ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು; 13 ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

13 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸರ್ಜಾಪುರದ ಬಳಿಯಿರುವ ಅತ್ತಿಬೆಲೆಯಲ್ಲಿ ನಡೆದಿದೆ...

ಬೆಂಗಳೂರು: 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸರ್ಜಾಪುರದ ಬಳಿಯಿರುವ ಅತ್ತಿಬೆಲೆಯಲ್ಲಿ ನಡೆದಿದೆ. 
ವೈಶಾಲಿ (13) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಇಂಡಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಬಿಲ್ಲಾಪುರ ಕ್ರಾಸ್ ಬಳಿಯಿರುವ ಹಾಸ್ಟೆಲ್ ನಲ್ಲಿ ನೆಲೆಸಿದ್ದಳು. 
ಕಳೆದ ರಾತ್ರಿ ಹಾಸ್ಟೆಲ್ ರೂಮಿನಲ್ಲಿದ್ದ ವೈಶಾಲಿ, ಬೆಳಿಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ವೈಶಾಲಿ ಸ್ನೇಹಿತೆಯರು ಹಾಸ್ಟೆಲ್ ವಾರ್ಡೆನ್'ಗೆ ವಿಷಯ ತಿಳಿಸಿದ್ದಾರೆ. ಬಳಿಕ ವೈಶಾಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 
ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿನಿ ತಾಯಿ ಸುಗುಣ ಅವರು, ವೈಶಾಲಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಇದರಿಂದಲೇ ಆಕೆ ಸಾವನ್ನಪ್ಪಿರಬಹುದು ಎಂದಿರುವ ಅವರು ಹಾಸ್ಟೆಲ್ ಸಿಬ್ಬಂದಿ, ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಯಾವುದೇ ರೀತಿಯ ಆರೋಪಗಳನ್ನು ಮಾಡಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹತ್ಯೆಯಾಗಿ 4 ತಿಂಗಳ ಬಳಿಕ ಖಮೇನಿ ಅಂತ್ಯಕ್ರಿಯೆಗೆ ಇರಾನ್ ಸಿದ್ಧತೆ: ಶವಪೆಟ್ಟಿಗೆ ಪ್ರದರ್ಶನ; ಇಷ್ಟು ದಿನ ಎಲ್ಲಿತ್ತು ಶರೀರ?

ಶ್ರೀರಂಗಪಟ್ಟಣದಲ್ಲಿ 200 ಎಕರೆ ಭೂಕಬಳಿಕೆ ಬಯಲಿಗೆಳೆದ ಲೋಕಾಯುಕ್ತ; 9 ಜನರ ಬಂಧನ, ADLR ಅಧಿಕಾರಿ ಮೊಹಮ್ಮದ್ ಪರಾರಿ!

ವೈಭವ್ ಸೂರ್ಯವಂಶಿಗೆ ಜಾಸ್ತಿ ಹೈಪ್ ಕೊಡಬೇಡಿ: ಕಪಿಲ್ ದೇವ್ ಹೀಗೆ ಹೇಳಿದ್ಯಾಕೆ ಗೊತ್ತಾ?

ಬೆಂಗಳೂರು: ಸರ್ಜಾಪುರ ಸಮೀಪ, ನಿರ್ಜನ ರಸ್ತೆಯಲ್ಲಿ ಬೈಕ್ ಜೊತೆ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಕಾರಣ ನಿಗೂಢ!

ಬೆಂಗಳೂರು: ಡೇಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ; ಇಬ್ಬರು ದಾದಿಯರ ಬಂಧನ