು ಎಂಡಿಎಫ್​ ಬೋರ್ಡ್​ ಸ್ಟೋರೇಜ್​ ಹೊಂದಿರುವ ಕಿಂಗ್​ ಸೈಜ್​ ಮಂಚ, ಇಟಾಲಿಯನ್​ ಬಫಾಲೋ ಲೆದರ್​ ಸೋಫಾಗಳನ್ನು ಸರ್ಕಾರ ಹಿಂಪಡೆಯದೆ ಇರುವುದನ್ನು ಪಟ್ಟಿ ಸಮೇತ ಉಲ್ಲೇಖಿಸಿದೆ.
ಅಕ್ರಮವಾಗಿ ಸರ್ಕಾರದ ಪಿಠೋಪಕರಣಗಳನ್ನು ಮನೆಗೆ ಕೊಂಡೊಯ್ದ ಕೋಳಿವಾಡ್ ಕ್ರಮವನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT