ಸಾಂದರ್ಭಿಕ ಚಿತ್ರ 
ರಾಜ್ಯ

ನೈಸರ್ಗಿಕ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ 'ನಂಬರ್ 1'

ದೇಶದಲ್ಲಿ ನವೀಕರಣ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ತಮಿಳುನಾಡನ್ನು ಹಿಂದಕ್ಕೆ ಹಾಕಿ ...

ಬೆಂಗಳೂರು: ದೇಶದಲ್ಲಿ ನವೀಕರಣ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ತಮಿಳುನಾಡನ್ನು ಹಿಂದಿಕ್ಕಿ ದೇಶದಲ್ಲಿಯೇ ಅತಿ ಹೆಚ್ಚು ನೈಸರ್ಗಿಕ ಇಂಧನ ಉತ್ಪಾದಿಸುವ ರಾಜ್ಯವೆನಿಸಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 12.3 ಗಿಗಾವ್ಯಾಟ್ ನವೀಕರಣ ಇಂಧನ ಉತ್ಪಾದನೆಯಾಗಿದ್ದು ಅವುಗಳಲ್ಲಿ 5 ಗಿಗಾವ್ಯಾಟ್ 2017-18ರಲ್ಲಿ ತಯಾರಾಗಿದೆ ಎಂದು ಇಂಧನ ಆರ್ಥಿಕ ಮತ್ತು ಹಣಕಾಸು ವಿಶ್ಲೇಷಣೆ ಸಂಸ್ಥೆಯ ವರದಿ ತಿಳಿಸಿದೆ.

ನವೀಕರಣ ಇಂಧನ ಉತ್ಪಾದನೆಗೆ ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ವಿದ್ಯುತ್ ನ್ನು ಆಮದು ಮಾಡಿಕೊಳ್ಳುವುದರ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ವಿದ್ಯುತ್ ಆಮದಿಗೆ ಪ್ರತಿಯಾಗಿ ನವೀಕರಣ ಇಂಧನ ಉತ್ಪಾದನೆಯಿಂದ 2028ರ ವೇಳೆಗೆ ಇಂಧನ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಸೌರಶಕ್ತಿ ಮತ್ತು ಪವನ ಇಂಧನ ಇಂದು ಕರ್ನಾಟಕದಲ್ಲಿ ಶೇಕಡಾ 27ರಷ್ಟು ಉತ್ಪಾದನೆಯಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಲ್ಲಿದ್ದಲು ಚಾಲಿತ ಥರ್ಮಲ್ ಘಟಕಗಳು ಶೇಕಡಾ 49ರಷ್ಟು ಇಂಧನ ಉತ್ಪಾದಿಸುತ್ತವೆ. ಪರಮಾಣು ಮತ್ತು ವಿದ್ಯುತ್ ಘಟಕಗಳು ಶೇಕಡಾ 12ರಷ್ಟು ಇಂಧನವನ್ನು ಉತ್ಪಾದಿಸುತ್ತಿದೆ ಎಂದು ಕರ್ನಾಟಕ ವಿದ್ಯುತ್ ವಲಯ ಪರಿವರ್ತನೆ ತಿಳಿಸಿದೆ.

ರಾಜ್ಯ ಕಲ್ಲಿದ್ದಲು ಆಧಾರಿತ ಇಂಧನದ ಮೇಲೆ ಅವಲಂಬಿತವಾಗಿರುವುದರಿಂದ ಕಲ್ಲಿದ್ದಲಿನ ಬೆಲೆಪಟ್ಟಿ 2017-18ರಲ್ಲಿ 2,006 ಕೋಟಿಯಿಂದ 9,500 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಡಲ ಮೂಲದ ಕಲ್ಲಿದ್ದಲಿನ ಆಮದಿನ ಬೆಲೆ ಹೆಚ್ಚಳವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಬೇರೆ ದೇಶಗಳಿಂದ ಕಲ್ಲಿದ್ದಲಿನ ಆಮದು 1,364 ಕೋಟಿ ರೂಪಾಯಿ ಹೆಚ್ಚಳವಾಗಿದ್ದು ಅಂತರಾಜ್ಯ ಕಲ್ಲಿದ್ದಲು ಪೂರೈಕೆ ಬೆಲೆ 645 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಕಲ್ಲಿದ್ದಲಿನ ಬೆಲೆ ಹೆಚ್ಚಳವಾಗುತ್ತಿದ್ದಂತೆ ನವೀಕರಣ ಇಂಧನದ ಬೆಲೆ ಕಡಿಮೆಯಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸೋಲಾರ್ ಟೆಂಡರ್ ನಲ್ಲಿ ಪಾವಗಡ ಸೋಲಾರ್ ಪಾರ್ಕ್ 2.82ರಿಂದ 3.06 ಪ್ರತಿ ಕಿಲೋವಾಟ್ -ಗಂಟೆಗೆ ಮಾರಾಟವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದು ಕೋರಿದ ಅನಂತಕುಮಾರ್ ಹೆಗಡೆ!

'ವೃದ್ಧ ಸಮಾಜದತ್ತ ಶ್ರೀಲಂಕಾ': ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಹಿರಿಯರ ಸಂಖ್ಯೆ; 40 ವರ್ಷಗಳಲ್ಲಿ ಮೂರು ಪಟ್ಟು ಜಾಸ್ತಿ!

ನಮಸ್ತೆ.. ಏನ್ರೀ ರಾಹುಲ್ ಹೇಗಿದ್ದೀರಾ? ; ಸಂಸತ್ ಭವನದ ಬಳಿ ಪ್ರಧಾನಿ ಮೋದಿ-Rahul Gandhi ಅಪರೂಪದ ಮುಖಾಮುಖಿ! Video

SCROLL FOR NEXT