ರಾಜ್ಯ

ಹಿಂದೂಗಳಿಗೆ ಮಾತ್ರ ಕೆಲಸ ಮಾಡುವೆ, ಮಸ್ಲಿಮರು ನನ್ನ ಕಛೇರಿಗೆ ಬರೋದು ಬೇಡ: ವಿಜಯಪುರ ಶಾಸಕ ಯತ್ನಾಳ್

Raghavendra Adiga
ವಿಜಯಪುರ: "ನನ್ನ ಕಛೇರಿಗೆ ಬುರ್ಖಾಧಾರಿಗಳು ಬರುವುದು ಬೇಡ. ಟೋಪಿಧಾರಿಗಳು ಬರುವುದೂ ಬೇಡ. ನಾನು ಚುನಾವಣೆಗೆ ಮುನ್ನವೇ ಮುಸ್ಲಿಮರು ನನಗೆ ವೋಟ್ ಆಹುವುದು ಬೇಡ ಎಂದೂ ಹೇಳಿದ್ದೆ" ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದು ಈ  ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಜೂನ್ 4ರಂದು ಸಿದ್ಧೇಶ್ವರ ಕಲಾಭವನದಲ್ಲಿ ನಡೆದ ಶಿವಾಜಿ ಮಹಾರಾಜರ ಕುರಿತಾಗಿನ ಸಮಾರಂಭದ ವೇದಿಕೊಯಂದರಲ್ಲಿ ಮಾತನಾಡಿದ ಶಾಸಕ ಯತ್ನಾಳ್‌ ಈ ರೀತಿ ಪ್ರಚೋದನಾಕಾರಿ ಹೇಳಿಕೆ ನಿಡಿದ್ದು ಸಾರ್ವಜನಿಕರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಸಕರು ತಮ್ಮ ಭಾಷಣದಲ್ಲಿ "ಹಿಂದೂಗಳಿಗೆ ಮಾತ್ರವೇ ಕೆಲಸ ಮಾಡಿಕೊಡಿ, ಬೇರಾರಿಗೂ ಅಲ್ಲ ಎಂದು ಮಹಾನಗರ ಪಾಲಿಕೆ ಸದಸ್ಯರಿಗೂ ತಾಖೀತು ಮಾಡಿದ್ದೆ, ಚುನಾವಣೆಗೆ ಮುನ್ನವೇ ನಾನು ಮುಸ್ಲಿಮರ ಮುಖ ನೋಡಬಾರದು ಎಂದು ಶಪಥ ಮಾಡಿದ್ದೆ. ಅವರು ನನಗೆ ವೋಟ್ ಮಾಡುವುದು ಬೇಡ ಎಂದೂ ಹೇಳಿದ್ದೆ.ವಿಜಯಪುರದಲ್ಲಿ ನನಗೆ ವೋಟ್ ಹಾಕಿದವರಿಗೆ ಮಾತ್ರ ನಾನು ಕೆಲಸ ಮಾಡಿಕೊಡುತ್ತೇನೆ." ಎಂದಿದ್ದಾರೆ.
ಅಲ್ಲದೆ ಶಾಸಕರು "ಯಾವುದೇ ಮುಸ್ಲಿಮರು ಹಿಂದೂ ವ್ಯಾಪಾರಿಗಳಿಗೆ ತೊಂದರೆ ನೀಡಿದ್ದರೆ ಅಂಥಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ." ಎಂದು ಎಚ್ಚರಿಸಿದ್ದಾರೆ.
ತಮ್ಮ ಹೇಳಿಕೆ ಸಂಬಂಧ ಪ್ರಶ್ನೆ ಕೇಳಿದ ಮಾದ್ಯಮದವರ ಮೇಲೆ ಹರಿಹಾಯ್ದ ಶಾಸಕ ಯತ್ನಾಳ್ "ಹಿಂದೂ ಪರವಾಗಿ  ಮಾತನಾಡುವುದು ತಪ್ಪೆ? ಓವೈಸಿ ಬಂದು ದೇಶದ್ರೋಹದ ಹೇಳಿಕೆ ನಿಡಿದರೆ ಅದು ಸರಿ, ನಾನು ಮಾತನಾಡುವುದು ತಪ್ಪಾಗುತ್ತದೆಯೆ?" ಎಂದು ಪ್ರಶ್ನಿಸಿದ್ದಾರೆ.
"ನನ್ನ ಸಮಾಜಕ್ಕೆ ಅನ್ಯಾಯವಾಗುತ್ತಿದೆ, ಹಫ್ತಾ ವಸೂಲ್, ದೌರ್ಜನ್ಯ ನಡೆಯುತ್ತಲಿದೆ.ಮೊದಲು ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ" ಅವರು ನುಡಿದರು.
SCROLL FOR NEXT