ರಾಜ್ಯ

ಕಲಬುರಗಿ: 75 ಶಾಲೆಗಳಲ್ಲಿ ಇರುವುದು ಒಬ್ಬೊಬ್ಬರೇ ಶಿಕ್ಷಕರು!

Shilpa D
ಕಲಬುರಗಿ: ರಾಜ್ಯದಲ್ಲಿರುವ ಏಕ ಶಿಕ್ಷಕ ಶಾಲೆಗಳನ್ನು ಮುಚ್ಚಬೇಕೆಂಬ ಪ್ರಸ್ತಾವನೆ ಅನುಷ್ಠಾನಕ್ಕೆ ಬಂದರೇ ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ನಿಲುಕದನಕ್ಷತ್ರವಾಗಿಯೇ ಉಳಿಯುತ್ತದೆ. 
ಈ ಭಾಗದಲ್ಲಿರುವ ಸುಮಾರು 75 ಶಾಲೆಗಳಲ್ಲಿ ಸುಮಾರು 100 ವಿದ್ಯಾರ್ಥಿಗಳಿದ್ದು, ಆ ಶಾಲೆಗಳಿಗೆ ಒಬ್ಬರೇ ಒಬ್ಬರು ಖಾಯಂ  ಶಿಕ್ಷಕರಿದ್ದಾರೆ.
ಬೀದರ್, ಕಲಬುರಗಿ ಯಾದಗಿರಿ, ಕೊಪ್ಪಳ, ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಲ್ಲಿರುವ ಈ ಶಾಲೆಗಳು 2017-18ನೇ ಸಾಲಿನಲ್ಲಿಯೂ ಏಕ ಶಿಕ್ಷಕರನ್ನೇ ಹೊಂದಿದೆ. 
ಮಾಹಿತಿಗಳ ಪ್ರಕಾರ ಈ ಭಾಗದಲ್ಲಿ ಯಾದಗಿರಿಯ. ಶೋರಾಪುರ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 16 ಶಾಲೆಗಳಲ್ಲಿ ಖಾಯಂ ಏಕ ಶಿಕ್ಷಕರಿದ್ದಾರೆ, ಶಹಾರಪುರದಲ್ಲಿ 8 ಹಾಗೂ ಯಾದಗಿರಿಯಲ್ಲಿ 1 ಶಾಲೆ ಇದೆ.
ಕಲಬುರಗಿಯ ಜೇವರ್ಗಿ ತಾಲೂಕಿನ ಚಿತ್ತಾಪುರ ಮತ್ತು ಚಿಂಚೋಳಿಗಳಲ್ಲಿ ತಲಾ ಎರೆಡರೆಡು, ಅಪ್ಜಲಪುರ ಮತ್ತು ಆಳಂದ ತಾಲೂಕಿನಲ್ಲಿ ತಲಾ ಒಂದೊಂದು, ರಾಯಚೂರು ಜಿಲ್ಲೆಯಲ್ಲಿ  7 ರಾಯಚೂರಿನಲ್ಲಿ 4 ಮತ್ತು ಲಿಂಗಸಗೂರಿನಲ್ಲಿ 2 ಶಾಲೆಗಳಿವೆ.
ಕೊಪ್ಪಳದಲ್ಲಿ  3, ಬಳ್ಳಾರಿಯ ಸಿರಗುಪ್ಪದಲ್ಲಿ 5, ಸಂಡೂರು ಹೊಸಪೇಟೆ ಮತ್ತು ಬಳ್ಳಾರಿತಾಲೂಕುಗಳಲ್ಲಿ ತಲಾ ಒಂದೊಂದು ಶಾಲೆಗಳಿವೆ, 40:1 ಅನುಪಾತದಲ್ಲಿ  ಶಿಕ್ಷಕರನ್ನು ನೇಮಿಸಬೇಕೆಂಬ ಸರ್ಕಾರದ ಆದೇಶವಿದೆ.  ಆದರೆ ಅತಿಥಿ ಶಿಕ್ಷಕರನ್ನು ಇಲ್ಲಿ ಫಿಕ್ಸ್ ಮಾಡಿಲ್ಲ,
ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅವಕಾಶವಿದೆ, ಕಲೆವು ಏಕ ಶಿಕ್ಷಕ ಶಾಲೆಗಳಲ್ಲಿ ಈಗಾಗಲೇ ನೇಮಕ ಮಾಡಲಾಗಿದೆ ಎಂದು ಸಂಸ್ಕಾರ ಪರಿಸ್ಥಾನಿ ನಿರ್ದೇಶಕವಿಥಲ್ ಚಿಕಾನಿ ಹೇಳಿದ್ದಾರೆ.
SCROLL FOR NEXT