ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಬ್ಯಾಟರಿ ಚಾಲಿತ ಗಾಡ್, ಬಾಟಲಿ ಪುಡಿ ಮಾಡುವ ಯಂತ್ರ ಸೇವೆಗೆ ಚಾಲನೆ
ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗು ಅಂಗವಿಕಲರಿಗಾಗಿ ವಿಶೇಷ ಬ್ಯಾಟರಿ ಚಾಲಿತ ಗಾಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ರೈಲ್ವೆ ಅಧಿಕಾರಿ ಆರ್.ಎಸ್. ಸಕ್ಸೇನಾ ಹೇಳಿದ್ದಾರೆ. ಈ ಸೌಕರ್ಯ ಇದಾಗಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇದಾಗಲೇ ಲಭ್ಯವಿದೆ.
ಪರಿಸರ ದಿನಾಚರಣೆ ಭಾಗವಾಗಿ ಕೆಎಸ್ಆರ್ ನಿಲ್ದಾಣದ ಒಂದು ಪ್ಲಾಟ್ ಫಾರಮ್ ನಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಪುಡಿ ಮಾಡುವ ಯಂತ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಕ್ಸೇನಾ ಕಳೆದ ತಿಂಗಳಿನಿಂದ ಬೆಂಗಳೂರು ವಿಭಾಗದಲ್ಲಿ ಇಂತಹಾ ನಾಲ್ಕು ಯಂತ್ರಗಳು ಕಾರ್ಯಾಚರಿಸುತ್ತಿದೆ ಎಂದಿದ್ದಾರೆ.
8105777772 ಈ ಸಂಖ್ಯೆಗೆ ಕರೆ ಮಾಡುವ ಮೂಲಕ ದಿನ ಪೂರ್ತಿ ಈ ಸೇವೆಯನ್ನು ಯಾರೊಬ್ಬರೂ ಪಡೆಯಬಹುದಾಗಿದ್ದು ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಇಂತಹಾ ಏಳು ಗಾಡಿಗಳು ಕಾರ್ಯಾಚರಿಸುತ್ತಿದೆ. ಈ ಸೇವೆಗಾಗಿ ಸಾರ್ವಜನಿಕರು ರೈಡ್ ಒಂದಕ್ಕೆ 20 ರೂ. ನೀಡಬೇಕಾಗುತ್ತದೆ. ಈ ಗಾಡಿಯೊಂದಕ್ಕೆ ಒಟ್ಟು ವೆಚ್ಚ 4.5 ಲಕ್ಷ ರೂ. ತಗುಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಂತೆಯೇ ಬಾಟಲ್ ಪುಡಿ ಮಾಡುವ ಯಂತ್ರವನ್ನು ಬೆಂಗಳೂರಿನ ಕಂಟೋನ್ಮೆಂಟ್, ಕೆಆರ್ ಪುರಂ, ಯಶವಂತಪುರದಲ್ಲಿ ಸ್ಥಾಪಿಸಲಾಗಿದೆ.