ಸಾಂದರ್ಭಿಕ ಚಿತ್ರ 
ರಾಜ್ಯ

ಉತ್ತರ ಕರ್ನಾಟಕದ ಗನ್ ಮಾಫಿಯಾದ ಕರಾಳ ಮುಖ ತೋರಿಸುವ ಗೌರಿ ಲಂಕೇಶ್ ಹತ್ಯೆ

ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ಭೇದಿಸುತ್ತಾ ಹೋದಂತೆ ತನಿಖಾಧಿಕಾರಿಗಳಿಗೆ ಉತ್ತರ ...

ಹುಬ್ಬಳ್ಳಿ: ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ಭೇದಿಸುತ್ತಾ ಹೋದಂತೆ ತನಿಖಾಧಿಕಾರಿಗಳಿಗೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ವಿಜಯಪುರ, ಹುಬ್ಬಳ್ಳಿಗಳಲ್ಲಿ ಶಸ್ತ್ರಾಸ್ತ್ರ ಮಾಫಿಯಾಯ ಕರಾಳ ಮುಖವನ್ನು ತೆರೆದುಕೊಳ್ಳುತ್ತದೆ. ಹಲವು ದಶಕಗಳವರೆಗೆ ವಿಜಯಪುರದಲ್ಲಿ ಗ್ಯಾಂಗ್ ನಾಯಕರು ಮಹಾರಾಷ್ಟ್ರದ ಕಳ್ಳಸಾಗಣೆದಾರರನ್ನು ಶಸ್ತ್ರಾಸ್ತ್ರ ಪೂರೈಕೆಗೆ ಅವಲಂಬಿಸಿಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಜಯಪುರ ಮತ್ತು ಇಂಡಿ ತಾಲ್ಲೂಕಿನ ಸ್ಥಳೀಯರು ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಸುವ ಉದ್ಯಮದಲ್ಲಿ ತೊಡಗಿದ್ದಾರೆ.

ರಾಜ್ಯದ ಅನೇಕ ಕೊಲೆ ಕೇಸುಗಳು ನಾಡಪಿಸ್ತೂಲ್ ಗಳ ಮೂಲಕ ನಡೆಯುತ್ತಿವೆ. ವಿಜಯಪುರ ಮತ್ತು ಇಂಡಿ ಭಾಗಗಳಲ್ಲಿ ಈ ಪಿಸ್ತೂಲ್ ಮಾರಾಟಗಾರರು ಸಕ್ರಿಯವಾಗಿದ್ದಾರೆ ಎನ್ನುತ್ತಾರೆ ಪೊಲೀಸರು. ಇವರು ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕಗಳಿಂದ ದೇಶಿ ನಿರ್ಮಿತ ಪಿಸ್ತೂಲ್ ಗಳನ್ನು ಖರೀದಿಸುತ್ತಾರೆ. ಇವರು ದೊಡ್ಡ ದೇಶದ ವಿವಿಧ ಭಾಗಗಳಿಂದ ಪಿಸ್ತೂಲ್ ನ್ನು ಭಾರೀ ಪ್ರಮಾಣದಲ್ಲಿ ಖರೀದಿಸುವವರಾಗಿದ್ದಾರೆ. ಡಜನ್ ಗಟ್ಟಲೆ ಪಿಸ್ತೂಲ್ ಗಳನ್ನು ಖರೀದಿಸುವ ವಿಜಯಪುರದ ವ್ಯಾಪಾರಿಗಳು ಪ್ರತಿ ಪಿಸ್ತೂಲ್ ಗೆ 15ರಿಂದ 20 ಸಾವಿರದವರೆಗೆ ನೀಡಿ ಅದನ್ನು 60 ಸಾವಿರಕ್ಕೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಪೊಲೀಸರು.

ಇತ್ತೀಚಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಪರವಾನಗಿ ಹೊಂದಿದ ಗನ್ ಮಾಲಿಕರಿಗೆ ತಮ್ಮ ಪಿಸ್ತೂಲ್ ಗಳನ್ನು ಪೊಲೀಸರಿಗೆ ನೀಡುವಂತೆ ಸೂಚಿಸಲಾಗಿತ್ತು. ನಂತರ ಪೊಲೀಸರು ಕೆಲವು ಕಡೆಗಳಲ್ಲಿ ದಾಳಿ ನಡೆಸಿದ್ದ ಸಂದರ್ಭದಲ್ಲಿ ಹಲವು ನಾಡಪಿಸ್ತೂಲ್ ಗಳು ಸಿಕ್ಕಿವೆ. ಕೌಟುಂಬಿಕ ಕಲಹ, ವಿವಾದ, ಕೊಲೆ, ಗ್ಯಾಂಗ್ ವಾರ್ ಮತ್ತು ಮನೆ ಕಳ್ಳತನಕ್ಕೆ ಸಂಬಂಧಪಟ್ಟಂತೆ ಪಿಸ್ತೂಲ್ ಗಳನ್ನು ಇರಿಸಲಾಗಿದೆ ಎನ್ನುತ್ತಾರೆ ಪೊಲೀಸರು.

ಪಿಸ್ತೂಲ್ ಕಳ್ಳಸಾಗಣೆದಾರರು ಸುಪಾರಿ ಹಂತಕರಾಗಿ ಬದಲಾದ ಉದಾಹರಣೆಗಳಿವೆ. ಒಬ್ಬ ವ್ಯಕ್ತಿ ಯಾರನ್ನಾದರೂ ಕೊಲ್ಲಲು ಅಥವಾ ತನ್ನ ಭದ್ರತೆಗೆ ಪಿಸ್ತೂಲ್ ನ್ನು ಇಟ್ಟುಕೊಂಡಿರಬಹುದು. ಹಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ತನಗೆ ಹಗೆಯಿರುವ ವ್ಯಕ್ತಿಯನ್ನು ಕೊಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದಾಗ ಅಥವಾ ಆತನಿಂದ ಬೆದರಿಕೆ ಬಂದಾಗ ಆಗ ಕಳ್ಳಸಾಗಣೆದಾರರಿಗೆ ಕೆಲಸ ಮಾಡಿಕೊಡಲು ಹೇಳಬಹುದು. ಇದೆಲ್ಲದಕ್ಕೂ ಬಹಳ ಖರ್ಚಾಗುತ್ತದೆ. ಹೀಗಾಗಿ ಗೌರಿ ಲಂಕೇಶ್ ಹತ್ಯೆ ಮತ್ತು ಎಂ ಎಂ ಕಲ್ಬುರ್ಗಿ ಹತ್ಯೆ ಕೇಸಿನಲ್ಲಿ ನಾಡಪಿಸ್ತೂಲ್  ವ್ಯಾಪಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಪೊಲೀಸರು ಹೇಳುತ್ತಾರೆ.

ಕಳೆದ ಆರು ತಿಂಗಳಲ್ಲಿ ಪೊಲೀಸರು ರೌಡಿ ಶೀಟರ್ ಗಳು ಪೆರೇಡ್ ನಿಲ್ಲಬೇಕೆಂದು ಕಡ್ಡಾಯ ಮಾಡಿದ್ದರು. ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಸಹಿ ಮಾಡುವಂತೆ ಕೂಡ ಹೇಳಲಾಗಿತ್ತು. ಇಂತಹ ಕ್ರಮಗಳು ಭೀಮಾ ನದಿ ತೀರದಲ್ಲಿ ಅಪರಾಧಗಳ ಸಂಖ್ಯೆಯನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT