ರಾಜ್ಯ

ತುರ್ತು ಪರಿಸ್ಥಿತಿ: ಸಿದ್ಧಾಂತಗಳು ಬೇರೆ ಬೇರೆ, ಆದರೆ ರಾಯಚೂರು ಜೈಲಿನಲ್ಲಿ ಒಗ್ಗೂಡಿಸಿದ ಹಸಿವು

Manjula VN
ರಾಯಚೂರು: ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ 1975 ಜೂನ್25 ರಂದು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಗೆ 43 ವರ್ಷಗಳಾಗಿವೆ. ಹತ್ಯೆಗಳು, ಹೋರಾಟ, ಪತ್ರಿಕಾ ಸ್ವಾತಂತ್ರ್ಯ, ರಾಜಕೀಯ ಅಶಾಂತಿ, ಕಾರ್ಯಾಂಗದಿಂದ ನ್ಯಾಯಾಂಗ ನಿಯಂತ್ರಣ, ದೌರ್ಜನ್ಯಗಳನ್ನು ನೆನಪಿಸುವ ಕರಾಳ ದಿನದ ನಡುವೆಯೂ ರಾಯಚೂರಿನಲ್ಲಿ ನಡೆದಿರುವ ಘಟನೆ ಹಲವರ ಹೃದಯಗಳನ್ನು ಗೆದ್ದಿದೆ. 
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತ ಸರ್ಕಾರ ಜಂಟಿ ಕಾರ್ಯದರ್ಶಿಯಾಗಿ ರಘುನಂದನ್ ಟಿ.ಆರ್ ಅವರು ಕಾರ್ಯನಿರ್ವಹಿಸಿದ್ದರು. 
ರಾಯಚೂರು ಜೈಲಿನಲ್ಲಿ ನಡೆದ ಘಟನೆಯೊಂದು ಎಲ್ಲರ ಹೃದಯವನ್ನು ಗೆದ್ದಿತ್ತು. ಅಂದು ನಡೆದ ಘಟನೆಯೊಂದನ್ನು ರಘುನಂದನ್ ಅವರ ಸಹೋದರಿ ರೇಣುಕಾ ವಿಶ್ವನಾಥ್ ಅವರು ಮೇ.7 2018 ರಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಇದು ಹಲವರ ಹೃದಯವನ್ನು ಗೆದ್ದಿದೆ.  
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ಮಾಡುತ್ತಿದ್ದ ಮೂವರನ್ನು ಅಧಿಕಾರಿಗಳು ರಾಯಚೂರು ಜಿಲ್ಲಾ ಕಾರಾಗೃಹದಲ್ಲಿರಿಸಿದ್ದರು. ಮೂವರೂ ಒಂದೊಂದು ಸಮುದಾಯಕ್ಕೆ ಸೇರಿದವರಾಗಿದ್ದರು. ಒಬ್ಬ ಸಂಘ ಪರಿವಾರಕ್ಕೆ ಸೇರಿದ್ದರೆ ಮತ್ತಿಬ್ಬರು ಜಮಾತ್ ಹಾಗೂ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದವರಾಗಿದ್ದರು ಎಂದು ರಘುನಂದನ್ ಅವರು ಹೇಳಿದ್ದರು. 
ಮೂವರನ್ನೂ ಕಾರಾಗೃಹದಲ್ಲಿರುವ ಒಂದು ಕೊಠಡಿಯಲ್ಲಿರಿಸಲಾಗಿತ್ತು. ಮೂವರಿಗೂ ತಮ್ಮ ತಮ್ಮ ಮನೆಗಳ ಆಹಾರವನ್ನು ಸೇವಿಸುವ ಹಕ್ಕನ್ನು ನೀಡಲಾಗಿತ್ತು. ಇದರೆ, ಆರ್'ಎಸ್ಎಸ್ ಹಾಗೂ ಜಮಾತ್ ಇಬ್ಬರಿಗೂ ಅವರ ಮನೆಯವರು ಆಹಾರವನ್ನು ತೆಗೆದುಕೊಂಡು ಬರುತ್ತಿದ್ದರು. ಆದರೆ, ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ ವ್ಯಕ್ತಿಯ ಮನೆಯವರು ಕಾರಾಗೃಹಕ್ಕೆ ಆಹಾರವನ್ನು ತೆಗೆದುಕೊಂಡು ಬರುತ್ತಿರಲಿಲ್ಲ. 
ಆರ್'ಎಸ್ಎಸ್ ವ್ಯಕ್ತಿಗೆ ಅವರ ಕುಟುಂಬಸ್ಥರು ಸಸ್ಯಾಹಾರವನ್ನು ಕೊಡುತ್ತಿದ್ದರು. ಜಮಾತ್ ವ್ಯಕ್ತಿಗೆ ನಿತ್ಯ ಮಾಂಸಾಹಾರ ಬರುತ್ತಿತ್ತು. ಪ್ರತೀನಿತ್ಯ ಕಮ್ಯುನಿಸ್ಟ್ ವ್ಯಕ್ತಿ ಹಸಿವಿನಿಂದ ಬಳಲುತ್ತಿರುವುದನ್ನು ನೋಡಿದ್ದ ಆರ್'ಎಸ್ಎಸ್ ಹಾಗೂ ಜಮಾತ್ ವ್ಯಕ್ತಿಗಳು ತಮಗೆ ಬರುತ್ತಿದ್ದ ಆಹಾರವನ್ನು ಕಮ್ಯುನಿಸ್ಟ್ ನಾಯಕನೊಂದಿಗೆ ಹಂಚಿಕೊಂಡು ಸೇವಿಸುತ್ತಿದ್ದರು ಎಂದು ಹೇಳಿರುವ ರೇಣುಕಾ ರಂಘುನಂದನ್ ಅವರು, ಸಿದ್ಧಾಂತಗಳಿಂದ ವಿಭಜನೆಗೊಂಡವರು ಹಸಿವಿನಲ್ಲಿ ಒಗ್ಗೂಡಿದರೂ ಎಂದು ಹೇಳಿಕೊಂಡಿದ್ದಾರೆ. 
SCROLL FOR NEXT