ಸಾಂದರ್ಭಿಕ ಚಿತ್ರ 
ರಾಜ್ಯ

ಫೇಸ್ ಬುಕ್ ನಲ್ಲಿ ಟ್ರಾವೆಲ್ ಸ್ಟೇಟಸ್ ಅಪ್ ಡೇಟ್: ಗಂಡಾಂತರ ತಂದಿಟ್ಟುಕೊಂಡ ಬೆಂಗಳೂರು ಮಹಿಳೆ!

ಆರ್ ಟಿ ನಗಗರ ನಿವಾಸಿಯೊಬ್ಬರು ಫೇಸ್ ಬುಕ್ ನಲ್ಲಿ ತಮ್ಮ ಪ್ರಯಾಣದ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಸಮಸ್ಯೆ ತಂದಿಟ್ಟುಕೊಂಡಿದ್ದಾರೆ....

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನಿಮ್ಮ ರಜೆಯ ವಿಷಯಗಳನ್ನು ಅಪ್ ಡೇಟ್ ಮಾಡುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸಿ.
ಆರ್ ಟಿ ನಗಗರ ನಿವಾಸಿಯೊಬ್ಬರು ಫೇಸ್ ಬುಕ್ ನಲ್ಲಿ ತಮ್ಮ  ಪ್ರಯಾಣದ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಸಮಸ್ಯೆತಂದಿಟ್ಟುಕೊಂಡಿದ್ದಾರೆ. 
ಆರ್ ಟಿ ನಗರ ಪ್ರೇಮಲತಾ ಎಂಬುವರು ತಮ್ಮ ಸಹೋದರ ಲೋಹಿತ್ ನೊಂದಿಗೆ  ವಾಸಿಸುತ್ತಿದ್ದಾರೆ. ರಜೆಯ ನಿಮಿತ್ತ ಅವರು ತಮ್ಮ ಕುಟುಂಬಸ್ಥರೊಂದಿಗೆ ತಮಿಳುನಾಡಿನ ದೇವಾಲಯಗಳಿಗೆ ತೆರಳಿದ್ದರು. ಈ ವೇಳೆ ಅವರು ಫೇಸ್ ಬುಕ್ ನಲ್ಲಿ  ತಾವು ಯಾವ್ಯಾವ ಸ್ಥಳಗಳಿಗೆ ಭೇಟಿ ನಿಡಿದ್ದರ ಬಗ್ಗೆ ಸ್ಟೇಟಸ್ ಅಪ್ ಡೇಟ್ ಮಾಡಿದ್ದರು.  
ಪ್ರವಾಸ ಮುಗಿಸಿ ಭಾನುವಾರ ರಾತ್ರಿ ಸುಮಾರು 2 ಗಂಟೆ ವೇಳೆಗೆ ಮನಗೆ ಬಂದಾಗ ಅವರಿಗೆ ಆಘಾತ ಕಾದಿತ್ತು, ಯಾರೋ ಮನೆ ಬಾಗಿಲು ಮುರಿದು, ಮನೆಯಲ್ಲಿದ್ದ  ಹಣ, ಒಡವೆ ಹಾಗೂ ದ್ವಿ ಚಕ್ರ ವಾಹನವನ್ನು ಕದ್ದೊಯ್ದಿದ್ದಾರೆ.
ಈ ಸಂಬಂಧ ಪ್ರೇಮಲತಾ, ಸೋಮವಾರ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, 5 ಲಕ್ಷ ಮೌಲ್ಯದ ಚಿನ್ನಾಭರಣ, 57 ಸಾವಿರ ರು ನಗದು ಕಳ್ಳತನವಾಗಿದೆ, ತಮ್ಮ ಫೇಸ್ ಬುಕ್ ಸ್ಚೇಟಸ್ ನೋಡಿ ತಾವಿಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆಕೆ ಶಂಕಿಸಿದ್ದಾರೆ, 
ನೆರೆಮನೆಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸುತ್ತಿಲ್ಲದಿರುವುದು ಕಳ್ಳರಿಗೆ ಸಹಾಯವಾಗಿದೆ,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ಮನೆಯ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾ ಗ್ರಾಂ ಬಳಕೆದಾರರು ತಮ್ಮ ವಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಜಾಗೃತರಾಗಿರಬೇಕು,. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT