ಬೆಂಗಳೂರು: ವೈಯುಕ್ತಿಕ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕೋರ್ಟ್ ಕಲಾಪದ ಅವಧಿ ವ್ಯರ್ಥ ಮಾಡಬಾರದೆಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಇಂತಹಾ ಅರ್ಜಿ ಸಲ್ಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಒಂದು ವರ್ಗದ ಜನರ ಸೇವೆಗಾಗಿ, ವೈಯುಕ್ತಿಕ ಉದ್ದೇಶಗಳಿಗೆ ಪಿಐಎಲ್ ಗಳನ್ನು ಸಲ್ಲಿಸಬಾರದೆಂದು ಹೇಳಿದ್ದಾರೆ.
ಇಂತಹಾ ಸಮಯದಲ್ಲಿ ಅರ್ಜಿದಾರರು ಕಾನೂನುಬದ್ದವಾದ ಬೇರೆ ಮಾರ್ಗ ಅನುಸರಿಸಬೇಕೆಂದು ನ್ಯಾಯಾಲಯ ಅರ್ಜಿದಾರರಿಗೆ ತಿಳಿ ಹೇಳಿದೆ.
ಮಂಗಳೂರು ನಗರದ ಮಾಜಿ ಶಾಸಕ ಮೊಯಿನುದ್ದೀನ್ ಬಾವಾ ಅವರ ಪತ್ನಿ ಹೆಸರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಆರೊಪಿಸಿ ಸಲಿಕೆಯಾಗಿದ್ದ ಪಿಐಎಲ್ ಅರ್ಜಿ ವಜಾಗೊಳಿಸಿದ ನ್ಯಾಯಾಲಯ ಈ ಮೇಲಿನಂತೆ ಅಭಿಪ್ರಾಯಪಟ್ಟಿದೆ.
ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಸಲ್ಲಿಸಿದ್ದ ಈ ಅರ್ಜಿಯಲ್ಲಿ ಬಾವಾ ಪತ್ನಿ ನಗೀನಾ ಇಡ್ಯ ಗ್ರಾಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.