ಬೆಂಗಳೂರು: 2018ನೇ ಸಾಲಿನ ಸ್ಪಚ್ಛ ಸರ್ವೆಕ್ಷಣಾ ಸಮೀಕ್ಷೆಯಲ್ಲಿ ರಾಜಧಾನಿ ಬೆಂಗಳೂರು ಕಳೆದ ಬಾರಿಯಿದ್ದ 210 ನೇ ಸ್ಥಾನದಿಂದ 216 ನೇ ಸ್ಥಾನಕ್ಕೆ ಕುಸಿದಿದ್ದು, ಸಾಂಸ್ಕೃತಿಕ ನಗರಿ ಮೈಸೂರು 8 ನೇ ಸ್ಥಾನ ಪಡೆದುಕೊಂಡಿದೆ.
ಸ್ವಚ್ಛ ಭಾರತ ಆಂದೋಲನ ಅಂಗವಾಗಿ ಸಮೀಕ್ಷೆ ನಡೆಸಿ ಕ್ರಮಾಂಕ ನೀಡಲಾಗಿದೆ. 1 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಮೈಸೂರು 8 ನೇ ಸ್ಥಾನ ಗಳಿಸಿದೆ. ಮಂಗಳೂರು 52 ಸ್ಥಾನ ಪಡೆದುಕೊಂಡಿದೆ. 2015ರ ಸರ್ವೆಯಲ್ಲಿ ಮೈಸೂರು ನಂಬರ್ 1 ಸ್ಥಾನ ಪಡೆದುಕೊಂಡಿತ್ತು. ಕಳೆದ ಬಾರಿ 5 ನೇ ಸ್ಥಾನದಲ್ಲಿತ್ತು. ಕಳೆದ ಬಾರಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಮಧ್ಯಪ್ರದೇಶದ ಇಂದೂರು ಈ ಬಾರಿಯೂ ಪ್ರಥಮ ಸ್ಥಾನದಲ್ಲಿದೆ.
ಘನ ತ್ಯಾಜ್ಯ ನಿರ್ವಹಣೆ, ಮಲಿನ ಕೆರೆ ಮತ್ತಿತರ ಕಾರಣಗಳಿಂದ ಬೆಂಗಳೂರು 4 ಸಾವಿರ ಅಂಕಗಳ ಪೈಕಿ 2, 001.98 ಅಂಕಗಳನ್ನು ಪಡೆದುಕೊಂಡಿದೆ. ದೇಶದ 4, 203 ನಗರಗಳಲ್ಲಿ ಸರ್ವೆ ನಡೆಸಲಾಗಿದ್ದು, ಮೊದಲ 500 ನಗರಗಳ ಪೈಕಿ ಕರ್ನಾಟಕದ 26 ನಗರಗಳು ಸೇರಿವೆ. ಘನ ತ್ಯಾಜ್ಯ ನಿರ್ವಹಣೆ, ನೀರು ಪೋಲು ಮತ್ತು ತ್ಯಾಜ್ಯ ನಿರ್ವಹಣೆ, ನಗರ ಯೋಜನೆ, ಸಂವಹನ ಯೋಜನೆ ಮತ್ತಿತರ ಅಂಶಗಳ ಆಧಾರದ ಮೇಲೆ ಕ್ರಮಾಂಕ ನೀಡಲಾಗಿದೆ.
1 ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳ ಪೈಕಿ ಮಹಾರಾಷ್ಟ್ರದ ಪಂಚಗಾನಿ ಮೊದಲ ಸ್ಥಾನದಲ್ಲಿದೆ. ಗರಿಷ್ಠ 4 ಸಾವಿರದ ಪೈಕಿ 3, 184 ಅಂಕವನ್ನು ಇದು ಪಡೆದುಕೊಂಡಿದೆ. ಅತ್ಯುತ್ತಮ 100 ಪಟ್ಟಣಗಳ ಪೈಕಿ ಕರ್ನಾಟಕದ ಪಿರಿಯಾಪಟ್ಟಣ 43 ನೇ ಸ್ಥಾನ ಪಡೆದುಕೊಂಡಿದೆ .
ಇತರ ಮೆಟ್ರೋ ನಗರಗಳಿಗೆ ಹೋಲಿಸಿದ್ದರೆ, ಬೆಂಗಳೂರು ಬೆಂಗಳೂರು ಕೊನೆಯ ಸ್ಥಾನದಲ್ಲಿದೆ. ನವದೆಹಲಿ, (4) ಗ್ರೇಟರ್ ಮುಂಬಯಿ (18) ಗ್ರೇಟರ್ ಹೈದಾರಾಬಾದ್ (27 )ಚೆನ್ನೈ 100ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos