ಚಿಕ್ಕೋಡಿ(ಬೆಳಗಾವಿ): ಏಳೇಳು ಜನ್ಮಕ್ಕೂ ಇಂಥ ಹೆಂಡಿತಿ ಮಾತ್ರ ನನಗೆ ಬೇಡ ದೇವರೆ ಅಂತಾ ವ್ಯಕ್ತಿಯೊಬ್ಬ ವಟ ಸಾವಿತ್ರಿ ವ್ರತ ಆಚರಣೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್. ಡಿ. ಕಾಲೇಜು ಮೈದಾನದ ಆವರಣದಲ್ಲಿ ಇರುವ ಅತ್ತಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಂದಿನ ಜನ್ಮದಲ್ಲಿ ತನಗೆ ಒಳ್ಳೆಯ ಹೆಂಡತಿ ಸಿಗಲಿ ಎಂದು ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸಿ ಹಲವು ಸುತ್ತು ನೂಲನ್ನು ಕೂಡ ಸುತ್ತಿ ವಿನೂತನವಾಗಿ ವಟ ಸಾವಿತ್ರಿ ವ್ರತ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ 2-3 ವರ್ಷಗಳಿಂದ ಚಿಕ್ಕೋಡಿ ಪಟ್ಟಣದಲ್ಲಿ ಪುರುಷ ಸಾಂತ್ವನ ಕೇಂದ್ರ ಪ್ರಾರಂಭಿಸಿರುವ ಶಶಿಧರ ಕೋಪರ್ಡೆ ಎಂಬುವವರು ಇಂತಹ ವಿನೂತನ ವೃತ ಆಚರಣೆ ಮಾಡಿದ್ದಾರೆ.
ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನದಂದು ಗೃಹಿಣಿಯರು ತಮ್ಮೆಲ್ಲ ಮನೋಕಾಮನೆಗಳನ್ನು, ದೀರ್ಘ ಸೌಮಾಂಗ್ಯ ಪ್ರಾಪ್ತಿಗಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸುವುದು ಸಾಮಾನ್ಯ.
ಚಿಕ್ಕೋಡಿ ಪಟ್ಟಣದಲ್ಲಿ ಪುರುಷ ಸಾಂತ್ವನ ಕೇಂದ್ರ ಪ್ರಾರಂಭಿಸಿರುವ ಶಶಿಧರ ಕೋಪರ್ಡೆ ಎಂಬುವರು ವಟ ಸಾವಿತ್ರಿ ವ್ರತ ಆಚರಣೆ ಮಾಡಿದ್ದಾರೆ.