ಹಾವೇರಿ: ಜಿಲ್ಲೆಯ ಹಲವು ಭಾಗಗಳಲ್ಲಿ ಪರಿಸರ ಅಭಿವೃದ್ಧಿ ಹೊಂದಲು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತೆ ಮಾಧುರಿ ಜಾನ್ ದೇಧೋರ್ ಪ್ರಮುಖ ಕೊಡುಗೆ ನೀಡಿದ್ದಾರೆ, ಪರಿಸರ ಸಂರಕ್ಷಣೆ ಮಾಡುವುದನ್ನು ಪ್ರೋತ್ರಾಹಿಸಲು ತಳ ಮಟ್ಟದಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಹಲವು ವರ್ಷಗಳ ಕಾಲ ಮಾಡಿದ್ದಾರೆ.
ಅಕ್ಕಾಮಹಾದೇವಿ ವಿವಿಯಿಂದ ಡಾಕ್ಟರೇಟ್ ಪಡೆದಿರುವ ಮಾಧುರಿ ಜನರಲ್ಲಿ ಪರಸರ ಸಂರಕ್ಷಣೆ ಕಾಳಜಿ ಮೂಡಿಸಲು ಬದ್ಧರಾಗಿದ್ದಾರೆ,. ವಿದ್ಯಾರ್ಥಿಗಳು ಹಾಗೂ ಯುವಕರು ಪರಸರ ಸಂರಕ್ಷಣೆ ಕಾಳಜಿಯಲ್ಲಿ ಹೆಚ್ಚು ಹೆಚ್ಚು ಪಾಲ್ಗೋಳ್ಳುವಂತೆ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ನದಿ ಕೆರೆ ಹಾಗೂ ಕಟ್ಟೆಗಳ ನೀರನ್ನು ರಕ್ಷಿಸುವಂತೆ ಜನರಿಗೆ ತಿಳಿಸಿದ್ದಾರೆ, ಇವರ ಮನೆಯ ಅಂಗಳದಲ್ಲಿ ಸುಮಾರು 200 ಜಾತಿಯ ಮರಗಳು ಬೆಳೆದು ನಿಂತಿವೆ, ಸಾಹಿತಿ ಶಿವರಾಮ ಕಾರಂತರ ಸಹೋದರ ಪರಿಸರ ವಾದಿ ಕೆ.ಎಲ್ ಕಾರಂತ್ ಅವರಿಂದ ಸ್ಪೂರ್ತಿಗೊಂಡಿದ್ದಾರೆ.