ರಾಜ್ಯ

ಡಿಕೆಶಿ ಮತ್ತು ಇತರ ನಾಲ್ವರ ವಿರುದ್ಧ ಐಟಿ ಇಲಾಖೆ ವಿಚಾರಣೆಗೆ ಹೈಕೋರ್ಟ್ ತಡೆ

Sumana Upadhyaya

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಮತ್ತು ಇತರ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕರು ಅನುಮತಿ ನೀಡಿರುವುದಕ್ಕೆ ಕರ್ನಾಟಕ ಹೈಕೋರ್ಟ್ ನಿನ್ನೆ ತಡೆ ನೀಡಿದೆ.

ಸಚಿವ ಡಿಕೆ ಶಿವಕುಮಾರ್ ಅವರ ವ್ಯಾಪಾರ ಪಾಲುದಾರ ಸಚಿನ್ ನಾರಾಯಣ್ ಎಂಬುವವರು ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ ವೀರಪ್ಪ, ಐವರ ವಿರುದ್ಧ ವಿಚಾರಣೆ ನಡೆಸಲು ಹೊರಡಿಸಲಾಗಿದ್ದ ಅನುಮತಿಗೆ ತಡೆ ನೀಡಿದ್ದಾರೆ.

ವಿಚಾರಣೆ ಅನುಮತಿ ಆದೇಶ ಐವರಿಗೆ ಒಂದೇ ರೀತಿಯಾಗಿದ್ದರೂ ಕೂಡ ನ್ಯಾಯಾಲಯ ಇವರ ವಿರುದ್ಧದ ಮುಂದಿನ ಎಲ್ಲಾ ನ್ಯಾಯಾಂಗ ವಿಚಾರಣೆಗಳಿಗೆ ಮುಂದಿನ ಆದೇಶದವರೆಗೆ ತಡೆ ತಂದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಗಳಿಗೆ ಕಳೆದ ಮೇ 28ರಂದು ಅನುಮತಿ ನೀಡಲಾಗಿತ್ತು.

ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ಎನ್ ರಾಜೇಂದ್ರ ಇತರ ನಾಲ್ವರು ಆರೋಪಿಗಳಾಗಿದ್ದಾರೆ.

SCROLL FOR NEXT