ರಾಜ್ಯ

ಸೌದಿಯಲ್ಲಿ ನರ್ಸ್ ಅನುಮಾನಾಸ್ಪದ ಸಾವು, 15 ದಿನಗಳಲ್ಲಿ ಪಾರ್ಥಿವ ಶರೀರ ಉಡುಪಿಗೆ ತರುವ ಸಾಧ್ಯತೆ

Nagaraja AB

ಉಡುಪಿ: ಕಳೆದ ವಾರ ಸೌದಿ ಅರಬೀಯಾದಲ್ಲಿ  ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ  ಜಿಲ್ಲೆಯ ಕುತ್ಯಾರ್  ಗ್ರಾಮದ  ನರ್ಸ್  ಹಜೀಲ್ ಜ್ಯೂಸ್ನಾ ಮ್ಯಾಥಿಯಾಸ್ (28) ಪಾರ್ಥಿವ ಶರೀರವನ್ನು 15 ದಿನಗಳೊಳಗೆ ಭಾರತಕ್ಕೆ  ತರುವ ಸಾಧ್ಯತೆ ಇದೆ.

ಆಕೆಯ ಸಾವಿನ ಕುರಿತು ತನಿಖೆ ನಡೆಯುತ್ತಿರುವುದರಿಂದ ಮೃತದೇಹ ತರಲು ವಿಳಂಬವಾಗುತ್ತಿದೆ. ಆಕೆಯ ಸಾವು ಹೇಗೆ ಸಂಭವಿಸಿತ್ತು ಎಂದು ಇನ್ನೂ ನಿಗೂಢವಾಗಿದೆ. ಆದರೆ. ನಾವು ಈಗ ಆಕೆಯ ಪಾರ್ಥಿವ ಶರೀರವನ್ನು ಉಡುಪಿಗೆ ತರಲು ಪ್ರಯತ್ನಿಸುತ್ತಿರುವುದಾಗಿ  ಹಜೀಲ್ ಸಂಬಂಧ ಜೊಸೆಪ್  ಡಿಸೋಜಾ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಮೂಲಕ ಸೌಧಿ ಅರಬೀಯಾದಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿ  ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಧಿಕಾರಿಗಳನ್ನು ಸಂಪರ್ಕಿಸಿದ್ದು,  ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ಪತ್ರೆಯಿಂದ ಇನ್ನೂ ಪಾರ್ಥಿವ ಶರೀರವನ್ನು ನೀಡಲು  15 ದಿನಗಳ ಕಾಲ ಬೇಕಾಗುತ್ತದೆ ಎಂದು ರಾಯಭಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಡಿಸೋಜಾ ಹೇಳಿದ್ದಾರೆ.

ಹಜೀಲ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕವಾಗಿ ದುರ್ಬಲ ಆಗಿರಲಿಲ್ಲ.  ಆಕೆಯ ಸಾವಿನ ಬಗ್ಗೆ ಭಾರತೀಯ ರಾಯಭಾರಿ ಅಧಿಕಾರಿಗಳಿಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಆಕೆಯ ಸಂಬಂಧಿಕರು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

SCROLL FOR NEXT