ರೋಹಿಣಿ ಸಿಂಧೂರಿ ಮತ್ತು ಮಾಜಿ ಸಚಿವ ಎ,ಮಂಜು,
ಹಾಸನ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಮುಂದುವರಿಯುವಂತೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರಕಾರ ಸೂಚನೆ ನೀಡಿದೆ. ಪ್ರಬಲ ಮರಳು ಮಾಫಿಯಾ ಹಾಗೂ ರಾಜಕಾರಣಿಗಳ ವಿರುದ್ಧ ಯುವ ಎಎಎಸ್ ಅಧಿಕಾರಿಗೆ ಸಿಕ್ಕ ಜಯವಾಗಿದೆ.
2017ರ ಜುಲೈ 14 ರಂದು ರೋಹಿಣಿ ಸಿಂಧೂರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕಮಾಡಲಾಗಿತ್ತು. ಅಧಿಕಾರ ವಹಿಸಿಕೊಂಡ ತಕ್ಷಣ ರೋಹಿಣಿ ಮರಳು ಮಾಫಿಯಾ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಹೇಮಾವತಿ ನದಿ ದಂಡೆಯ ಸಕಲೇಶಪುರ ಬೇಲೂರು ಮತ್ತ ಆಲೂರು ಪ್ರದೇಶಗಳಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೇ ನಡೆದಿತ್ತು. ಅಕ್ರಮ ಮರಳು ಮಾಫಿಯಾದವರಿಗೆ ರೋಹಿಣಿ ತಲೆ ನೋವಾಗಿ ಪರಿಣಣಿಸಿದರು.
ರೋಹಿಣಿ ಕಾರ್ಯವೈಖರಿ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಸೇರಿದಂತೆ ಸ್ಥಳೀಯ ರಾಜಕಾರಣಿಗಳ ಆಕ್ರೋಶಕ್ಕೆ ಕಾರಣವಾಯಿತು. ಸಿದ್ದರಾಮಯ್ಯ ಸರ್ಕಾರ ಜನವರಿ 22, 2018 ರಂದು ಅವರನ್ನು ಹಾಸನದಿಂದ ಹೊರಹಾಕಿತು. ಆದರೆ ರೋಹಿಣಿ ಕೈಕಟ್ಟಿ ಕೂರಲಿಲ್ಲ, ಅವಧಿಪೂರ್ವ ವರ್ಗಾವಣೆ ವಿರುದ್ಧ ಕಾನೂನು ಸಮರಕ್ಕೆ ನಿಂತರು. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಯಿತು.
ಸಚಿವ ಮಂಜು ಮತ್ತು ರೋಹಿಣಿ ನಡುವಿನ ಭಿನ್ನಾಭಿಪ್ರಾಯ ವಿಶ್ವ ಪ್ರಸಿದ್ಧ ಶ್ರವಣಬೆಳಗೊಳದ ಮಹಾ ಮಸ್ತಾಕಾಭಿಷೇಕದ ವರೆಗೂ ಬಂದಿತು. ರಾಜಕಾರಣಿ ಮತ್ತು ಅಧಿಕಾರಿಯ ಜಗಳದಿಂದಾಗಿ ಆಕೆಯನ್ನು ವರ್ಗಾವಣೆ ಮಾಡುವಂತೆ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು,
ಮಹಾ ಮಸ್ತಾಕಾಭಿಷೇಕಕ್ಕೆ ಶ್ರವಣ ಬೆಳಗೊಳಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ವೇಳೆ ಜಿಲ್ಲಾಧಿಕಾರಿ ಖುದ್ದು ಬಂದು ಸ್ವಾಗತಿಸಬೇಕಿತ್ತು, ಆದರೆ ರೋಹಿಣಿ ಇದಕ್ಕೆ ಗೈರಾಗಿದ್ರು. ಹೀಗಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾಕ್ಕಾಗಿ ಅವರ ವಿರುದ್ಧ ವರದಿ ನೀಡುವಂತೆ ಶೋಕಾಸ್ ನೊಟೀಸ್ ನೀಡಲಾಗಿತ್ತು, ಆದರೆ ಯಾವುದೇ ನೋಟೀಸ್ ಬಂದಿಲ್ಲ ಎಂದು ರೋಹಿಣಿ ಹೇಳಿದ್ದಾರೆ.
ಇನ್ನೂ ಕಳೆದ ವಿಧಾನ ಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಸಚಿವ ಎ.ಮಂಜು ವಿರುದ್ಧ ರೋಹಿಣಿ ಕೇಸ್ ದಾಖಲು ಮಾಡಿದ್ದು ರಾಷ್ಟ್ರೀಯ ಚಾನೆಲ್ ಗಳಲ್ಲಿ ಸುದ್ದಿಯಾಗಿತ್ತು. ತಮ್ಮ ಪರಿವೀಕ್ಷಣಾ ಬಂಗಲೆ ಹಾಗೂ ಕಚೇರಿಯನ್ನು ಫೆಬ್ರವರಿ 30 ರಂದು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಕ್ಕೆ ವಿವರಣೆ ಕೋರಿದ್ದರು.
ಈ ಪ್ರಕರಣ ರಾಜಕೀಯ ಆಯಾಮಾ ಪಡೆಯಿತು. ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡ ಮತ್ತು ಅವರ ಪುತ್ರ ಎಚ್,ಡಿ ರೇವಣ್ಣ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಹರಿಹಾಯ್ದರು, ರೋಹಿಣಿ ವರ್ಗಾವಣೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಚುನಾವಣೆಯಲ್ಲಿ ಮಂಜು ಸೋತರು. ರಾಜಕೀಯ ಲಾಭಕ್ಕಾಗಿ ಮಂಜು ಪ್ರಕರಣವನ್ನು ಬಳಸಿಕೊಂಡ ಜೆಡಿಎಸ್ ಈಗ ಸಮ್ಮಿಶ್ರ ಸರ್ಕಾರಪ ಪಾಲುದಾರ ಪಕ್ಷವಾಗಿದೆ.
ಹೈಕೋರ್ಟ್ ಆದೇಶದ ಬಗ್ಗೆ ಸಚಿವ ಎಚ್.ಡಿ ರೇವಣ್ಣ ಪ್ರತಿಕ್ರಿಯಿಸಲು ನಿಕಾಕರಿಸಿದ್ದಾರೆ. ಇನ್ನೂ ಹೈಕೋರ್ಟ್ ನಿರ್ಧಾರಕ್ಕೆ ರಾಜ್ಯದ ಜನತೆ ಹರ್, ವ್ಯಕ್ತ ಪಡಿಸಿದ್ದಾರೆ.
ಪ್ರಕರಣದ ವಿವರ: 2017ರ ಜುಲೈ 12 ರಂದು ರೋಹಿಣಿ ಅವರನ್ನು ಹಾಸನಕ್ಕೆ ವರ್ಗಾವಣೆ ಮಾಡಲಾಗಿತ್ತು ಎರಡೂವರೆ ವರ್ಷದ ಸೇವೆಯ ಹೊರತಾಗಿಯೂ ಆಕೆ ನಾಗರಿಕ ಸೇವೆಯಲ್ಲಿ ಹಾಸನ ಜನತೆಯ ವಿಶ್ವಾಸಕ್ತೆ ಪಾತ್ರರಾಗಿದ್ದರು. ರಾಜಕೀಯ ಕಾರಣಗಳಿಗಾಗಿ ಆಕೆಯನ್ನುಪ ಜನವರಿ 22 2018 ರಲ್ಲಿ ಆಕೆಯನ್ನು ವರ್ಗಾಯಿಸಲಾಯಿತು. ಮರಳು ಮಾಫಿಯಾಗೆ ಬ್ರೇಕ್ ಹಾಕಿದ್ದೆ ಆಕೆಯ ವರ್ಗಾವಣೆಗೆ ಕಾರಣವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics