ಸವಣೂರು: ಹಳೆ ದ್ವೇಷದಿಂದ ದಂಪತಿ ಕೊಲೆ, ಆರೋಪಿ ಬಂಧನ 
ರಾಜ್ಯ

ಸವಣೂರು: ಹಳೆ ದ್ವೇಷದಿಂದ ದಂಪತಿ ಕೊಲೆ, ಆರೋಪಿ ಬಂಧನ

ದಂಪತಿಗಳಿಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಸವಣೂರಿನ ಹತ್ತಿ ಮತ್ತೂರ ಗ್ರಾಮದಲ್ಲಿ ನಡೆದಿದೆ.

ಸವಣೂರು: ದಂಪತಿಗಳಿಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಸವಣೂರಿನ ಹತ್ತಿ ಮತ್ತೂರ ಗ್ರಾಮದಲ್ಲಿ ನಡೆದಿದೆ.
ಶನಿವಾರ ಬೆಳಗಿನ ಜಾವ ನಡೆದ ಈ ದುರಂತದಿಂದ ಇಡೀ ಗ್ರಾಮ ಬೆಚ್ಚಿ ಬಿದ್ದಿದೆ. ಮಾರ್ತಾಂಡಪ್ಪ ಫಕೀರಪ್ಪ ಬಾರಕೇರ (36) ಹಾಗೂ ಪತ್ನಿ ಸುಧಾ(24) ಮೃಅತರಾಗಿದ್ದು ಗ್ರಾಮದ ಕೊಟೇಪ್ಪ ಮಲ್ಲಪ್ಪ ಅಂಬಿಗೇರ ಈ ಕೃತ್ಯ ಎಸಗಿದ್ದಾನೆ. ಅಪರಾಧ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಪ್ರಕರಣವೇನು?
ಸಧ್ಯ ಕೊಲೆಯಾಗಿರುವ ಮಾರ್ತಾಂಡಪ್ಪ ವರ್ಷದ ಹಿಂದೆ ಆರೋಪಿ ಕೊಟೇಪ್ಪ ಅಂಬಿಗೇರ ಪತ್ನಿಯನ್ನು ಅತ್ಯಾಚಾರ ಮಾಡಿ ದೈಹಿಕವಾಗಿ ಹಿಂಸಿಸಿದ್ದ. ಆ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳು ದ್ವೇಷ ತಾಳಿದ್ದವು.ಇದೇ ದ್ವೇಷವು ಇಂದು ಎರಡು ಜೀವಗಳ ಬಲಿಗೆ ಕಾರಣವಾಗಿದೆ.
ಕೊಲೆ ನಂತರ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ಕೋಟೆಪ್ಪನ ಕಾರು ವಿದ್ಯುತ್ ಕಂಬಕ್ಕೆ ಗುದ್ದಿದೆ, ಮಾರ್ಗ ಬದಲಿಸುವ ಯತ್ನದಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕುವ ಭಯದಿಂದ ಓಡುತ್ತಿದ್ದ ಆರೋಪಿ ಎದುರಾದ ಪೋಲೀಸ್ ಜೀಪ್ ನಲ್ಲಿದ್ದ ಆರಕ್ಷಲರಿಗೆ ಶರಣಾಗಿದ್ದಾನೆ. ಇಬ್ಬರು ವ್ಯಕ್ತಿಗಳು ಸೇರಿ ಕೊಲೆ ಮಾಡಿದ್ದಾರೆನ್ನಲಾಗಿದ್ದು ಈಗ ಒಬ್ಬನ ಬಂಧನವಾಗಿದೆ.
"ಕೊಲೆಯಾದ ಮಾರ್ತಾಂಡಪ್ಪ ಫಕೀರಪ್ಪ ಬಾರಕೇರನಿಂದ ನನ್ನ ಸಂಸಾರ ಹಾಳಾಗಿದೆ.ನನ್ನ ಪತ್ನಿ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ ನನ್ನಂತೆ ಹಲವು ಕುಟುಂಬಗಳ ಶಾಂತಿ ಭಂಗಕ್ಕೆ ಅವನು ಕಾರಣನಾಗಿದ್ದ. ಅವನಿಂದ ನಾನೂ ಆತ್ಮಹತ್ಯೆಗೆ ಮುಂದಾದದ್ದಿದೆ, ಆದರೆ ನಾನು ಸಾಯುವ ಮುನ್ನ ಅವನನ್ನು ಕೊಲ್ಲಬೇಕೆಂದು ನಿರ್ಧರಿಸಿದೆ ಎಂದು ಆರೋಪಿ ಕೋಟೆಪ್ಪ ಅಂಬಿಗೇರ ಪೋಲೀಸರಿಗೆ ಹೇಳಿಕೆ ನಿಡಿದ್ದಾನೆ. 
ಸ್ಥಳಕ್ಕೆ ಹೆಚ್ಚುವರಿ ಎಸ್​ಪಿ ಲಕ್ಷ್ಮೀಗಣೇಶ ಆರ್., ಸವಣೂರ ಸಿಪಿಐ ಜಗನ್ನಾಥರೆಡ್ಡಿ, ಹಾವೇರಿ ಹಾಗೂ ಸವಣೂರ ವಿಭಾಗದ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?