ರಾಜ್ಯ

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 100 ಮಕ್ಕಳು ಮರು ಸೇರ್ಪಡೆ

Sumana Upadhyaya

ಬೆಂಗಳೂರು: ಯಲಹಂಕ ಹತ್ತಿರ ಆವಲಹಳ್ಳಿಯಲ್ಲಿ ಕೂಲಿ ಕಾರ್ಮಿಕರ ಮಗಳಾಗಿರುವ ಪ್ರಿಯಾ(10 ವರ್ಷ) 3ನೇ ತರಗತಿ ಕಳೆದ ನಂತರ ಶಾಲೆ ಬಿಟ್ಟಿದ್ದಳು. ನನ್ನ ತಾಯಿ ಮತ್ತು ನಾನು ಶಿಕ್ಷಣ ಮುಂದುವರಿಸಬೇಕಂದಿದ್ದೆವು. ಆದರೆ ತಂದೆ ಶಾಲೆ ಬಿಡಿಸಿಬಿಟ್ಟರು ಎನ್ನುತ್ತಾಳೆ.

ಕೆಲಸ ಹುಡುಕಿಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ಬಂದ 10 ವರ್ಷದ ಭಾಗೇಶ್ ಅನಿವಾರ್ಯವಾಗಿ ಶಾಲೆ ಬಿಡಬೇಕಾಗಿ ಬಂತು. 3 ವರ್ಷ ಶಾಲೆಗೆ ಹೋಗಿರಲಿಲ್ಲ. ಆತನ ಪೋಷಕರು ಕೂಡ ಕೂಲಿ ಕಾರ್ಮಿಕರು.

ಇದೀಗ ಪ್ರಿಯಾ ಮತ್ತು ಭಾಗೇಶ್ ಮತ್ತೆ ಶಾಲೆಗೆ ಸೇರಿದ್ದಾರೆ. ಅದಕ್ಕೆ ಕಾರಣ ಸರ್ಕಾರೇತರ ಸಂಘಟನೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಬಲಿತ ಸಂಘಟನೆಯೊಂದರ ಸದಸ್ಯರು ಬಂದು ಈ ಮಕ್ಕಳ ಪೋಷಕರ ಮನವೊಲಿಸಿದ್ದಾರೆ. ಈ ಮಕ್ಕಳಿಗೆ ಸ್ಪರ್ಷ ಎಂಬ ಸರ್ಕಾರೇತರ ಸಂಘಟನೆಯ ಆಶ್ರಯದಲ್ಲಿ 9 ತಿಂಗಳು ಅನೌಪಚಾರಿಕ ಶಿಕ್ಷಣ ನೀಡಲಾಗುತ್ತದೆ.

ಈ ಆಶ್ರಯ ನಿಲಯವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತ ವೈ ಮರಿಸ್ವಾಮಿ ಉದ್ಘಾಟಿಸಿದರು. ನಮ್ಮ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಅವರನ್ನು ಮತ್ತೆ ಶಾಲೆಗೆ ಕರೆತರಬೇಕಾದ ಕೆಲಸ ಆಗಬೇಕಿದೆ ಎನ್ನುತ್ತಾರೆ.
ಸರ್ಕಾರೇತರ ಸಂಘಟನೆ ರಕ್ಷಿಸಿ ಕರೆದುಕೊಂಡು ಬಂದ ಮಕ್ಕಳು ಭಿಕ್ಷೆ ಬೇಡುವುದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನುತ್ತಾರೆ ಸಂಘಟನೆಯ ಕಾರ್ಯಕ್ರಮ ಸಮನ್ವಯಕ ಮಂಜುನಾಥ್

SCROLL FOR NEXT