ಭೀಮಾತೀರ ಹತ್ಯೆ ಪ್ರಕರಣ: ಪಿಎಸ್​ಐ ಗೋಪಾಲ ಹಳ್ಳೂರಗೆ ನ್ಯಾಯಾಂಗ ಬಂಧನ 
ರಾಜ್ಯ

ಭೀಮಾತೀರ ಹತ್ಯೆ ಪ್ರಕರಣ: ಪಿಎಸ್​ಐ ಗೋಪಾಲ ಹಳ್ಳೂರಗೆ ನ್ಯಾಯಾಂಗ ಬಂಧನ

ಭೀಮಾತೀರದ ಗಂಗಾಧರ್​ ಹತ್ಯೆ ಪ್ರಕರಣದ ಸಂಬಂಧ ಆರೋಪಿಯಾಗಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಅವರ ಬಂಧನವಾಗಿದೆ.

ವಿಜಯಪುರ:  ಭೀಮಾತೀರದ ಗಂಗಾಧರ್​ ಹತ್ಯೆ ಪ್ರಕರಣದ ಸಂಬಂಧ ಆರೋಪಿಯಾಗಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಅವರ ಬಂಧನವಾಗಿದೆ.
ಸಿಐಡಿ ಮತ್ತು ಸ್ಥಳೀಯ ಪೋಲೀಸ್ ಅಧಿಕಾರಿಗಳು ಗೋಪಾಲ ಹಳ್ಳೂರ ಅವರನ್ನು ಬಂಧಿಸಿ  ವಿಜಯಪುರ ಜಿಲ್ಲೆ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ವಾದ ಪ್ರತಿವಾದಗಳನ್ನು ಆಲಿಸಿ ಜೂನ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನ್ಯಾಯಾಲಯದ ಸೂಚನೆ ಮೇರೆಗೆ ಪಿಎಸ್‌ಐ ಗೋಪಾಲ ಹಳ್ಳೂರ ಅವರನ್ನು ವಿಜಯಪುರ  ಕೇಂದ್ರ ಕಾರಾಗೃಹದಲ್ಲಿಡಲಾಗಿದೆ. ಇದೇ ವೇಳೆ ಪೇದೆಗಳಾದ ಜಾದವ್, ನಾಯಕ್​​ವಾಡಿ ಮತ್ತು ರೂಗಿ ಸಹ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಡಿವೈಎಸ್​ಪಿ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರು ಮಾಡಿತ್ತು.
2017 ಆಕ್ಟೋಬರ್ 31 ರಂದು ಪಿಎಸ್​ಐ ಗೋಪಾಲ ಹಳ್ಳೂರ ನೇತೃದಲ್ಲಿ ಪೊಲೀಸರು- ರೌಡಿಗಳ ಮಧ್ಯ ನಡೆದ ಗುಂಡಿನ ಚಕಮಕಿಯಲ್ಲಿ ಭೀಮಾ ತೀರದ ರೌಡಿ ಧರ್ಮರಾಜ ಚಡಚಣ ಸಾವನ್ನಪ್ಪಿದ್ದಾರೆ. ಇದೇ ಕೆಲ ದಿನಗಳ ಅಂತರದಲ್ಲಿ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದು ಈ ಆರೋಪದ ಮೇಲೆ ಚಡಚಣದ ಹಿಂದಿನ ಪಿ.ಎಸ್.ಐ. ಗೋಪಾಲ ಹಳ್ಳೂರ ಸೇರಿದಂತೆ ಮೂವರು ಪೇದೆಗಳ ವಿರುದ್ಧ ಸಾಕ್ಷಿಗಳು ಸಿಕ್ಕಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!