ಬೆಂಗಳೂರು: ಮಾಜಿ ಸಚಿವ ಮುನಿಯಪ್ಪ ಮನೆ ಎದುರು ಇಬ್ಬರು ಆತ್ಮಹತ್ಯೆಗೆ ಯತ್ನ! 
ರಾಜ್ಯ

ಬೆಂಗಳೂರು: ಮಾಜಿ ಸಚಿವ ಮುನಿಯಪ್ಪ ಮನೆ ಎದುರು ಇಬ್ಬರು ಆತ್ಮಹತ್ಯೆಗೆ ಯತ್ನ!

ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಜಮೀನು ಕಳಬಿಸಿದ್ದಾರೆಂದು ಆರೋಪಿಸಿ ಇಬ್ಬರು ಸಹೋದರರು ಮುನಿಯಪ್ಪ ಅವರ ಮನೆಯ ಎದುರು ಮೈ ಮೇಲೆ ಪೆಟ್ರೋಲ್...

ಬೆಂಗಳೂರು: ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಜಮೀನು ಕಳಬಿಸಿದ್ದಾರೆಂದು ಆರೋಪಿಸಿ ಇಬ್ಬರು ಸಹೋದರರು ಮುನಿಯಪ್ಪ ಅವರ ಮನೆಯ ಎದುರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. 
ರಾಜು ಹಾಗೂ ಮುನಿರಾಜು ಆತ್ಮಹತ್ಯೆಗೆ ಯತ್ನಿಸಿದ ಸಹೋದರರಾಗಿದ್ದಾರೆಂದು ತಿಳಿದುಬಂದಿದೆ. 
ಜಮೀನು ಕಬಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನಿಯಪ್ಪ ಅವರು, ತಮಗೂ ಹಾಗೂ ಈ ಜಮೀನು ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದು. ಹುದ್ದೆ ಕೈತಪ್ಪುವಂತೆ ಮಾಡುವ ಸಲುವಾಗಿ ನನ್ನ ವಿರುದ್ಧ ಈ ರೀತಿಯ ಷಡ್ಯಂತ್ರ ನಡೆಸಲಾಗಿದೆ ಎಂದು ಮುನಿಯಪ್ಪ ಅವರು ತಿಳಿಸಿದ್ದಾರೆ. 
ಯಲಹಂಕ ಸಮೀಪದ ವೆಂಕಟಾಲ ಬಳಿ ರಾಜು ಮತ್ತು ಮುನಿರಾಜು ಅವರು ಸುಮಾರು ರೂ.20 ಕೋಟಿ ಬೆಲೆ ಬಾಳುವ 1.5 ಎಕರೆ ಜಮೀನನ್ನು ಹೊಂದಿದ್ದರು. ಸಂಸದರು ಹಾಗೂ ಅವರ ಬೆಂಬಲಿಗರು ನಕಲಿ ದಾಖಲೆ ಸೃಷ್ಟಿಸಿ 2007ರಲ್ಲಿ ಅದನ್ನು ಕೋಲಾರದ ರಾಮ್ ಪ್ರಸಾದ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆಂಬುದು ಇಬ್ಬರು ಸಹೋದರರ ಆರೋಪವಾಗಿದೆ. 
ರಾಜು ಮತ್ತು ಮುನಿರಾಜು ಭಾನುವಾರ ಬೆಳಿಗ್ಗೆ 20 ಮಂದಿಯೊಂದಿಗೆ ಸಂಜಯನಗರದಲ್ಲಿರುವ ಸಚಿವ ಮನೆಗೆ ತೆರಳಿದ್ದರು. ಈ ವೇಳೆ ಏಕಾಏಕಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಗಲಾಟೆ ಮಾಡುತ್ತಿದ್ದರು. ಗಲಾಟೆ ಶಬ್ಧ ಕೇಳಿ ಮುನಿಯಪ್ಪ ಅವರು ಹೊರಗೆ ಬಂದಿದ್ದಾರೆ. ಈ ವೇಳೆ ಸಹೋದರರಿಬ್ಬರೂ ಬೆಂಕಿ ಹಚ್ಚಿಕೊಳ್ಳಲು ಯತ್ನ ನಡೆಸಿದ್ದಾರೆ. ಬಳಿಕ ಮುನಿಯಪ್ಪ ಅವರೇ ಸಹೋದರರು ಹಾಗೂ ಬೆಂಬಲಿಗರನ್ನು ಸಮಾಧಾನಪಡಿಸಿದ್ದಾರೆಂದು ತಿಳಿದುಬಂದಿದೆ. 
ಕೆ.ವಿ.ರಾಮಪ್ರಸಾದ್ ಅವರು ನಮ್ಮ ಭೂಮಿಯನ್ನು ಕಬಳಿಸಲು ಕಳೆದ 11 ವರ್ಷಗಳಿಂದಲೂ ಯತ್ನ ನಡೆಸುತ್ತಿದ್ದರು. ನಮ್ಮ ಬಳಿ ಅಸಲಿ ಕಾಳೆಗಳಿದ್ದು, ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗಲು ನಮಗೆ ಕಿರುಕುಳ ನೀಡುತ್ತಲೇ ಇದ್ದಾರೆ. ಹೀಗಾಗಿ ನಾವು ಮುನಿಯಪ್ಪ ಅವರ ನಿವಾಸದ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದೆವು ಎಂದು ಮುನಿಯಪ್ಪ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್