ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒಳಗೊಂಡ ಕಿರು ಪುಸ್ತಕವೊಂದನ್ನು ಹೊರ ತರಲು ತೀರ್ಮಾನಿಸಿದ್ದಾರೆ.
ಸುಮಾರು 45 ಪುಟಗಳ ಈ ಪುಸ್ತಕದಲ್ಲಿ ತಮಿಳಿಗೆ ಭಾಷಾಂತರಿಸಿ, ಅದನ್ನು ತಮಿಳುನಾಡು ಸಚಿವರಿಗೆ, ಶಾಸಕರಿಗೆ, ಸಂಸದರಿಗೆ ಹಾಗೂ ಪ್ರತಿಪಕ್ಷ ನಾಯಕರಿಗೆ ಉಚಿತವಾಗಿ ನೀಡಲು ಸಿಎಂ ನಿರ್ಧರಿಸಿದ್ದಾರೆ.
ಆದರೆ ಸಿಎಂ ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕಾಲಾವಕಾಶ ನೀಡದೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಿದ್ದರಿಂದ ರಾಜ್ಯಕ್ಕೆ ಆಗಬಹುದಾದ ಸಾಧಕ-ಬಾಧಕ ಕುರಿತು ಪುಸ್ತಕದಲ್ಲಿ ಮಾಹಿತಿ ಇರಲಿದೆ. ಈ ಮೂಲಕ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಉದ್ದೇಶವಿದೆ ಎನ್ನಲಾಗಿದೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿರ್ದೇಶನದಂತೆ ಸಿಎಂ ಕುಮಾರಸ್ವಾಮಿ ಅವರು ಈ ಪುಸ್ತಕ ಹೊರತರಲು ನಿರ್ಧರಿಸಿದ್ದು,15-20 ದಿನಗಳಲ್ಲಿ ಈ ಪುಸ್ತಕ ಹೊರ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾವೇರಿ ನದಿಯ ಇತಿಹಾಸ, ನೀರಿನ ಪ್ರಮಾಣ, ವಿವಾದ, ನ್ಯಾಯ ಮಂಡಳಿ ತೀರ್ಪು, ಸುಪ್ರೀಂಕೋರ್ಟ್ ಅಂತಿಮ ತೀರ್ಪು, ನೀರು ನಿರ್ವಹಣಾ ಮಂಡಳ ರಚನೆ, ಕಾನೂನು ಹೋರಾಟಗಳ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿರುತ್ತದೆ.
ಯಾವ ಪಕ್ಷ ಆಡಳಿತದಲ್ಲಿದ್ದಾಗ ರಾಜ್ಯಕ್ಕೆ ಅನ್ಯಾಯ -ಅನುಕೂಲವಾಗಿದೆ. ಕಾಲಾನುಕ್ರಮದಲ್ಲಿ ನದಿ ನೀರು ಬಳಕೆ ಸಂಬಂಧ ಆಯಾ ಸರ್ಕಾರಗಳ ನಿಲುವು, ರಾಜ್ಯದ ಜನತೆ, ರೈತರು ಎದುರಿಸಿದ್ದ ಸಂಕಷ್ಟಗಳ ಮಾಹಿತಿ ಇರಲಿದೆ. ಆದರೆ, ಇದರಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos