ಮಲ್ಪೆ ಬೀಚ್ 
ರಾಜ್ಯ

ಉಡುಪಿ: ದೈತ್ಯ ಅಲೆಯಲ್ಲಿ ಕೊಚ್ಚಿಹೋದ ಯುವಕರು, ಒಬ್ಬನ ಮೃತದೇಹ ಪತ್ತೆ

ಮಲ್ಪೆ ಪಡುಕೆರೆ ಬೀಚ್ ಬಳಿ ದೈತ್ಯ ನೀರಿನ ಅಲೆಗಳು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಉಡುಪಿ: ಮಲ್ಪೆ ಪಡುಕೆರೆ ಬೀಚ್ ಬಳಿ  ದೈತ್ಯ ನೀರಿನ ಅಲೆಗಳು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ  ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ನಿತೀಶ್ (29)  ಮತ್ತು ನಿಶಾಂತ್ (22)  ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.  ಮೀನುಗಾರಿಕೆಗೆ ಹೋಗಿದ್ದ ಐವರು ತೀರ ಪ್ರದೇಶಕ್ಕೆ ವಾಪಾಸ್ ಬರುತ್ತಿರುವಾಗ ಈ ದುರಂತ ಉಂಟಾಗಿದ್ದು,  ಐವರ ಪೈಕಿ ಮೂವರು ಸುರಕ್ಷಿತವಾಗಿದ್ದಾರೆ.
ನಿತೀಶ್  ಮೃತದೇಹವನ್ನು  ಪತ್ತೆಯಾಗಿದ್ದು,   ಉಡುಪಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.  ನಿಶಾಂತ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ.  ಸ್ಥಳೀಯ ಜನರು,  ಅಗ್ನಿಶಾಮಕ ಸಿಬ್ಬಂದಿ ಹಾಗೂ  ಭದ್ರತಾ ಸಿಬ್ಬಂದಿ ನಾಪತ್ತೆಯಾಗಿರುವ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.
ನಿತೀಶ್  ಉಡುಪಿಯ ಪಿತ್ರೊಡಿಯ ನಿವಾಸಿಯಾಗಿದ್ದು, ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಈ ಸುದ್ದಿಕೇಳಿ  ಕುಟುಂಬ ಸದಸ್ಯರ ರೋಧನ ಮುಗಿಲು ಮಟ್ಟಿತು.  ಸಮುದ್ರ ತೀರ ಪ್ರದೇಶದಿಂದ ಕೇವಲ 200 ಮೀಟರ್ ದೂರದಲ್ಲಿ ದೋಣಿ ಇರುವಂತೆಯೇ ಈ ದುರ್ಘಟನೆ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

SCROLL FOR NEXT