ಹುಬ್ಬಳ್ಳಿ : ಪ್ರತ್ಯೇಕ ಲಿಂಗಾಯಿತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರಿಂದ ಮಾತಾ ಮಹಾದೇವಿ , ರಂಭಾಪುರಿ ಶ್ರೀಗಳಂತ ಕೆಲ ಸ್ವಾಮೀಜಿಗಳು ತಮ್ಮ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿದೆ ಎಂದು ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗ ಹಂಗಾಮಿ ಸಭಾಪತಿ ಸ್ಥಾನದಲ್ಲಿದ್ದು, ಲಿಂಗಾಯಿತ ಪ್ರತ್ಯೇಕತಾ ಧರ್ಮ ವಿವಾದ ಅಥವಾ ಸಮಾವೇಶಗಳಲ್ಲಿ ಪಾಲ್ಗೊಳ್ಳುವುದಾಗಲೀ ಹೇಳಿಕೆ ನೀಡುವುದಿಲ್ಲ. ಜೆಡಿಎಸ್ ಕಾರ್ಯವೈಖರಿ ಬಗ್ಗೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಶಾಸಕ ಕೋನರೆಡ್ಡಿ ಮತ್ತಿತರ ಮುಖಂಡರು ಮಹದಾಯಿ ನದಿಗಾಗಿ ಹೋರಾಟ ನಡೆಸಿದ್ದರೂ ಗದಗ ಹಾಗೂ ಧಾರವಾಡ ಜಿಲ್ಲೆಯ ಜನರು ಜೆಡಿಎಸ್ ಪಕ್ಷವನ್ನು ಗೆಲ್ಲಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಮಧ್ಯೆ ಕುಮಾರಸ್ವಾಮಿ ಹೊಸ ಬಜೆಟ್ ಮಂಡಿಸುವುದರಲ್ಲಿ ತಪ್ಪೇನಿಲ್ಲಾ, ಶಿಕ್ಷಕರು ತಮ್ಮನ್ನು ಏಳು ಬಾರಿ ಗೆಲ್ಲಿಸಿದ್ದು, ಅವರ ಕಲ್ಯಾಣಕ್ಕಾಗಿ ಶ್ರಮಿಸುವುದಾಗಿ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics