ರಾಜ್ಯ

ಬೆಂಗಳೂರು ವಿವಿ, ಬೆಂಗಳೂರು ಕೇಂದ್ರ ವಿವಿ ನಡುವಣ ಭಿನ್ನಮತ ಸ್ಪೋಟ

Nagaraja AB

ಬೆಂಗಳೂರು: ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಕಟ್ಟಡಗಳ ಮಾಲೀಕತ್ವದ ಸಂಬಂಧ  ಬೆಂಗಳೂರು ವಿಶ್ವವಿದ್ಯಾಲಯ ಹಾಗೂ  ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡುವಣ ಹೋರಾಟ ಆರಂಭವಾಗಿದೆ.

ಈ ವೇಳೆಯಲ್ಲೇ  ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅಧಿಕಾರಿಗಲು ಕೊಠಡಿಗಳ ಕೊರತೆ ಹಿನ್ನೆಲೆಯಲ್ಲಿ ಒಂದು ಕೊಠಡಿಯನ್ನು ಹೊಡೆದು ಉತ್ತರ ಪತ್ರಿಕೆಗಳನ್ನು ಇಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದೆ. ಒಂದು ವೇಳೆ ಉತ್ತರ ಪತ್ರಿಕೆಗಳು ಕಳೆದುಹೋದರೆ ಏನು ಮಾಡೋದು ಎಂದು ಬೆಂಗಳೂರು  ವಿವಿ ಮೌಲ್ಯಮಾಪನ  ರಿಜಿಸ್ಟ್ರಾರ್   ಪ್ರೊಫೆಸರ್ ಸಿ . ಶಿವರಾಜ್  ಪ್ರಶ್ನಿಸುತ್ತಾರೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆದ ಮೇಲೆ ಜಾಗದ ಸಮಸ್ಯೆ ಉಂಟಾಗಿದ್ದು, ಈ ಶೈಕ್ಷಣಿಕ ಸಾಲಿನಲ್ಲಿ ತರಗತಿಗಳನ್ನು ಆರಂಭಿಸುವ ಅಗತ್ಯವಿದೆ. ಕೊಠಡಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಬಾಗಿಲನ್ನು ಮಾತ್ರ ಹೊಡೆಯಲಾಗಿದೆ ಎಂದು   ರಿಜಿಸ್ಟ್ರಾರ್  ರಾಮಚಂದ್ರೇಗೌಡ ಹೇಳಿದ್ದಾರೆ.

ಜೂನ್ 30 ರವರೆಗೂ ಸೆಂಟ್ರಲ್ ಕಾಲೇಜ್ ಆವರಣದಲ್ಲಿರುವ ಕಟ್ಟಡಗಳನ್ನು ಮೌಲ್ಯಮಾಪನ ಮತ್ತಿತರ ಕಾರ್ಯಗಳಿಗೆ ಬಳಸಿಕೊಂಡು ಬೆಂಗಳೂರು ಕೇಂದ್ರ ವಿವಿಗೆ ಕೊಡುವುದಾಗಿ ಬೆಂಗಳೂರು ವಿವಿ ಭರವಸೆ ನೀಡಿತ್ತು. ಆದರೆ, ಅವಧಿ ಮುಗಿದ್ದರೂ ಅವರು ಕಟ್ಟಡ ನೀಡಲಿಲ್ಲ.ಅದಕ್ಕಾಗಿಯೇ ಬಾಗಿಲು ಹೊಡೆದು ಉತ್ತರ ಪತ್ರಿಕೆ ಇಟ್ಟಿರುವುದಾಗಿ ರಿಜಿಸ್ಟ್ರಾರ್ ಹೇಳಿದ್ದಾರೆ.

ಆದರೆ ಬೆಂಗಳೂರು ವಿಶ್ವವಿದ್ಯಾಲಯ ಅಧಿಕಾರಿಗಳು ಹೇಳೋದೆ ಬೇರೆ. ಮೂರು ವಿಶ್ವವಿದ್ಯಾಲಯಗಳಾಗಿ ಬೆಂಗಳೂರು ವಿವಿಯನ್ನು ವಿಭಜನೆಯಾದಾಗ  ಮುಂದಿನ ನಾಲ್ಕು ವರ್ಷಗಳ  ಕಾಲ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೋಗುವವರೆಗೂ ಮೌಲ್ಯಮಾಪನ ಮತ್ತು ಫಲಿತಾಂಶವನ್ನು ಮೂಲ ವಿಶ್ವವಿದ್ಯಾಲಯವೇ ನೀಡುವಂತೆ ಸರ್ಕಾರ ಆದೇಶ ನೀಡಿದೆ. ಆದರೆ, ಕೇಂದ್ರ ವಿಶ್ವವಿದ್ಯಾಲಯ ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ.

ಜ್ಞಾನಭಾರತಿ ಆವರಣದಲ್ಲಿ  ಉತ್ತರ ಪತ್ರಿಕೆಗಳ ಮೌಲ್ಯಮಾಪಕ್ಕೆ ಅಗತ್ಯ ಕಟ್ಟಡ ಇಲ್ಲ ಎಂಬುದು ಅವರಿಗೂ ಗೊತ್ತಿದೆ. ಉತ್ತರ ಪತ್ರಿಕೆ ಮೌಲ್ಯಮಾಪನ ವಿಭಾಗ  ಜ್ಞಾನಭಾರತಿಗೆ ಸ್ಥಳಾಂತರವಾಗುವವರೆಗೂ ಅವರು ಸಹಕರಿಸುವಂತೆ  ಶಿವರಾಜ್ ಹೇಳುತ್ತಾರೆ.

SCROLL FOR NEXT