ರಾಜ್ಯ

ಆಹಾರ-ಮದ್ಯಕ್ಕೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಹೊಟೇಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಬಂದ್!

Vishwanath S
ಹುಬ್ಬಳ್ಳಿ: ಹೊಟೇಲ್ ಹಾಗೂ ಬಾರ್ ಸಿಬ್ಬಂದಿ ಮೇಲಿನ ಹಲ್ಲೆಗಳನ್ನು ಖಂಡಿಸಿ ಹೋಟೇಲ್ ಮಾಲೀಕರ ಅಸೋಸಿಯೇಷನ್ ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಬಂದ್ ಗೆ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ನಗರಗಳಲ್ಲಿ ಆಹಾರ ಹಾಗೂ ಮದ್ಯಪಾನಕ್ಕಾಗಿ ಸಾರ್ವನಿಕರು ಪರದಾಡುವಂತಾಗಿದೆ. 
ಕಳೆದ ಮೂರು ತಿಂಗಳಿನಲ್ಲಿ ಅವಳಿ ನಗರಗಳಲ್ಲಿ ಬಾರ್ ಹಾಗೂ ಹೊಟೇಲ್ ಸಿಬ್ಬಂದಿ ಮೇಲೆ ಸುಮಾರು 96 ಹಲ್ಲೆ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಇತ್ತೀಚೆಗಷ್ಟೇ ಬಸವವನದ ಹೊಟೇಲ್ ಒಂದರಲ್ಲಿ ಬಿರಿಯಾನಿ ಆಹಾರ ನೀಡಿದ್ದಕ್ಕೆ ಕೆಲ ಗ್ರಾಹಕರು ಹೊಟೇಲ್ ಮಾಲೀಕ, ಮ್ಯಾನೇಜರ್ ಹಾಗೂ ಇತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು ಇದನ್ನು ಖಂಡಿಸಿ ಅಸೋಸಿಯೇಷನ್ ಇಂದು ಬಂದ್ ಗೆ ಕರೆ ನೀಡಿದೆ. 
ಹುಬ್ಬಳ್ಳಿ ಹೊಟೇಲ್ ಮಾಲೀಕರ ಅಸೋಸಿಯೇಷನ್ ನ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರು ಹೊಟೇಲ್ ಹಾಗೂ ಬಾರ್ ಸಿಬ್ಬಂದಿಯ ಮೇಲಿನ ಹಲ್ಲೆಗೆ ಇತ್ತೀಚೆಗೆ ನಡೆದ ಹೊಟೇಲ್ ಸಿಬ್ಬಂದಿ ಮೇಲಿನ ಹಲ್ಲೆ ಇದಕ್ಕೆ ತಾಜಾ ಉದಾಹರಣೆ. ಇಂತಹ ಹಲವು ಪ್ರಕರಣಗಳು ಅವಳಿ ನಗರಗಳಲ್ಲಿ ನಡೆದಿವೆ. ಸಾಮಾಜಿಕ ವಿರೋಧಿ ಅಂಶಗಳಿಂದ ಅವಳಿ ನಗರದಲ್ಲಿನ ಹೊಟೇಲ್ ಹಾಗೂ ಬಾರ್ ಮಾಲೀಕರು ವ್ಯಾಪಾರ ನಡೆಸುವುದೇ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. 
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು 500 ಹೊಟೇಲ್ ಮತ್ತು ರೆಸ್ಟೋರೆಂಟ್, 180 ಬಾರ್ ಮತ್ತು ರೆಸ್ಟೋರೆಂಟ್, 250 ಬೇಕರಿಗಳು ಮತ್ತು 4 ಸಾವಿರಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳು ಬಂದ್ ಗೆ ಕೈಜೋಡಿಸಿದ್ದಾರೆ.
SCROLL FOR NEXT