ರಾಜ್ಯ

ಬೆಂಗಳೂರು: ಪೌರ ಕಾರ್ಮಿಕರಿಗೆ ಇಸ್ಕಾನ್‌ ಬದಲು ಇಂದಿರಾ ಕ್ಯಾಂಟೀನ್‌ ಊಟ

Lingaraj Badiger
ಬೆಂಗಳೂರು: ಆಗಸ್ಟ್ 1ರಿಂದ ಪೌರ ಕಾರ್ಮಿಕರಿಗೆ ಇಸ್ಕಾನ್ ಊಟದ ಬದಲು ಇಂದಿರಾ ಕ್ಯಾಂಟೀನ್ ನಿಂದಲೇ ನೇರವಾಗಿ ಊಟ ತಲುಪಿಸಲು ಬಿಬಿಎಂಪಿ ನಿರ್ಧರಿಸಿದೆ.
ಇದುವರೆಗೆ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಿಗೆ ಇಸ್ಕಾನ್‌ ವತಿಯಿಂದ 20 ರುಪಾಯಿಗೆ ಊಟವನ್ನು ನೀಡಲಾಗುತ್ತಿತ್ತು. ಆದರೆ ಇಸ್ಕಾನ್ ನವರು ಒಂದು ಊಟಕ್ಕೆ 25 ರುಪಾಯಿ ನೀಡುವಂತೆ ಕೇಳುತ್ತಿರುವ ಹಿನ್ನೆಲೆಯಲ್ಲಿ ಇಸ್ಕಾನ್‌ ಜತೆಗೆ ಇದ್ದ ಒಪ್ಪಂದ ರದ್ದು ಮಾಡಲಾಗಿದ್ದು, ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ನಿಂದಲೇ ಪೌರ ಕಾರ್ಮಿಕರಿಗೆ ಊಟ ಪೂರೈಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ.
ಪೌರ ಕಾರ್ಮಿಕರು ಊಟಕ್ಕಾಗಿ ಇಂದಿರಾ ಕ್ಯಾಂಟೀನ್ ಗೆ ಹೋಗಬೇಕಾಗಿಲ್ಲ. ಅವರಿಗೆ ಮಸ್ಟರಿಂಗ್ ಕೇಂದ್ರಗಳಲ್ಲೇ ಊಟ ಒದಗಿಸಲಾಗುವುದು ಮತ್ತು ಪ್ರತಿ ಊಟಕ್ಕೆ 20 ರುಪಾಯಿ ನೀಡಲಾಗುವುದು ಎಂದು ಆಯುಕ್ತರಿಗೆ ಹೇಳಿದ್ದಾರೆ.
ಇಸ್ಕಾನ್‌ನಿಂದ ಪೂರೈಸುವ ಆಹಾರದ ಕುರಿತು ಪೌರಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಹಿಂದೆ ಪಾಲಿಕೆಯು ಇಸ್ಕಾನ್‌ ಜೊತೆ ಒಪ್ಪಂದವನ್ನು ಕೈಬಿಡಲು ಮುಂದಾಗಿತ್ತು.
SCROLL FOR NEXT